fbpx

ಶೂ ಖರೀದಿಸಲು 364 ರೂ ಕಳಿಸಿ ಫೇಸ್ಬುಕ್ ಪೋಸ್ಟ್ ಮಾಡಿದ್ದ ಇಂಜಿನಿಯರ್ ಗೆ ಕೇಜ್ರಿವಾಲ ನೀಡಿದ್ದ ಉತ್ತರವೇನು ಗೊತ್ತಾ?

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರನ್ನು ಅವಹೇಳಿಸಿ ಅವರಿಗೆ ಶೂ ಖರೀದಿಸಲು 364 Rs ಕಳಿಸಿ ಫೇಸ್ಬುಕ್ ಪೋಸ್ಟ್ ಮಾಡಿದ ಇಂಜಿನಿಯರ್ ಗೆ ಕೇಜ್ರಿವಾಲರು ನೀಡಿದ ಉತ್ತರ

ಪ್ರಿಯ ಇಂಜಿನಿಯರ್ ಗೆಳೆಯಾ..
“ತಾವು ಕಳಿಸಿದ ಹಣ ತಲುಪಿದೆ. ಅದರಲ್ಲಿ ಒಂದು ಜೊತೆ ಶೂ ಖರೀದಿಸಿದೆ.
ನಿಮಗೆ ತಿಳಿದಿರುವ ಹಾಗೆ ನಮ್ಮ ರೂಪಾಯಿ ಮೌಲ್ಯವು ಪಾತಾಳಕ್ಕೆ ಇಳಿದಿರುವೂದರಿಂದ 364 ರುಪಾಯಿಗೆ ಅಷ್ಟೇನೂ ಉತ್ತಮ ಶೂ ಸಿಗಲಿಲ್ಲ. ನಾನು ಆಫೀಸಿಗೆ ಶೂ ಉಪಯೋಗಿಸುವುದಿಲ್ಲ. ಹಾಗಾಗಿ ಬೆಳಗ್ಗೆ ಜಾಗಿಂಗ್ ಹೋಗುವಾಗ ಇದನ್ನು ಉಪಯೋಗಿಸುವೆ. ನಿಮ್ಮ ಸಹೃದಯಿ ಮನಸ್ಸಿಗೆ ಕೃತಜ್ಞತೆಗಳು. ನಿಮ್ಮಂತಹ ರಾಷ್ಟ್ರದ ಬಗ್ಗೆ ಚಿಂತಿಸುವ ಯುವಜನತೆ ನಮ್ಮ ರಾಷ್ಟ್ರದ ಬಲು ದೊಡ್ಡ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ನಮ್ಮ ರಾಷ್ಟ್ರದ ಪ್ರಧಾನಿ ವಿದೇಶಗಳಿಗೆ ತೆರಳಿ ಭಾರತದಲ್ಲಿ ಜನಿಸಿದ್ದು ಕೂಡ ಅಪಮಾನವಾಯಿತು ಎನ್ನುವಂತಹ ಮಾತುಗಳನ್ನು ಆಡುವುದು, ರಾಷ್ಟ್ರ ಗೀತೆಗೆ ಗೌರವ ಸಲ್ಲಿಸದೆ ನಡೆಯುವುದು, ಹೆಮ್ಮೆಯ ಬಾವುಟದ ಮೇಲೆ ಸಹಿ ಹಾಕುವುದನ್ನು ನೋಡಿಯೂ ನೋಡದಂತೆ ನಟಿಸಬಾರದು.

