ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಪಠ್ಯ ಮುಂದುವರೆಸಲು ಒತ್ತಾಯ 

ಕೊಪ್ಪಳ : ಅ೦೩, ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಪಠ್ಯಕ್ರಮವನ್ನು ಕೈಬಿಡದೆ ಮುಂದುವರೆಸಬೇಕೆಂದು ಕೊಪ್ಪಳ ಜಿಲ್ಲಾ ಯುವ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡ ನಾಡು ಅನೇಕ ಮಹನೀಯರು, ಸಂತರು, ಶರಣರು, ಸಾಹಿತಿಗಳು, ಸ್ವಾತಂತ್ರ ಹೋರಾಟಗಾರರನ್ನು ದೇಶಕ್ಕೆ ನೀಡಿದೆ. ದೇಶದ ಸ್ವಾತಂತ್ರಕ್ಕಾಗಿ ಕನ್ನಡ ನಾಡಿನ ಅನೇಕರು ತ್ಯಾಗ ಬಲಿದಾನ ನೀಡಿದ್ದಾರೆ. ಅಂತಹ ಸ್ವಾತಂತ್ರ ಹೋರಾಟಗಾರರಲ್ಲಿ ಮುಂಚೂಣೆಯಲ್ಲಿ ಇದ್ದವರು ಕಿತ್ತೂರು ರಾಣಿ ಚನ್ನಮ್ಮಾಜೀಯವರು ಇಡೀ ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಬ್ರೀಟಿಷರನ್ನು ಸೋಲಿಸಿದ ಭಾರತದ ಪ್ರಪ್ರಥಮ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ. ದುರದೃಷ್ಟಕರ ಎಂದರೆ ಇದು ಇತಿಹಾಸ ಪುಸ್ತಕದಲ್ಲಿ ದಾಖಲಾಗದೆ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಭಾರತದ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಎಂದು ತಪ್ಪು ದಾಖಲಾಗಿದೆ. ಈಗ ಕೋವಿಡ್-೧೯ ಪ್ರಯುಕ್ತ ಕರ್ನಾಟಕ ಪಠ್ಯ ಪುಸ್ತಕದಲ್ಲಿನ ಶೇ.೩೦% ಪಠ್ಯಕ್ರಮ ಕೈ ಬಿಡುವ ವಿಚಾರದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ನೀಡಿದ ಕಿತ್ತೂರು ರಾಣಿ ಚನ್ನಮ್ಮ ಮತ್ತು ಬಲಗೈ ಬಂಟ ಸಂಗೋಳ್ಳಿ ರಾಯಣ್ಣ ಸೇರಿದಂತೆ ಇತರೆ ಕನ್ನಡ ನಾಡಿನ ಸ್ವಾತಂತ್ರ ಹೋರಾಟಗಾರರ ಕುರಿತಾದ ಪಾಠವನ್ನು ಕೈಬಿಡುವ ವಿಷಯ ಮಾದ್ಯಮದ ಮೂಲಕ ಗಮನಕ್ಕೆ ಬಂದಿದ್ದು, ದಯವಿಟ್ಟು ಇಂತಹ ಪ್ರಮಾದ ಮಾಡದೇ ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಇತರೆ ಕನ್ನಡ ನಾಡಿನ ಸ್ವಾತಂತ್ರ ಹೋರಾಟಗಾರರ ಬಗೆಗಿನ ಪಾಠವನ್ನು ಇನ್ನೂ ಹೆಚ್ಚಿನ ಮ್ರಮಾಣದಲ್ಲಿ ಸೇರಿಸಿ ಇತಿಹಾಸವನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಕೊಪ್ಪಳ ಜಿಲ್ಲಾ ಯುವ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಂಚಮಸಾಲಿ ಯುವ ಘಟಕದ ಜಿಲ್ಲಾಧ್ಯಕ್ಷ ರಾಜೇಶ ಪಾಟೀಲ, ಉಪಾಧ್ಯಕ್ಷ ಸುರೇಶ ಕೌದಿ, ಪ್ರಭುಗೌಡ ಪಾಟೀಲ, ಮೈಲಾರಗೌಡ ಗುಡ್ಲಾನೂರ, ಶರಣಪ್ಪ ಕಂಚಿ, ಶೇಖರ ಪಾಟೀಲ, ನಾಗರಾಜ ಬೃಂಗಿ, ವಿರೇಶ ನಾಲತ್ತವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error