ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಬೃಹತ್ ಪ್ರತಿಭಟನೆ

ಕೋವಿಡ್-೧೯ ಲಾಕ್ಡೌನ್ ಸಂತ್ರಸ್ತರಿಗೆ ಪರಿಹಾರ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ನೀತಿಗಳ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಕೋರಿ ಮನವಿ

೧. ಮಾರ್ಚ್ ೨೩ ರಿಂದ ಆರಂಭವಾದ ಕೋವಿಡ್-೧೯ ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆಯು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರೈತಾಪಿ ಜನತೆ ಹಾಗೂ ಇತರೆ ಎಲ್ಲಾ ವಿಭಾಗದ ಜನತೆಯು ಇದರಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಒಂದೆಡೆ ಕೋವಿಡ್-೧೯ ಸಾಂಕ್ರಾಮಿಕದ ಆತಂಕ ಇರುವಾಗಲೇ ಇನ್ನೊಂದೆಡೆ ಅನ್‌ಲಾಕ್ ೪.೦ ಜಾರಿಯಲ್ಲಿದ್ದರೂ ರಾಜ್ಯದ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಳ್ಳದ ಕಾರಣ ಆರ್ಥಿಕ ಸಂಕಷ್ಟವನ್ನು ಜನತೆ ಎದುರಿಸುವಂತಾಗಿದೆ. ಕೋವಿಡ್-೧೯ ಸೋಂಕು ಹೆಚ್ಚುತ್ತಿದ್ದು ೫ ಲಕ್ಷದೆಡೆಗೆ ನಡೆದಿದೆ. ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಪರಿಣಾಮವಾಗಿ ಜನತೆ ಆತಂಕದಿಂದಲೇ ಆರ್ಥಿಕ ಚಟುವಟಿಕೆಗಳಲ್ಲಿ ಮತ್ತು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳುವಂತಾಗಿದೆ.

೨. ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನ ಸಿಗದ ಕಾರಣ ಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅಸಂಘಟಿತ ಕಾರ್ಮಿಕರು ಲಾಕ್ಡೌನ್ ಕಾಲಾವಧಿಯ ಗಳಿಕೆ ಇಲ್ಲದೆ ರಾಜ್ಯ ಸರ್ಕಾರವು ಎಲ್ಲಾ ಅಸಂಘಟಿತರಿಗೆ ಪರಿಹಾರ ಘೋಷಿಸದಿರುವ ಕಾರಣ ಹಾಗೂ ಘೋಷಿತ ಪರಿಹಾರವು ಪೂರ್ಣ ಪ್ರಮಾಣದಲ್ಲಿ ಲಭಿಸದಿರುವ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ೮೦ ಶೇಕಡ ಸಂಘಟಿತ ಕಾರ್ಮಿಕರಿಗೆ ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನ ಲಭಿಸಿಲ್ಲ. ನೀಡಿರುವ ವೇತನವನ್ನು ಮುಂಗಡವಾಗಿ ನೀಡಿ ಅದಕ್ಕಾಗಿ ಪರ್ಯಾಯ ದಿನದ ಕೆಲಸಕ್ಕೆ ಮಾಲೀಕರು ಒತ್ತಾಯಿಸುತ್ತಿದ್ದಾರೆ. ವೇತನ ಒಪ್ಪಂದದಿಂದ ಲಭಿಸಬೇಕಾದ ವೇತನ ಹೆಚ್ಚಳವನ್ನು ನೀಡದಿರುವ, ಮುಂದೂಡುವ ಪ್ರಯತ್ನಗಳನ್ನು ನಡೆಸಿದ್ದಾರೆ. ಗುತ್ತಿಗೆ ಕಾರ್ಮಿಕರು, ಟ್ರೈನಿಗಳು ಮುಂತಾದ ಉದ್ಯೋಗ ಭದ್ರತೆಯಿಲ್ಲದ ೭೦ ಶೇಕಡ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಖಾಯಂ ಕಾರ್ಮಿಕರನ್ನು ವಿ.