ವೃದ್ದಾಶ್ರಮದಲ್ಲಿರುವ ವೃದ್ದರಿಗೆ ಸರಿಯಾಗಿ ಮೂಲಭೂತ ಸೌಕರ್ಯ ನೀಡಿ: ಪಿ ಸುನೀಲ್ ಕುಮಾರ

ಕೊಪ್ಪಳ ಫೆ.): ಮಕ್ಕಳಿಂದ ಹೊರದಬ್ಬಲ್ಪಟ್ಟ ಪೋಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಮಕ್ಕಳಿಂದ ತಿರಸ್ಕøತಗೊಂಡು ಮನೆಯಿಂದ ಹೊರ ಬಿದ್ದಂತಹ ಪೋಷಕರು ವೃದ್ಧಾಶ್ರಮಕ್ಕೆ ಬಹುವಾಗಿ ದಾಖಲಾಗುತ್ತಿದ್ದಾರೆ. ಅಂತಹ ವೃದ್ಧರಿಗೆ ಸರಿಯಾದ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಿ ಅವರಿಗೆ ಮಕ್ಕಳ ಪ್ರೀತಿಯ ಜೊತೆಗೆ ಕಾಳಜಿಯನ್ನೂ ಸಹ ತೋರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಹೇಳಿದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರಿಕರ ಪೋಷಣೆ, ಮತ್ತು ರಕ್ಷಣೆ ಕುರಿತು ಸೋಮವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರು ಮಾತನಾಡಿದರು
ಸಭೆಯಲ್ಲಿ ನಿರ್ವಹಣೆ ಮತ್ತು ಕಲ್ಯಾಣ ಪರಿಣಾಮ ಕಾಯ್ದೆ 2007 ಹಾಗೂ ಕರ್ನಾಟಕ ನಿರ್ವಹಣೆ ಮತ್ತು ಹಿರಿಯ ನಾಗರೀಕರ ನಿಯಮ 2009, ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ಅಗತ್ಯ ಸೌಲಭ್ಯ ಸಹಕಾರ ಒದಗಿಸುದು, ಹಿರಿಯ ನಾಗರಿಕರು ವಂಚನೆಗೊಳಪಟ್ಟಲ್ಲಿ ತಕ್ಷಣ ಅಗತ್ಯ ನೆರವು ನೀಡುವುದು, ಭೌತಿಕ ನಿಂದನೆ ನಿವಾರಿಸಿ ಅಗತ್ಯಗಳ ಜೊತಗೆ ಪಾಲಕರಿಗೆ ರಕ್ಷಣೆ ಒದಗಿಸುವುದು, ಹಿರಿಯ ನಾಗರಿಕರಿಗೆ ಹಾಗೂ ಅವರ ಕುಟುಂಬದವರಿಗೆ ಸೂಕ್ತ ಅರಿವು ಮೂಡಿಸುವುದು ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕ ರಕ್ಷಣೆಯಲ್ಲಿ ವೃದ್ಧಾಶ್ರಮದಲ್ಲಿರುವ ವೃದ್ದರ ಪೋಷಣೆ ತುಂಬಾ ಅವಶ್ಯಕವಾಗಿರುವುದೆಂದು ಸಭೆಯಲ್ಲಿ ಚರ್ಚಿಸಲಾಯಿತು.
ಹಾಗೂ ವೃದ್ಧರಿಗೆ ಮೂಲಭೂತ ಸೌಕರ್ಯಗಳ ಬಗ್ಗೆ, ಅವರ ಹಗಲು ಯೋಗಕ್ಷೇಮದ ಬಗ್ಗೆ, ನಾಗರಿಕರಿಗೆ ಚಿಕಿತ್ಸಾ ಘಟಕದ ಸದುಪಯೋಗ, ಸರಕಾರದಿಂದ ಬರುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಒದಗಿಸುವುದರ ಜೊತೆಗೆ ವೃದ್ಧಾಪ್ಯ ವೇತನ ನೀಡಬೇಕು ಹಾಗೂ ಹಿರಿಯ ನಾಗರಿಕ ಯೋಜನೆಗಳ ಬಗ್ಗೆ ಪಾಲಕರ ಪೋಷಣೆ ಕಾಯ್ದೆ 2007ರ ಕುರಿತಂತೆ ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಬೇಕು, ಇಂದು ಹಲವಾರು ಜನರು ಜನ್ಮನೀಡಿದ ಪೋಷಕರನ್ನೆ ಹೊರಹಾಕುತ್ತಿದ್ದಾರೆ, ಅಂತಹವರ ಪೋಷಣೆ ನಮಗೆ ಮುಖ್ಯವಾಗಿದೆ. ವೃದ್ರಾಶ್ರಮಕ್ಕೆ ಬಂದಂತಹ ವೃದ್ದರನ್ನು ಕಡೆಗಣಿಸದಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿ, ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧಿಕಾರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಹಾಗೂ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಇಬ್ಬರು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಇಬ್ಬರು ಹಿರಿಯ ನಾಗರಿಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
error