ಶಿಕ್ಷಕ/ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ –  ಶಶೀಲ್.ಜಿ.ನಮೋಶಿ


ಕೊಪ್ಪಳ: ಸರಕಾರಿ ನೌಕರರ ಭವನ ಕೊಪ್ಪಳದಲ್ಲಿ ವಿವಿಧ ಶಿಕ್ಷಕ/ಉಪನ್ಯಾಸಕರ ಸಂಘಟನೆಗಳಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ವಿಧಾನ ಪರಿಷತ್ ಸದಸ್ಯರಾದ(ಶಾಸಕ) ಈಶಾನ್ಯ ಶಿಕ್ಷಕರ ಕ್ಷೇತ್ರ ಕಲಬುರ್ಗಿಯಿಂದ ಆಯ್ಕೆಯಾದ   ಶಶೀಲ್.ಜಿ.ನಮೋಶಿಯವರು ಮಾತನಾಡಿ ಶಿಕ್ಷಕರ ಹಾಗೂ ಉಪನ್ಯಾಸಕರ ಸಮಸ್ಯೆಗಳ ಪರಿಹಾರ ಹಾಗೂ ಬೇಡಿಕೆಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಮುಂದುವರಿದು ಮಾತನಾಡಿದ ಅವರು ಎನ್.ಪಿ.ಎಸ್ ರದ್ದತಿ, ಅತಿಥಿ ಉಪನ್ಯಾಸಕರ ಖಾಯಮಾತಿ, ಬಡ್ತಿ ಹೊಂದಿದ ಶಿಕ್ಷಕರ/ಉಪನ್ಯಾಸಕರ ವೇತನ ತಾರತಮ್ಯ, ದೈಹಿಕ ಶಿಕ್ಷಕರ ಸಿ & ಆರ್ ಬದಲಾವಣೆ, ಮುರಾರ್ಜಿ ವಸತಿ ಶಾಲೆಗಳ ಶಿಕ್ಷಕ/ಉಪನ್ಯಾಸಕರ ಸಮಸ್ಯೆಗಳು, ೬ನೇ ವೇತನ ಆಯೋಗದ ಪಾರ್ಟ-೨ ರಲ್ಲಿಯ ಆದೇಶಗಳ ಜಾರಿ, ಮುಖ್ಯೋಪಾಧ್ಯಾಯರ ಬಡ್ತಿ, ೩೭೧ ಜೆ ರಲ್ಲಿಯ ಲೋಪದೋಷಗಳು, ಚಿತ್ರಕಲಾ ಶಿಕ್ಷಕರ ಸಮಸ್ಯೆಗಳು, ಪ್ರೌಢ ಶಾಲೆಯಿಂದ ಕಾಲೇಜಿಗೆ ಉಪನ್ಯಾಸಕರ ಬಡ್ತಿ, ಅನುದಾನಿತ ಪ್ರೌಢ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತು ಮಾನ್ಯ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಪರಿಹರಿಸುವುದಾಗಿ ಭರವಸೆ ನೀಡಿದರು.
ಅಭಿನಂದನಾ ಸಮಾರಂಭದಲ್ಲಿ ಮಾಧ್ಯಮಿಕ ಶಿಕ್ಷಕರ ಸಂಘ, ಅತಿಥಿ ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಕರ ಸಂಘ, ಮುರಾರ್ಜಿ ವಸತಿ ಶಾಲಾ ಶಿಕ್ಷಕರ ಸಂಘ, ವಿಕಲಚೇತನರ ಶಿಕ್ಷಕರ ಸಂಘ, ಮುಖ್ಯೋಪಾಧ್ಯಾಯರ ಸಂಘ, ಅನುದಾನಿತ ಪ್ರೌಢ ಶಾಲಾ ಶಿಕ್ಷಕರ ಸಂಘ, ಟಿ.ಜಿ.ಟಿ ಶಿಕ್ಷಕರ ಸಂಘ, ಉಪನ್ಯಾಸಕರ ಸಂಘ, ಡಿಪ್ಲೋಮಾ ಉಪನ್ಯಾಸಕರ ಸಂಘ, ಪ್ರೌಢ ಶಾಲಾ ಪತ್ತಿನ ಸಹಕಾರ ಸಂಘ, ಭಾರತ ಸೇವಾದಳ ಜಿಲ್ಲಾ ಘಟಕದ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಸೋಮಶೇಖರ.ಚ.ಹರ್ತಿ ಜಿಲ್ಲಾಧ್ಯಕ್ಷರು ಮಾ.ಶಿ.ಸಂಘ ಮಾತನಾಡಿದರು ಹೇಮಣ್ಣ ಕವಲೂರ, ಶಿಕ್ಷಕರು ಸ್ವಾಗತಿಸಿದರು, ಪ್ರಕಾಶ ತಗಡಿನಮನಿ ಸಮನ್ವಯಾಧಿಕಾರಿಗಳು ಬಿ.ಆರ್.ಸಿ ಕೊಪ್ಪಳ ಕಾರ್ಯಕ್ರಮ ಉದ್ಘಾಟಿಸಿದರು. ನಾಗರಾಜ ಜುಮ್ಮಣನವರ ಜಿಲ್ಲಾಧ್ಯಕ್ಷರು ಎನ್.ಜಿ.ಓ ಕಾರ್ಯಕ್ರಮ ಕುರಿತು ಮಾತನಾಡಿದರು, ಬೀರಪ್ಪ ಅಂಡಗಿ ರಾಜ್ಯಾಧ್ಯಕ್ಷರು ವಿಕಲಚೇತನ ಸಂಘ ಸಂದರ್ಭಿಕವಾಗಿ ಮಾತನಾಡಿದರು. ಎಸ್.ಎನ್.ಕಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಭಿನಂದನಾ ಸಮಾರಂಭದಲ್ಲಿ ಜಿ.ಎಸ್.ಗೌಡರ ಅಧ್ಯಕ್ಷರು ಪತ್ತಿನ ಸಹಕಾರ ಸಂಘ ಹನಮಂತಪ್ಪ ಚಲವಾದಿ ಅನುದಾನಿತ ಪ್ರೌಢ ಶಾಲಾ ಶಿಕ್ಷಕರ ಸಂಘ, ಬೀರಪ್ಪ ಅಂಡಗಿ, ನಾಗರಾಜ ಜುಮ್ಮಣ್ಣನವರ, ವಿರೇಶ ಸಜ್ಜನರ, ಎಮ್.ವಿ ಪಾಟೀಲ ಜಿಲ್ಲಾಧ್ಯಕ್ಷರು ಭಾರತ ಸೇವಾದಳ, ವೀರಭದ್ರಯ್ಯ ಹಿರೇಮಠ, ದ್ಯಾಮಣ್ಣ ಚಿಲವಾಡಗಿ, ಐ.ಕೆ ಪಾಟೀಲ ಪ್ರಾಚಾರ್ಯರು, ವೀರಣ್ಣ ಕುಂಬಾರ, ನಾಗರಾಜ ಸುಣಗಾರ, ಮಂಜುನಾಥ ಬೇಳೂರು, ಉದಯ ಸಿಂಗ, ಬಸವರಾಜ ವಿವೇಕಿ ಉಪಸ್ಥಿತರಿದ್ದರು.
ರಾಜೇಶ ಅಂಗಡಿ ಕಾರ್ಯಕ್ರಮ ನಿರೂಪಿಸಿದರು, ಜಿ.ಎಸ್.ಗೌಡರ ವಂದಿಸಿದರು.

Please follow and like us:
error