ಆರ್.ಎಸ್ ಕೊಟ್ಟು, ರಿಟ್ರೆಂಚ್ ಮಾಡಿ, ಕಾರ್ಖಾನೆ ಮುಚ್ಚಿ, ಮನೆಗೆ ಕಳುಹಿಸುವ ಪ್ರಕರಣಗಳು ಹೆಚ್ಚಿವೆ. ಅವರ ಬದಲಿಗೆ ನಿಶ್ಚಿತ ಕಾಲಾವಧಿಯ ಕಾರ್ಮಿಕರನ್ನು (ಈಖಿಇ) ನೇಮಿಸಿಕೊಳ್ಳುವ ಪ್ರಕ್ರಿಯೆಗಳು ವ್ಯಾಪಕವಾಗಿ ಹೆಚ್ಚುತ್ತಿವೆ. ಇದಕ್ಕೆ ರಾಜ್ಯ ಸರ್ಕಾರವು ೨೦೨೦ ಜೂನ್ ೩೦ ರಂದು ರಾಜ್ಯದ ಕೈಗಾರಿಕಾ ಸಂಸ್ಥೆಗಳ ಸ್ಥಾಯಿ ಆದೇಶಗಳ ಕಾಯಿದೆ ಅಡಿಯ ಮಾದರಿ ಸ್ಥಾಯಿ ಆದೇಶಗಳಿಗೆ ತಿದ್ದುಪಡಿ ಮಾಡಿ ಈಖಿಇ ಗಳ ನೇಮಕಕ್ಕೆ ಅನುವುಗೊಳಿಸಿರುವುದು ಸಹಾ ಕಾರಣವಾಗಿದೆ. ಇದರೊಂದಿಗೆ ಕೋವಿಡ್-೧೯ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಾರ್ಖಾನೆಗಳಲ್ಲಿನ ಕಾರ್ಮಿಕರ ಸಂಖ್ಯೆಯನ್ನು ದೈಹಿಕ ಅಂತರದೊಂದಿಗೆ ಸಂಯೋಜಿಸಲು ರಾಜ್ಯ ಸರ್ಕಾರವು ಪ್ರಕಟಿಸಿದ್ದ SಔP ಯಿಂದಾಗಿ ಹಲವು ಕಾರ್ಮಿಕರು ಲೇ-ಆಫ್‌ಗೆ ಒಳಪಟ್ಟಿದ್ದಾರೆ. ಅವರಿಗೆ ಪೂರ್ಣ ವೇತನ ಲಭಿಸಿಲ್ಲ. ಅಂತೆಯೇ ಕೋವಿಡ್-೧೯ ರ ಹಿನ್ನೆಲೆಯಲ್ಲಿ ಅಗತ್ಯ ದೈಹಿಕ ಅಂತರ ಕಾಪಾಡಲು ಹಾಲೀ ದಿನದ ಕೆಲಸದ ಅವಧಿಯನ್ನು ೮ ಗಂಟೆಯಿಂದ ೬ ಗಂಟೆಗಳಿಗೆ ಇಳಿಸಿ ೪ ಪಾಳಿ ಕೆಲಸಗಳನ್ನು ಅನುವುಗೊಳಿಸಬೇಕೆಂಬ ಕೇಂದ್ರ ಕಾರ್ಮಿಕ ಸಂಘಟನೆಗಳ ಒತ್ತಾಯವನ್ನು ಪರಿಗಣಿಸುವ ಬದಲು ಶಾಸನಬದ್ಧ ಕೆಲಸದ ಅವಧಿಯನ್ನು ಹಾಲೀ ೮ ಗಂಟೆಯಿಂದ ೧೨ ಗಂಟೆಗೆ ಹೆಚ್ಚಿಸುವ ರಾಜ್ಯ ಸರ್ಕಾರದ ಆದೇಶವು ಕಾರ್ಮಿಕರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ವ್ಯತಿರಿಕ್ತವಾದ ಕ್ರಮ ಮಾತ್ರವಲ್ಲದೆ ಕಾನೂನು ಬಾಹಿರ ಆದೇಶವೂ ಸಹಾ ಆಗಿತ್ತು. ಆದ ಕಾರಣವೇ ರಾಜ್ಯ ಉಚ್ಛ ನ್ಯಾಯಾಲಯವು ಈ ಕುರಿತು ನೋಟಿಸ್ ನೀಡಿದ ಕೂಡಲೇ ರಾಜ್ಯ ಸರ್ಕಾರವು ಸದರಿ ಆದೇಶವನ್ನು ಹಿಂಪಡೆಯಬೇಕಾಗಿ ಬಂದಿರುವುದು ರಾಜ್ಯ ಸರ್ಕಾರಕ್ಕೆ ಆಗಿರುವ ಹಿನ್ನೆಡೆ ಎಂಬುದನ್ನು ಮನಗಾಣಬೇಕಿದೆ. ಅಂತೆಯೇ ಉತ್ತರಪ್ರದೇಶ ಮುಂತಾದ ರಾಜ್ಯಗಳ ರೀತಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಅಮಾನತ್ತುಗೊಳಿಸಿ ಹೊರಡಿಸಬೇಕಿಂದಿದ್ದ ಸುಗ್ರೀವಾಜ್ಞೆಯನ್ನು ಒಂದು ವೇಳೆ ಹೊರಡಿಸಿದ್ದರೆ ಅದು ಈಗಾಗಲೇ ಕೈಗಾರಿಕಾ ರಂಗದಲ್ಲಿ ಅಭಿವೃದ್ಧಿ ಹೊಂದಿರುವ ಕರ್ನಾಟಕ ರಾಜ್ಯವನ್ನು ಉತ್ತರಪ್ರದೇಶ ಮುಂತಾದ ಹಿಂದುಳಿದ ರಾಜ್ಯಗಳ ರೀತಿಯಲ್ಲಿ ಕರ್ನಾಟಕವನ್ನು ಸಹಾ ಹಿಂದುಳಿದ ರಾಜ್ಯವನ್ನಾಗಿಸಲಿತ್ತು.

