ಶಿವಸೇನೆಯ ‘ಮೈತ್ರಿ’ ಕನಸಿಗೆ ತಣ್ಣೀರೆರಚಿದ ಶರದ್ ಪವಾರ್

ಮುಂಬೈ, : ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ಬದಲು ಬಿಜೆಪಿ-ಶಿವಸೇನೆ ಜೊತೆಗೂಡಿ ಸರಕಾರ ರಚಿಸಲಿ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಶಿವಸೇನೆ ನಾಯಕ ಸಂಜಯ್ ರಾವತ್ ರನ್ನು ಭೇಟಿಯಾದ ನಂತರ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಶಿವಸೇನೆಗೆ 170 ಸದಸ್ಯರ ಬೆಂಬಲವಿದೆ ಎಂಬ ಸಂಜಯ್ ರಾವತ್ ಹೇಳಿಕೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಈ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಇಲ್ಲ ಎಂದರು.

“170 ಸದಸ್ಯರ ಬೆಂಬಲ ಸಿಗುವುದಾದರೂ ಹೇಗೆ ಎಂದು ನಾನು ಸಂಜಯ್ ರಾವತ್ ರನ್ನು ಪ್ರಶ್ನಿಸಲು ಬಯಸುತ್ತೇನೆ” ಎಂದ ಅವರು, ಶಿವಸೇನೆಯು ಎನ್ ಡಿಎಯಿಂದ ಹೊರನಡೆದು ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಕೈಜೋಡಿಸಿ ಸರಕಾರ ರಚಿಸಬಹುದೆಂಬ ಊಹಾಪೋಹಗಳನ್ನು ತಳ್ಳಿ ಹಾಕಿದರು.

“ಶಿವಸೇನೆ ಮತ್ತು ಬಿಜೆಪಿಯ ಮೈತ್ರಿ 25 ವರ್ಷಗಳಿಂದಿದೆ. ಈಗ ಅವರು ಬೇರೆಯಾಗಲು ಹೇಗೆ ಸಾಧ್ಯ” ಎಂದವರು ಇದೇ ಸಂದರ್ಭ ಪ್ರಶ್ನಿಸಿದರು.

Please follow and like us:
error