ಶಾಲೆಗಳ ಆರಂಭಕ್ಕೆ ಅಸ್ತು ಎಂದ ಆರೋಗ್ಯ ಇಲಾಖೆ

ಬೆಂಗಳೂರು : ಶಾಲೆಗಳ ಆರಂಭಕ್ಕೆ ಆರೋಗ್ಯ ಇಲಾಖೆ  ಅಸ್ತು ಎಂದಿದೆ. ಬರೋಬ್ಬರಿ 10 ತಿಂಗಳ ಬಳಿಕ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್  ನೀಡಲಾಗಿದೆ. ಈ ಕುರಿತು  ನಿನ್ನೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಯವರು  ಪತ್ರ ಬರೆದಿದ್ದಾರೆ. ಜನವರಿಯಿಂದ ಶಾಲೆ ಆರಂಭಿಸಬಹುದು ಎಂದ ತಾಂತ್ರಿಕ ಸಲಹಾ ಸಮಿತಿ  ಹೇಳಿದೆ. ಇನ್ನು ಉಳಿದಿರೋದು ಕೇವಲ ಸಿಎಂ ತೀರ್ಮಾನ ಮಾತ್ರ ನಾಳೆ ಶನಿವಾರ ಸಿಎಂ ಮಹತ್ವದ ಸಭೆ ನಡೆಸಲಿದ್ದಾರೆ. ಮೊದಲಿಗೆ 8 ರಿಂದ 12 ತರಗತಿ ಆರಂಭವಾಗಲಿದೆ ನಂತರ  ಉಳಿದ ಶಾಲೆಗಳ ಪ್ರಾರಂಭವಾಗುವ ನಿರೀಕ್ಷೆ ಇದೆ.

Please follow and like us:
error