೩. ರಾಜ್ಯದ ಆರ್ಥಿಕ ಪುನಶ್ಚೇತನಕ್ಕೆ ಜನತೆಯ ಕೈಗೆ ಹಣ ನೀಡುವ ಕ್ರಮವಾಗಬೇಕಿದೆ. ಅದಕ್ಕಾಗಿ ಅಸಂಘಟಿತರಿಗೆ ಪರಿಹಾರ ನೀಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಅಂತೆಯೇ ಸಂಘಟಿತ ಕಾರ್ಮಿಕರಿಗೆ ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನವನ್ನು ಖಾತರಿಪಡಿಸಲು ೧೫-೦೪-೨೦೨೦ ರಂದು ರಾಜ್ಯ ಸರ್ಕಾರವು ಹಿಂಪಡೆದಿರುವ ೧೩-೦೪-೨೦೨೦ ರಂದು ಹೊರಡಿಸಿದ್ದ ಆದೇಶವನ್ನು ಪುನರ್ ಹೊರಡಿಸಬೇಕಿದೆ. ೧೨-೦೬-೨೦೨೦ ರಂದು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶದಂತೆ ಲಾಕ್ಡೌನ್ ಕಾಲಾವಧಿಯ ಪೂರ್ಣವೇತನವನ್ನು ಕೇಂದ್ರ ಗೃಹ ಇಲಾಖೆಯ ೨೯-೦೪-೨೦೨೦ ರ ಮಾರ್ಗದರ್ಶಿ ಸೂತ್ರದಂತೆ ಕಾರ್ಮಿಕರಿಗೆ ಲಭಿಸುವಂತೆ ಮಾಡಲು ಕಾರ್ಮಿಕರು ಮತ್ತು ಮಾಲೀಕರ ನಡುವಿನ ಮಾತುಕತೆಗೆ ಅಗತ್ಯ ನಿಯಾಮಾವಳಿಗಳನ್ನು ರೂಪಿಸಿ ಜಾರಿಗೊಳಿಸಬೇಕಿದೆ. ಅದನ್ನು ರೂಪಿಸುವಾಗ ಬಾಂಬೆ ಉಚ್ಛ ನ್ಯಾಯಾಲಯವು ಹಿಂದ್ ಕಾಮ್‌ಗಾರ್ ಸಂಘಟನ್ ಮತ್ತು ಮಹಾರಾಷ್ಟ್ರ ಸರ್ಕಾರ ಮತ್ತಿತರರ ಪ್ರಕರಣದಲ್ಲಿ ೧೯-೦೮-೨೦೨೦ ರಂದು ನೀಡಿರುವ ತೀರ್ಪಿನಂತೆ ಕಾರ್ಮಿಕರಿಗೆ ಲಭಿಸಬೇಕಿರುವ ಬಾಕಿ ವೇತನವನ್ನು ನೀಡದಿರುವುದು ಹಾಗೂ ಮುಂದೂಡುವುದು ಸಂವಿಧಾನದ ವಿಧಿ ೨೧ರ ಉಲ್ಲಂಘನೆಯಾಗಲಿದೆ ಎಂಬುದನ್ನು ರಾಜ್ಯ ಸರ್ಕಾರವು ಮನಗಾಣಬೇಕೆಂದು ಕೋರುತ್ತೇವೆ. ಅಂತೆಯೇ ೨೦೨೦ ರ ಏಪ್ರಿಲ್ ೧ ರಿಂದ ಜಾರಿಗೆ ಬರಬೇಕಿದ್ದ ವ್ಯತ್ಯಸ್ಥ ತುಟ್ಟಿಭತ್ಯೆಯನ್ನು ಒಂದು ವರ್ಷ ಮುಂದೂಡಿ ೨೦೨೧ ಏಪ್ರಿಲ್ ೧ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರವು ಮಾಡಿರುವ ೨೦-೦೭-೨೦೨೦ರ ಆದೇಶಕ್ಕೆ ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯವು ದಿನಾಂಕ ೧೧-೦೯-೨೦೨೦ ರಂದು ತಡೆ ನೀಡಿದೆ. ಇದರಿಂದಾಗಿ ರಾಜ್ಯದ ಕಾರ್ಮಿಕರಿಗೆ ಕನಿಷ್ಟ ಸುಮಾರು ೪ ಸಾವಿರ ಕೋಟಿ ರೂಗಳು ಸದರಿ ವರ್ಷದಲ್ಲಿಯೇ ಲಭಿಸಲಿದ್ದು ಅವರ ಕೊಳ್ಳುವ ಶಕ್ತಿಯು ಉತ್ತಮಗೊಂಡು ಆರ್ಥಿಕ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ.

೪. ಕೋವಿಡ್-೧೯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಕೈಗಾರಿಕಾ ಕಾರ್ಮಿಕರು ಸಹಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಎಸ್‌ಐ ವ್ಯಾಪ್ತಿಯ ಸೋಂಕಿತ ಕಾರ್ಮಿಕರಿಗೆ ಹಾಲೀ ೨೮ ದಿನಗಳ ವೇತನ ಸಹಿತ ರಜೆ ಮತ್ತು ಕ್ವಾರಂಟೈನ್ ಕಾಲಾವಧಿಯ ವೇತನವು ಲಭಿಸಲಿದೆ. ಆದರೆ ಇಎಸ್‌ಐ ವ್ಯಾಪ್ತಿಯಿಂದ ಹೊರಗಿರುವ ಕಾರ್ಮಿಕರಿಗೆ ಈ ಅವಕಾಶವು ಲಭ್ಯವಿರುವುದಿಲ್ಲ. ಕೂಡಲೇ ರಾಜ್ಯ ಸರ್ಕಾರವು ಇಎಸ್‌ಐ ವ್ಯಾಪ್ತಿಯಿಂದ ಹೊರಗಿರುವವರಿಗೂ ಈ ಸೌಲಭ್ಯವನ್ನು ವಿಸ್ತರಿಸಿ ದುಡಿಯುವ ಜನರಿಗೆ ಸಹಕಾರಿಯಾಗಬೇಕಾದ ಅಗತ್ಯವಿದೆ. ಇಎಸ್‌ಐ ಆಸ್ಪತ್ರೆಗಳ ಶೇಕಡ ೫೦ ರಷ್ಟು ಹಾಸಿಗೆಗಳನ್ನು ಕೋವಿಡೇತ್ತರ ರೋಗಿಗಳಿಗೆ ಮೀಸಲಿಡಲು ಅಗತ್ಯ ಕ್ರಮಗಳಾಗಬೇಕಿದೆ.