ಒಬ್ಬ ಮುಖ್ಯಮಂತ್ರಿಯ ಚಪ್ಪಲನ್ನು ಗುರುತು ಮಾಡಿದ ತಾವು 40.36% ಇರುವ ನಿರ್ಗತಿಕ ಮತ್ತು, ‘ಭಾರತದ ಸ್ವರ್ಗ’ ಎಂದು ಬಿಂಬಿಸುವ ಗುಜರಾತಿನಲ್ಲಿ ಕೂಡ 62.78 % ಜನರು ತಮ್ಮ ಪ್ರಾಥಮಿಕ ಕಾರ್ಯಗಳನ್ನು ಬಯಲು ಪ್ರದೇಶದಲ್ಲಿ ಮಾಡುವುದು, ದೈನಂದಿನ ಒಂದು ಹೊತ್ತಿನ ತುತ್ತಿಗಾಗಿ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುವುದು, ಭ್ರಷ್ಟಾಚಾರ ದಿನನಿತ್ಯ ನಡೆಯುವುದು, ಜಾತಿ ಮತದ ಹೆಸರಲ್ಲಿ ತಮ್ಮೊಳಗೆ ಜಗಳ ತಂದಿಕ್ಕಿ ISIS ನಂತಹ ಸಂಘಟನೆಗಳು ಮೊಳಕೆಯೊಡೆಯುವುದು, ಜೀವಿಸಲು ಅತ್ಯಗತ್ಯ ಸಾಮಾನುಗಳ ಬೆಲೆ ಗಗನಕ್ಕೆ ಏರುವುದು ಮಾತ್ರವಲ್ಲ ಸೈನಿಕರು ಸಾವನ್ನಪ್ಪುವುದು ಕಂಡಿಲ್ಲ ಎಂಬಂತೆ ತಾವು ನಟಿಸಬಾರದು.

ನಿಮಗಿದು ಗೊತ್ತೇ ?? ನಾನು ಕೂಡ ಒಬ್ಬ ಇಂಜಿನಿಯರ್ ನ ಮಗನಾಗಿದ್ದೇನೆ, ಅಲ್ಲದೆ IIT ಯವನೂ ಅಲ್ಲದೆ IRS, ಮತ್ತು ಒಬ್ಬ ಆದಾಯ ತೆರಿಗೆ ಉದ್ಯೋಗಸ್ತೆಯ ಪತಿಯಾಗಿದ್ದೇನೆ, ಆರ್ಥಿಕವಾಗಿ ಒಂದು ಉತ್ತಮ ಕುಟುಂಬ, ಆದರೂ ವಿದ್ಯಾಬ್ಯಾಸದಲ್ಲಿ ಮತ್ತು ಉದ್ಯೋಗದಲ್ಲಿ ನಾನು ಒಮ್ಮೆಯೂ ನಮ್ಮ ರಾಜಕೀಯ ನೇತಾರರನ್ನು ಅವರ ವೇಷದಲ್ಲಿ ಅಲ್ಲ ಅವರು ಮಾಡುವ ಕೆಲಸದಲ್ಲಿ ಗಮನ ನೀಡಿದವನಾಗಿದ್ದೇನೆ. ಇಂದಿರಾ ಗಾಂಧಿಯವರ ಬಿಳಿ ಕೂದಲೊ ದೇವೇಗೌಡರ ಕೂದಲಿಲ್ಲದ ತಲೆಯೋ ನನ್ನ ಗಮನಕ್ಕೆ ಬಂದಿಲ್ಲ, ಅಲ್ಲದೆ ಅವರು ನೇತಾರರಾಗಿರುವ ಸಮಯದಲ್ಲಿ ನಮ್ಮ ರಾಷ್ಟ್ರದ ಜನಜೀವನ ರೀತಿ ಹೇಗಿದೆ ಎಂಬುದರಲ್ಲಾಗಿತ್ತು ನನ್ನ ಗಮನ ಮತ್ತು ನೋಟ.

