ಶಾಸಕ ಸೋಮಶೇಖರರೆಡ್ಡಿಯನ್ನು ಸಭಾಧ್ಯಕ್ಷರು ಅನರ್ಹಗೊಳಿಸಲಿ-ಪತ್ರೇಶ್ ಹಿರೇಮಠ


ಬಳ್ಳಾರಿ: ಬಳ್ಳಾರಿ ನಗರ ಶಾಸಕ ಸೋಮಶೇಖರರಡ್ಡಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ರಾಜ್ಯದ ಜನರ ಸಾಮರಸ್ಯದ ಬದುಕಿಗೆ ಕೊಳ್ಳಿ ಇಡುವ ಷಂಡ್ಯಂತ್ರ ರೂಪಿಸಿದ್ದು ಶಾಸಕ ಸ್ಥಾನದ ಗೌರವಕ್ಕೆ ಚ್ಯುತಿ ತಂದಿದ್ದು ತಕ್ಷಣವೇ ವಿಧಾನಸಭಾಧ್ಯಕ್ಷ ಕಾಗೇರಿ ಶಾಸಕ ರಡ್ಡಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ಆಗ್ರಹಿಸಿದ್ದಾರೆ.
ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವಾಗ ವಿಧಿದ್ವಾರ ಸ್ಥಾಪಿತವಾದ ಸಂವಿಧಾನದ ವಿಷಯದಲ್ಲಿ ಶ್ರದ್ಧೆಯಿಂದಲೂ ನಿಷ್ಠೆಯಿಂದಲೂ ಇರುತ್ತೇನೆ ಎಂದು ಸ್ವೀಕರಿಸಿ ಸಂವಿಧಾನದ ಮೂಲಾಂಶಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತಾಡಿರುವುದನ್ನು ಇಡೀ ರಾಜ್ಯವೇ ನೋಡಿದ್ದು ಸದನದ ಘನತೆ ಮತ್ತು ಪಾವಿತ್ರ್ಯ ಕಾಪಾಡಲು ಸಭಾಧ್ಯಕ್ಷರು ಅನರ್ಹಗೊಳಿಸಿದಲ್ಲಿ ತಮ್ಮ ಹುದ್ದೆಯ ಘನತೆ ಹೆಚ್ಚಾಗುತ್ತದೆ.
ದೇಶ ಬಿಟ್ಟು ಹೊರಡಿ, ೫೦ ಜನರನ್ನು ಹುಟ್ಟಿಸುತ್ತೇವೆ, ಭಯವಿದ್ದವರು ಪಾಕಿಸ್ತಾನಕ್ಕೆ ಹೋಗಿ, ನಾವು ೮೦% ರಷ್ಟಿದ್ದೇವೆ ಎಂದು ಪ್ರಚೋದನಕಾರಿ ಮಾತನಾಡುವ ಮೂಲಕ ಕೋಮುಜಗಳ ಹಚ್ಚು ಮೂಲಕ ಮತಬ್ಯಾಂಕ್ ಸೃಷ್ಟಿಸುವ ಹುನ್ನಾರ ಇದರೆ ಹಿಂದೆ ಅಡಗಿದ್ದು ಹಿಂದೂ ಮುಸ್ಲಿಂ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ರಡ್ಡಿ ಹಾಗೂ ಭಾರತೀಯ ಜನತಾ ಪಕ್ಷ ತಕ್ಷಣವೇ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸುತ್ತೇನೆ. ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸದೇ ಇಂತಹ ಜಾತಿ ಧರ್ಮ ಕೋಮು ಆಧಾರಿತ ವಿಷಯಗಳ ಬಗ್ಗೆ ಮಾತನಾಡಿ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದ್ದು ಮುಂದಿನ ದಿನಗಳಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

Please follow and like us:
error