೫. ರಾಜ್ಯ ಸರ್ಕಾರವು ಪ್ರಕಟಿಸಿರುವ ಲಾಕ್ಡೌನ್ ಕಾಲಾವಧಿಯ ಒಂದು ಬಾರಿಯ ಕ್ರಮವು ಪ್ರಕಟಿತ ವಿಭಾಗದ ಕಾರ್ಮಿಕರಾದ ಆಟೋ ಮತ್ತು ಟ್ಯಾಕ್ಸಿ ಡ್ರೈವರ್‌ಗಳಿಗೆ, ದೋಬಿಗಳು, ಕ್ಷೌರಿಕರು, ಕೈಮಗ್ಗ ಹಾಗೂ ಪವರ್ ಲೂಂ ನೇಕಾರರಿಗೆ ಮತ್ತಿತರಿಗೆ ಪೂರ್ಣಪ್ರಮಾಣದಲ್ಲಿ ಲಭಿಸಿಲ್ಲ. ಉಳಿದ ಅಸಂಘಟಿತ ಕಾರ್ಮಿಕರಾದ ಮನೆಕೆಲಸಗಾರರು, ಬೀದಿಬದಿ ವ್ಯಾಪಾರಿಗಳು, ಮೆಕ್ಯಾನಿಕ್‌ಗಳು, ಫೋಟೋಗ್ರಾಫರ್‍ಸ್‌ಗಳು, ದರ್ಜಿಗಳು, ಚಮ್ಮಾರರು, ಕುಂಬಾರರು, ಹಮಾಲಿಗಳು ಮುಂತಾದವರಿಗೆ ಕೂಡಲೇ ಪರಿಹಾರವನ್ನು ಪ್ರಕಟಿಸಿ ಜಾರಿಗೊಳಿಸಬೇಕಿದೆ. ಅಂತಹ ಪರಿಹಾರವು ರಾಜ್ಯದ ಆರ್ಥಿಕ ಪುನಶ್ಚೇತನವನ್ನು ತೀವ್ರಗತಿಯಲ್ಲಿ ಸಾಧಿಸಲಿದೆ ಎಂಬುದನ್ನು ರಾಜ್ಯ ಸರ್ಕಾರವು ಮನಗಾಣಬೇಕು.

೬. ಕೋವಿಡ್-೧೯ ನಿಯಂತ್ರಣ ಮತ್ತು ಆರೋಗ್ಯ ಸೇವೆಯಲ್ಲಿ ತೊಡಗಿರುವ ಕೋವಿಡ್ ಸೇನಾನಿಗಳಾದ ವೈದ್ಯರು, ಸುಶ್ರೂಕಿಯರು, ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಮುನ್ಸಿಪಾಲ್ ನೌಕರರು, ಪಂಚಾಯಿತಿ ನೌಕರರು ಮುಂತಾದವರಿಗೆ ಅಗತ್ಯ ಪಿಪಿಇ ಕಿಟ್‌ಗಳು, ವೇತನ ಹಾಗೂ ಪ್ರೋತ್ಸಾಹ ಭತ್ಯೆಯನ್ನು ನೀಡುವುದರೊಂದಿಗೆ ಅವರ ಆರೋಗ್ಯದ ಸಂರಕ್ಷಣೆಗೆ ಅಗತ್ಯ ಕ್ರಮಗಳಾಗಬೇಕಿದೆ. ಅದರಲ್ಲಿನ ಲೋಪದಿಂದಾಗಿ ಈಗಾಗಲೇ ನೂರಾರು ಜನ ತಮ್ಮ ಪ್ರಾಣವನ್ನು ತೆತ್ತಬೇಕಾಗಿ ಬಂದಿದೆ ಎಂಬುದನ್ನು ವಿಷಾದದಿಂದ ತಮ್ಮ ಗಮನಕ್ಕೆ ತರಬಯಸುತ್ತೇವೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಜಿಡಿಪಿ ಯ ಕನಿಷ್ಟ ೩ ಶೇಕಡವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕು.

