ಆತಂಕ,ಸಂತಸದಲ್ಲಿ ಶಾಲೆ,ಕಾಲೇಜುಗಳಿಗೆ ಬಂದ ವಿದ್ಯಾರ್ಥಿಗಳು : ಸರಕಾರಿ ಶಾಲೆಯಲ್ಲಿ ಹಾಜರಾತಿ ಕಡಿಮೆ
ಕೊಪ್ಪಳ : ಜಿಲ್ಲೆಯಾದ್ಯಂತ ಕಳೆದ ೧೦ ತಿಂಗಳುಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಹೊಸ ವರ್ಷಕ್ಕೆ ಆಂಭವಾದ ಹಿನ್ನೆಲೆಯಲ್ಲಿ ಶಾಲೆಗಳಿಗೆ ತಳಿರು ತೋರಣಗಳಿಂದ ಶೃಂಗಾರ ಮಾಡಿ ಸಂಭ್ರಮಿಸಲಾಯಿತು. ಸಾಮಾಜಿಕ ಅಂತರ , ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಮೂಲಕ ಕೋವಿಡ್ ನಿಯಮ ಪಾಲನೆಯ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಯಿತು. ನಗರದ ಹೊರ ವಲಯದಲ್ಲಿರುವ ಪ್ರತಿಷ್ಠಿತ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್ ಜಾಗೂ ಸಾನಿಟೈಜರ್ ಮತ್ತು ಸಿಹಿ ವಿತರಿಸುವ ಮೂಲಕ ಶಾಲೆಗಳನ್ನು ಆರಂಭಿಸಿದರು. ಭಾಗ್ಯನಗರದ ನ್ಯಾಷನಲ್ ಶಾಲೆಯಲ್ಲಿಯೂ ಸಹ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಯಿತು. ಬಹಳ ದಿನಗಳ ನಂತರ ಶಾಲೆಗೆ ಬಂದ ಮಕ್ಕಳು ಸಂತಸ ಪಟ್ಟರು.
ಭಾಗ್ಯನಗರದ ಸರಕಾರ ಸರಕಾರಿ ಮಾದರಿ ಹಿರಿಯ ಪ್ರಾಥಮೀಕ ಶಾಲೆಯಲ್ಲಿ ಮಕ್ಕಳ ಮನಸ್ಸಿಗೆ ಮುದು ನೀಡಲು ಶಾಲೆಯನ್ನು ಮಾವಿನ ತೋಪು ಹಾಗೂ ಹೂಮಾಲೆ, ತಳಿರು ತೋರಣಗಳಿಂದ ಶೃಂಗರಿಸಿತ್ತು. ಅಲ್ಲದೇ, ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಲಾಯಿತು. ಇಂದಿನಿಂದ ಶಾಲೆಗಳು ಆರಂಭ ಆಗುತ್ತವೆ ಎನ್ನುವುದು ಗೊತ್ತಿದ್ದರೂ ಸಹ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಹಿಂಜರಿದ ಪರಿಣಾಮ ಬಂದಂತಹ ಮಕ್ಕಳ ಸಂಖ್ಯೆ ಅತ್ಯಂತ ಕಡಿಮೆ ಇತ್ತು.
6 ರಿಂದ 8ನೆ ತರಗತಿಯವರೆಗಿನ ವಿದ್ಯಾರ್ಥಿಗಳ ಸಂ
ಖ್ಯೆ 140ಕ್ಕೂ ಹೆಚ್ಚಿದ್ದರೂ ಇಂದು ಬಂದಿದ್ದು ಮಾತ್ರ 20 ಮಕ್ಕಳು. ಪಾಲಕರನ್ನು ನೇರವಾಗಿ ಸಂಪರ್ಕಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯೋಪಾಧ್ಯಾಯರು
ಹೇಳಿದರು. ಶಾಲೆಗೆ ಬರುವ ಮಕ್ಕಳಿಗೆ ಮಾಸ್ಕ್ ಮತ್ತು ಸಾನಿಟೈಜರ್ ಹಾಗೂ ಮಕ್ಕಳ ತಲೆಯ ಹೂವುಗಳನ್ನು ಹಾಕುವುದರ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.