ವೃತಿಪರ ಕೋರ್ಸಗಳ ಪ್ರವೇಶಕ್ಕಾಗಿ ಪರೀಕ್ಷೆ ನಡೆಸುವ ಕೇಂದ್ರಸರ್ಕಾರದ ನೀತಿ ಖಂಡಿಸಿ ಎಸ್ ಎಫ್ ಐ ಪ್ರತಿಭಟನೆ

ಕೊಪ್ಫಳ : ಇಡೀ ದೇಶವು ತೀವ್ರ ಆರೋಗ್ಯ  ಬಿಕ್ಕಟ್ಟನ್ನು ಎದುರಿಸುತ್ತಿರುವ ಇತ್ತೀಚಿನ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ದೇಶಾದ್ಯಂತ ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ಜೆಇಇ-ನೀಟ್ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಎಸ್.ಎಫ್.ಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.‌ಜಿಲ್ಲೆಯ ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅವರು, ದೇಶದಲ್ಲಿ ಸೋಂಕಿತರ ಸಂಖ್ಯೆ ಮತ್ತು ಸೋಂಕಿನಿಂದ ಸಾಯುವವರ ಸಂಖ್ಯೆಯು ಪ್ರತಿದಿನ ಹೆಚ್ಚಾಗುತ್ತಿದೆ.ಆದರೂ ಇದನ್ನು ನಿರ್ಲಕ್ಷ್ಯ ಮಾಡಿರುವ ಕೇಂದ್ರ ಸರ್ಕಾರ  ಪರೀಕ್ಷೆಗಳನ್ನು ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದೆ. ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಕೊವೀಡ್ ಸಂದರ್ಭದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ತಗೆದುಕೊಳ್ಳುವಲ್ಲಿ     ವಿಫಲವಾಗಿದೆ ಆರ್ಥಿಕತೆಯು ಸಹ ಕ್ಷೀಣಿಸುತ್ತದೆ ಹಾಗಾಗಿ ಸರಕಾರ ಪರೀಕ್ಷೆಗಳನ್ನು ಕೋವಿಡ್ ನಿಯಂತ್ರಣವಾಗುವರೆಗೂ ನಡೆಸಬಾರದೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಸ್.ಎಫ್.ಐ ನ ಪ್ರಮುಖರಾದ ಗ್ಯಾನೇಶ ಕಡಗದ್ ,ಶಿವಕುಮಾರ ಇಚನಾಳ್, ಹನುಮೇಶ ಆಗೋಲಿ , ಹನುಮಂತ  ಮುಕ್ಕುಂಪಿ ನಾಗರಾಜ           ಹನುಮೇಶ್ ಇಚನಾಳ್  ,ಸೋಮನಾಥ   ಬಾಳಪ್ಪ  ,   ಮಂಜುನಾಥ ಸೇರಿದಂತೆ ಮತ್ತಿತರರು ಇದ್ದರು

Please follow and like us:
error