೭. ಕೋವಿಡ್ ಲಾಕ್ಡೌನ್‌ನಿಂದಾಗಿ ಶಾಲಾ-ಕಾಲೇಜುಗಳು ಆರಂಭವಾಗದ ಕಾರಣ ಖಾಸಗೀ ಅನುದಾನರಹಿತ ಶಾಲಾ-ಕಾಲೇಜುಗಳ ಬೋಧಕ-ಬೋಧಕೇತ್ತರ ನೌಕರರು ವೇತನ ಹಾಗೂ ಉದ್ಯೋಗಕ್ಕೆ ತೊಂದರೆಯಾಗಿದೆ. ಕೂಡಲೇ ಅವರ ವೇತನ ಹಾಗೂ ಉದ್ಯೋಗ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ವಹಿಸುವುದು ಅನಿವಾರ್ಯ ಅಗತ್ಯವಾಗಿದೆ. ಲಾಕ್ಡೌನ್‌ನಿಂದಾಗಿ ಶಾಲಾ ಕಾಲೇಜುಗಳು ಪ್ರಾರಂಭವಾಗದಿದ್ದರೂ ಆನ್‌ಲೈನ್ ತರಗತಿಗಳು ಮಾತ್ರ ಅವ್ಯಾಹತವಾಗಿ ನಡೆಯುತ್ತಿದ್ದು ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳಿಂದ ಬರಬೇಕಿರುವ ಶುಲ್ಕವೇನು ಕಡಿಮೆಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿ ಪೋಷಕರು ಸಹಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

೮. ಮೇಲಿನ ಅಗತ್ಯ ಕ್ರಮಗಳನ್ನು ವಹಿಸಿ ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಬೇಕಿದ್ದ ರಾಜ್ಯ ಸರ್ಕಾರವು ಅದರ ಬದಲಿಗೆ ನವ ಉದಾರವಾದಿ ಆರ್ಥಿಕ ನೀತಿ ಪ್ರೇರಿತ ಹಲವು ಕಾನೂನು ತಿದ್ದುಪಡಿ ಸುಗ್ರೀವಾಜ್ಞೆಗಳಿಗೆ ಮುಂದಾಗಿದೆ. ಅವುಗಳನ್ನು ವಿಧೇಯಕಗಳ ರೂಪದಲ್ಲಿ ಮುಂಬರುವ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಲು ಸಹಾ ತಮ್ಮ ಸರ್ಕಾರವು ಮುಂದಾಗಿದೆ. ಪರಿಣಾಮವಾಗಿ ರೈತರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಭೂ-ಸುಧಾರಣ ಕಾಯಿದೆ ಮತ್ತು ಭೂ-ಕಂದಾಯ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆಗಳಿಂದ ಉಳುವವನಿಗೆ ಭೂಮಿಯ ಬದಲು ಉಳ್ಳವರಿಗೆ ಭೂಮಿ ಎಂಬ ರೈತವಿರೋಧಿ ನೀತಿಯು ಜಾರಿಗೆ ಬರಲಿದೆ. ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಲಕ್ಷಾಂತರ ಜನ ಹಮಾಲಿ ಕಾರ್ಮಿಕರು ತಮ್ಮ ಜೀವನಾಧಾರ ಕಳೆದುಕೊಳ್ಳಲಿದ್ದಾರೆ ಮಾತ್ರವಲ್ಲದೆ ದೇಶೀಯ ವ್ಯಾಪಾರಿಗಳು ಸಹಾ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕಾರ್ಮಿಕ ಕಾನೂನುಗಳ ತಿದ್ದುಪಡಿಯು ರಾಜ್ಯದಲ್ಲಿ ಕಾರ್ಮಿಕರಿಗೆ ಇದ್ದ ಶತಮಾನಗಳ ಹಕ್ಕುಗಳನ್ನು ಇಲ್ಲದಾಗಿಸಲಿದೆ.

