ಶೃಂಗೇರಿ ಪ್ರಕರಣ ಸಂಘಟನೆಗಳದ್ದಲ್ಲ ಅದು ಕುಡುಕನ ಕೃತ್ಯ : ಆರೋಪಿ ಬಂಧನ

ಚಿಕ್ಕಮಗಳೂರು: ಶೃಂಗೇರಿ ಪಟ್ಟಣದಲ್ಲಿ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಧಾರ್ಮಿಕ ಚಿತ್ರಗಳಿರುವ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮನೋಹರ ಎಂಬವರ ಪುತ್ರ ಮಿಲಿಂದ್ ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಬ್ಯಾನರ್ ಪತ್ತೆಯಾದ ನಂತರ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಪ್ರತಿಭಟನೆ ನಡೆಸಿತ್ತು.ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಹಕಾಯ್ ಅಕ್ಷಯ್ ಮಚೀಂದ್ರ, ಶೃಂಗೇರಿ ಪಟ್ಟದಲ್ಲಿ ಬುಧವಾರ ರಾತ್ರಿ ಶಂಕರಾಚಾರ್ಯ ಮೂರ್ತಿ ಮೇಲೆ ಬಾವುಟ ಹಾಕಿದ್ದಾರೆಂಬ ಆರೋಪ ಸುಳ್ಳು, ಅದು ಬಾವುಟವೇ ಅಲ್ಲ. ಅದು ಕುಡುಕನೊಬ್ಬನ ಕೃತ್ಯವಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದ್ದಾರೆ.  ಇದು ಕುಡುಕನೊಬ್ಬನ ಕೃತ್ಯವಾಗಿದ್ದು, ಘಟನೆಯ ಹಿಂದೆ ಯಾವುದೇ ಸಂಘಟನೆ, ಪಕ್ಷದ ಕೈವಾಡ ಇಲ್ಲ. ಆರೋಪಿ ಯಾವುದೇ ಸಂಘಟನೆ, ಪಕ್ಷದ ಕಾರ್ಯಕರ್ತನಲ್ಲ. ಇದು ಯಾವುದೇ ಪೂರ್ವ ನಿಯೋಜಿತ ಕೃತ್ಯವಲ್ಲ ಎಂದು ಹೇಳಿದರು.

 

Please follow and like us:
error