ಶಾಸಕರಿಂದ ರೂ.೧.೫ ಕೋಟಿಯ ಕಾಮಗಾರಿಗೆ ಭೂಮಿಪೂಜೆ


ಕೊಪ್ಪಳ:೨೦, ಲೇಬಗೇರಿ ಜಿಲ್ಲಾ ಪಂಚಾಯತಿ ಕ್ಷೇತ್ರ ಗ್ರಾಮಗಳಾದ ಹನುಮನಹಳ್ಳಿ, ಟಣಕಣಕಲ್, ಹಟ್ಟಿ, ಕಲಕೇರಿ, ಚಿಲವಾಡಗಿ, ಓಜನಹಳ್ಳಿ, ನರೇಗಲ್, ದೇವಲಾಪುರ, ಕಲಕೇರಿ ಮಾದಿನೂರು ಗ್ರಾಮಗಳಲ್ಲಿ ಶಾಲಾ ಕೊಠಡಿ, ಸಿಸಿ ರಸ್ತೆ, ದೇವಸ್ಥಾನ ಜೀಣೋದ್ಧಾರ, ಅಂಗವಾಡಿ ಕಟ್ಟq, ಚರಂಡಿ ರಸ್ತೆ, ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಸಂಸದೀಯ ಕಾರ್ಯದರ್ಶಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಸಮ್ಮಶ್ರ ಸರ್ಕಾರವು ಬಡವರ ಶೋಷಿತ ವರ್ಗಗಳ ದೀನದಲಿತರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆತಂದಿದ್ದು ವಿಶೇಷವಾಗಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದ್ದು, ಸಮ್ಮಿಶ್ರ ಸರ್ಕಾರದ ಹೆಗ್ಗಳಿಕೆಯಾಗಿದೆ ಕೊಪ್ಪಳ ಕ್ಷೇತ್ರದ ವಿವಿಧ ಏತನೀರಾವರಿ ಯೋಜನೆಗಳಿಗೆ ರೂ.೪೦೦ ಕೋಟಿ ಅನುಧಾನ ಬಿಡುಗಡೆಯಾಗಿದ್ದು, ಹೆಚ್.ಕೆ.ಆರ್.ಡಿ.ಬಿ.ಯೋಜನೆಯಲ್ಲಿ ಸುಮಾರು ೪೯ ಶಾಲಾ ಕೊಠಡಿ ಮಂಜೂರು ಮಾಡಿಸಿದ್ದು, ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ರಸ್ತೆ ಅಗಲೀಕರಣ ಮಾಡಲಾಗಿದೆ. ಮೂರಾರ್ಜಿ ವಸತಿ ಶಾಲೆಗಳು, ಹಾಸ್ಟೇಲ್‌ಗಳ ನಿರ್ಮಾಣ ಸ್ಥಾತಕೋತ್ತರ ಕೇಂದ್ರ ಪ್ರಾರಂಭವಾಗಿದ್ದು, ಕ್ಷೇತ್ರದ ಅಭಿವೃದ್ಧಿಯ ಸಂಕೇತವಾಗಿದೆ. ಕಡ್ಡಾಯವಾಗಿ ಕಾರ್ಮಿಕರು ಅಂಬೇಡ್ಕರ ಸಹಾಯಹಸ್ತ ಕಾರ್ಡ ಪಡೇದುಕೊಂಡು ಸರ್ಕಾರದಿಂದ ಕಾರ್ಮಿಕರಿಗೆ ಸೀಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ರೈತರ ಸ್ವಾಭಿಮಾನ ಬದುಕು ಕಟ್ಟಲು ಸಮ್ಮಶ್ರ ಸರ್ಕಾರದ ಕೊಡುಗೆ ಅಪಾರವೇಂದು ಸರ್ಕಾರದ ಸಾಧನೆಗಳ ಬಗ್ಗೆ ಪ್ರಶಂಷಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಯಮನೂರಪ್ಪ ನಾಯಕ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಭುಮರೆಡ್ಡಿ, ತಾ.ಪಂ.ಸದಸ್ಯೆ ಸುಲೋಚನಾ, ನಗಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಮುಖಂಡರುಗಳಾದ ಪ್ರಸನ್ನಾ ಗಡಾದ, ಮೈಲಾರಪ್ಪ ಮಜ್ಜಗಿ, ರಾಮಣ್ಣ ಹದ್ದಿನ್, ಶಿವು ಚಳ್ಳಾರಿ, ದೇವಪ್ಪ ಹಳ್ಳಿ, ಶಂಕ್ರಪ್ಪ ಭೋವಿ, ಮುಕ್ಕಣ್ಣ ಚಿಲವಾಡಗಿ, ಬಸವರಾಜ ಚಿಲವಾಡಗಿ, ಜಿ.ಪಂ.ಅಭಿಯಂತರರು ಶಂಕ್ರಪ್ಪ ಹಾಗೂ ಕೆ.ಆರ್.ಡಿ.ಎಲ್ ಅಭಿಯಂತರರು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error