೯. ದಿನಾಂಕ ೩೧.೦೭.೨೦೨೦ ರಂದು ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರೆ ಕಾಯ್ದೆ (ತಿದ್ದುಪಡಿ) ಸುಗ್ರೀವಾಜ್ಞೆ ಯನ್ನು ರಾಜ್ಯ ಸರ್ಕಾರ ಹೊರಡಿಸುವ ಮೂಲಕ, ಕೈಗಾರಿಕಾ ವಿವಾದ ಕಾಯ್ದೆ ೧೯೪೭ ಅಧ್ಯಾಯ ೫(ಃ) ಸೆಕ್ಷನ್ ೨೫(ಏ)ಗೆ ತಿದ್ದುಪಡಿ ಮಾಡಿ ಲೇ-ಆಫ್, ರಿಟ್ರೆಂಚ್‌ಮೆಂಟ್, ಕ್ಲೋಸರ್ ಮಾಡಲು ಸರ್ಕಾರದ ಶಾಸನಾತ್ಮಕ ಅನುಮತಿಗೆ ಇರುವ ೧೦೦ ಮಂದಿ ಕಾರ್ಮಿಕರ ಮಿತಿಯನ್ನು ೩೦೦ಕ್ಕೆ ಹೆಚ್ಚಿಸಲಾಗಿದೆ. ಕಾರ್ಖಾನೆ ಕಾಯ್ದೆಯ ಕಾರ್ಖಾನೆ ಪರಿಭಾಷೆಗೆ ತಿದ್ದುಪಡಿ ಮಾಡಿ ವಿದ್ಯುತ್ ಸಹಿತ ೧೦ ಕಾರ್ಮಿಕರ ಮಿತಿಯನ್ನು ೨೦ ಕಾರ್ಮಿಕರಿಗೆ ಹಾಗೂ ವಿದ್ಯುತ್ ರಹಿತ ೨೦ ಕಾರ್ಮಿಕರ ಮಿತಿಯನ್ನು ೪೦ ಕಾರ್ಮಿಕರಿಗೆ ಹೆಚ್ಚಿಸಿದೆ ಹಾಗೂ ಕೆಲಸದ ಅವಧಿ, ಓವರ್‌ಟೈಂ ಅವಧಿಯನ್ನು ಹೆಚ್ಚಳ ಮಾಡಿ ತಿದ್ದುಪಡಿ ತರಲಾಗಿದೆ ಮತ್ತು ಗುತ್ತಿಗೆ ಕಾರ್ಮಿಕರ (ಕ್ರಮೀಕರಣ ಮತ್ತು ನಿಷೇಧ) ಕಾಯ್ದೆ ೧೯೭೦ಕ್ಕೆ ತಿದ್ದುಪಡಿ ಮಾಡಿ ಗುತ್ತಿಗೆ ಕಾರ್ಮಿಕರ ನೇಮಕಕ್ಕೆ ಪರವಾನಗಿ ಮಿತಿಯನ್ನು ಹಾಲಿ ೨೦ ರಿಂದ ೫೦ಕ್ಕೆ ಹೆಚ್ಚಿಸಿ ಕಾರ್ಮಿಕ ಹಕ್ಕುಗಳನ್ನು ದಮನ ಮಾಡಲು ತಿದ್ದುಪಡಿ ತರಲಾಗಿದೆ.

೧೦. ಈ ತಿದ್ದುಪಡಿಗಳು ಜಾರಿಯಾದಲ್ಲಿ ೧೫ ಶೇಕಡವಿರುವ ಕಾರ್ಮಿಕರ ವೇತನ ಪಾಲು ಮತ್ತಷ್ಟು ಕುಸಿಯಲಿದೆ. ೪೭ ಶೇಕಡವಿರುವ ಬಂಡವಾಳಗಾರರ ಲಾಭದ ಪಾಲು ಮತ್ತಷ್ಟು ಹೆಚ್ಚಲಿದೆ. ಕೈಗಾರಿಕಾ ವಿವಾದಗಳ ಕಾಯಿದೆಗೆ ತಿದ್ದುಪಡಿಯಿಂದ ರಾಜ್ಯದಲ್ಲಿ ೩೦೦ಕ್ಕಿಂತ ಕಡಿಮೆ ಕಾರ್ಮಿಕರಿರುವ ಶೇ.೯೦.೭೬ ರಷ್ಟು ಕೈಗಾರಿಕೆಗಳ ಕಾರ್ಮಿಕರು ಹಾಗೂ ಕಾರ್ಖಾನೆ ಕಾಯ್ದೆ ತಿದ್ದುಪಡಿಯಿಂದ ವಿದ್ಯುತ್ ಸಹಿತ ೨೦ ಕಾರ್ಮಿಕರಿಗಿಂತ ಕಡಿಮೆ ಕಾಮಿಕರನ್ನು ಹೊಂದಿರುವ ರಾಜ್ಯದ ಶೇ.೪೧.೩೬ ರಷ್ಟು ಮತ್ತು ವಿದ್ಯುತ್ ರಹಿತ ೪೦ ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಶೇ.೬೪.೨೪ ರಷ್ಟು ಕೈಗಾರಿಕಾ ಕಾರ್ಮಿಕರು ಹಕ್ಕುಗಳಿಂದ ವಂಚಿತರಾಗಲಿದ್ದಾರೆ. ಅಲ್ಲದೆ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಗಂಡಾಂತರ ಬರಲಿದೆ.