ಭಿಕ್ಷೆ ಬೇಡುವ ಮಕ್ಕಳು, ಅವರ ಪಾಲನೆಗಾಗಿ ಶರೀರ ಮಾರುವ ತಾಯಂದಿರು, ಆದಾಗ್ಯೂ ಬಡತನ ತಡೆಯಲಾರದೆ ಆತ್ಮಹತ್ಯೆ ನಡೆಸುವ ತಂದೆಯಂದಿರು, ನಮ್ಮ ದೇಶದ ಈ ವ್ಯವಸ್ಥೆಯಾಗಿದೆ ಬಲು ದೊಡ್ಡ ಅವಮಾನ ಎಂದು ಹೇಳಲು ನನಗೆ ನಿರಾಶೆ ಇದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ನಾನು ಚಿಂತಿಸಿದೆ.
ಅದಕ್ಕಾಗಿ ನಾನು ನನ್ನ ಉದ್ಯೋಗಕ್ಕೆ ರಾಜಿ ಕೊಟ್ಟೆ, ಜನರ ನಡುವೆ ಇಳಿದು ಕೆಲಸ ಮಾಡಿದೆ, ಅದರ ಪ್ರತಿಫಲ ತಿಳಿಯಲು ಆರಂಭಿಸಿತು, ಜನರು ನನ್ನೊಂದಿಗೆ ನಿಂತರು ಚುನಾವಣೆಯಲ್ಲಿ ಅವರು ನನ್ನ ಗುರುತನ್ನು ಪ್ರದರ್ಶಿಸಿದರು, ಇಂದು ನನಗೆ ಅವರ ಕನಸುಗಳನ್ನು ನನಸು ಗೊಳಿಸುವ ಕೆಲಸದಲ್ಲಿ ನಿರತನಾಗಿದ್ದೇನೆ ಆದೂದರಿಂದ ನಾನದನ್ನು ಮರೆತೆ, ಕೋಟ್ಟು ಸೂಟು ಕನ್ನಡಕ ಹಾಕಿ ಸುತ್ತಬೇಕು ಎಂದೂ ವಿದೇಶಗಳಲ್ಲಿ ಹೋಗಿ ಸೆಲ್ಫಿ ತೆಗೆಯಬೇಕೆಂದು.

ಇಂಜಿನಿಯರ್ ಆದಾಗ ನಿಮಗೆ ಮುಖ್ಯಮಂತ್ರಿಯರ ಚಪ್ಪಲ್ ಒಂದು ಕೊರತೆಯಾಗಿ ಕಂಡಿತು, ತಾವು ಅದಕ್ಕೆ ಪರಿಹಾರ ಕಂಡು ಹಿಡಿದಿರಿ ಮೊದಲಾಗಿ ಅದನ್ನು ನಾನು ಅಭಿನಂದಿಸುತ್ತೇನೆ.
ಆದರೆ ನಾನು ಇಂಜಿನಿಯರ್ ಆದಾಗ ನಮ್ಮ ರಾಷ್ಟ್ರದ ಏನೆಲ್ಲ ಕೊರತೆಗಳು ಎಂದು ನನ್ನ ಸ್ವರಾಜ್ ಎಂಬ ಪುಸ್ತಕದಲ್ಲಿದೆ, ಅದರಲ್ಲಿ ಹೇಳುವ ಕೊರತೆಗಳನ್ನ ಪರಿಹರಿಸಲು ನಿಮ್ಮ ಸಹಾಯ ಖಂಡಿತ ಬೇಕೆಂದು ನಿರೀಕ್ಷಿಸುತ್ತಾ..”

ನಿಮ್ಮವನೇ ಆದ ಅರವಿಂದ್ ಕೇಜ್ರಿವಾಲ್

ಒಳಿತನ್ನು ಹೇಳಲು ರಾಜಕೀಯ ನೋಡಬೇಕಾಗಿಲ್ಲ.

ಮೂಲ : ಮಲಯಾಳ
ಕನ್ನಡಕ್ಕೆ: ರಶೀದ್ ಅಬ್ದುಲ್ ಹಮೀದ್ (HA ) ಕಕ್ಕಿಂಜೆ

Please follow and like us:
error
error: Content is protected !!