ಶಾಸಕರಿಂದ ನಗರದ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ವೀಕ್ಷಣೆ


ಕೊಪ್ಪಳ : ೦೫ ನಗರದ ಹಳೇ ಸಾರ್ವಜನಿಕ ಆಸ್ಪತ್ರೆ ಹಿಂದುಗಡೆ ರೂ. ೬೮ ಲಕ್ಷ ವೆಚ್ಚದ ಅಡಿಯಲ್ಲಿ ನಿರ್ಮಾಣದ ಹಂತದಲ್ಲಿರುವ ವಾಲ್ಮೀಕಿ ಭವನ ಹಾಗೂ ಅಗಡಿ ಲೇಔಟ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ರೂ. ೦೩ ಕೋಟಿ ೫೦ ಲಕ್ಷದ ಅನುದಾನ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಾಲ್ಮೀಕಿ ಕಲ್ಯಾಣ ಮಂಟಪದ ಕಾಮಗಾರಿ ವೀಕ್ಷಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿ ವಾಲ್ಮೀಕಿ ಸಮಾಜದ ಮುಂಖಡರು ಸರ್ಕಾರ ಮಂಜೂರು ಮಾಡಿದ ಅನುದಾನವನ್ನು ಸದ್ಬಳಿಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿಗೆ ಕೈ ಜೋಡಿಸಿ ಬಡ ಕುಟುಂಬಗಳ ಮದುವೆ ಮುಂಜೆ ಕಾರ್ಯಕ್ರಮಗಳಿಗೆ ಈ ಭವನಗಳ ಅನುಕೂಲವಾಗಬೇಕು ಸರ್ಕಾರದ ಜನಪರ ಯೋಜನೆಗಳು ಜನರಿಗೆ ತಲಪಿದಾಗ ಅನುದಾನಕ್ಕೆ ಹೆಚ್ಚು ಮಹತ್ವ ಬರುತ್ತದೆ ಹಾಗೂ ನಮ್ಮ ಅವಧಿಯಲ್ಲಿಯಾದ ಕಾಮಗಾರಿಗಳು ಜನರಿಗೆ ಮನದಟ್ಟಾಯಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬೀನಾಗೌಸ, ನಗರ ಸಭಾ ಸದಸ್ಯರುಗಳಾದ ಮುತ್ತುರಾಜ ಕುಷ್ಟಗಿ, ಬಸಯ್ಯ ಹಿರೇಮಠ, ಅಜೀಮ್ ಅತ್ತಾರ, ವೀರುಪಾಕ್ಷಪ್ಪ ಮೋರನಾಳ, ರಮೇಶ ಗಿಣಿಗೇರಿ, ಗವಿಸಿದ್ದಪ್ಪ ಚಿನ್ನೂರು, ಅಕ್ಬರ ಪಾಷ ಪಲ್ಟನ್, ಮುಂಖಡರುಗಳಾದ ಪ್ರಸನ್ನ ಗಡಾದ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಾಟನ್ ಪಾಷ, ರಾಮಣ್ಣ ಕಲ್ಲಣ್ಣನವರ, ಯಮನೂರಪ್ಪ ನಾಯಕ, ಬಸವರಾಜ ಶಹಪೂರ, ಗೌಸ್ ಹುಸೇನ್, ಶಿವಪುತ್ರಪ್ಪ, ರಾಮಣ್ಣ ಹದ್ದಿನ, ಮಾರುತಿ ಕಾರಟಗಿ, ನಗರ ಸಭೆ ಪೌರಾಯುಕ್ತರು ಮಂಜುನಾಥ, ಕಿರಿಯ ಅಭಿಯಂತರ ಹುಸೇನ್ ಹಾಗೂ ವಾಲ್ಮೀಕಿ ಸಮಾಜದ ಅನೇಕ ಗಣ್ಯರು ಪಾಲ್ಗೊಂಡಿದ್ದರು.

Please follow and like us:
error