೧೧. ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಜಿಎಸ್‌ಟಿ ಪಾಲು ಹಾಗೂ ಪರಿಹಾರವನ್ನು ನೀಡದಿರುವುದು ಸಹಾ ಕೊಡುಗೆ ನೀಡುತ್ತಿದೆ. ಪರಿಣಾಮವಾಗಿ ರಾಜ್ಯ ಸರ್ಕಾರವು ೩೩ ಸಾವಿರ ಕೋಟಿ ರೂಗಳ ಸಾಲ ಪಡೆಯಲು ಮುಂದಾಗಿದ್ದು ರಾಜ್ಯದ ಒಟ್ಟು ಸಾಲದ ಪ್ರಮಾಣವು ೪ ಲಕ್ಷ ಕೋಟಿ ರೂಗಳಿಗೆ ತಲುಪಲಿದೆ. ಇದರೊಂದಿಗೆ ರಾಜ್ಯದಲ್ಲಿನ ಹಲವು ಸಂಸ್ಥೆಗಳು ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಅSಖ) ಯ ಭಾಗವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬಹುದಾಗಿದ್ದ ನಿಧಿಯನ್ನು ಹಾಗೂ ಕಾರ್ಮಿಕರ ವೇತನಕ್ಕೆ ಬಳಸಬಹುದಾಗಿದ್ದ ಸದರಿ ನಿಧಿಯನ್ನು ಪಿ.ಎಂ ಕೇರ್‍ಸ್ ನಿಧಿಗೆ ನೀಡಿದರೆ ಮಾತ್ರ ಅSಖ ವ್ಯಾಪ್ತಿಗೆ ಬರಲಿದೆ ಎಂಬ ಕೇಂದ್ರ ಸರ್ಕಾರದ ಕ್ರಮದಿಂದಾಗಿ ರಾಜ್ಯದ ಪಾಲಿಗೆ ಬರಬೇಕಿದ್ದ ಸಾವಿರಾರು ಕೋಟಿ ರೂಗಳು ರಾಜ್ಯದ ಪಾಲಿಗೆ ಇಲ್ಲದಂತಾಗಿದೆ. ಇದು ರಾಜ್ಯದ ಆರ್ಥಿಕ ಪುನಶ್ಚೇತನಕ್ಕೆ ಮತ್ತೊಂದು ತೊಡರಾಗಿದೆ. ಇಡೀ ರಾಜ್ಯವು ಜಿಎಸ್‌ಟಿ ಯ ರಾಜ್ಯದ ಪಾಲು ಹಾಗೂ ಪರಿಹಾರವನ್ನು ಮತ್ತು ಪಿ.ಎಂ. ಕೇರ್‍ಸ್ ನಿಧಿಯ ಅನುದಾನವನ್ನು ಹಾಗೂ ಪ್ರವಾಹ ಪರಿಹಾರ ನಿಧಿಯನ್ನು ಒಕ್ಕೊರಲಿನಿಂದ ಕೇಂದ್ರದಿಂದ ಪಡೆಯಲು ಮುಂದಾಗಬೇಕಿದೆ. ಅದಕ್ಕೆ ತಾವು ಅಗತ್ಯ ಕ್ರಮವಹಿಸಬೇಕಿದೆ.

೧೨. ಕೋವಿಡ್ ಪರಿಹಾರ ಕ್ರಮಗಳಲ್ಲಿ ಮತ್ತು ಕೋವಿಡ್ ಪರಿಕರಗಳ ಖರೀದಿಯಲ್ಲಿ ಹಾಗೂ ಕೋವಿಡ್ ಆರೋಗ್ಯ ಕೇಂದ್ರಗಳ ಸ್ಥಾಪನೆ, ಕಂಟೈನ್‌ಮೆಂಟ್ ವಲಯಗಳ ತಡೆಗೋಡೆ ನಿರ್ಮಾಣ ಮುಂತಾದವುಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ವರದಿಗಳು ಬರುತ್ತಿವೆ. ಇದರ ಕುರಿತು ಅಗತ್ಯ ಸ್ವತಂತ್ರ ನ್ಯಾಯಾಂಗ ತನಿಖೆ ಅನಿವಾರ್ಯವಾಗಿ ನಡೆಯಬೇಕಿದೆ.

೧೩. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಫಲಾನುಭವಿಗಳನ್ನು ನೊಂದಾಯಿಸಿ ಅಗತ್ಯ ನಿಧಿ ನೀಡಿ ಶಾಶ್ವತ ಪರಿಹಾರ ಕಾರ್ಯಗಳನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ ೨೦೦೮ರ ಅಡಿಯಲ್ಲಿ ಕೈಗೊಳ್ಳಬೇಕಿದೆ. ಅಂತೆಯೇ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲಪಡಿಸಿ ಅದಕ್ಕೆ ಬರಬೇಕಿರುವ ಸೆಸ್ ಹಣವನ್ನು ಪೂರ್ಣ ಪ್ರಮಾಣದಲ್ಲಿ ಸೋರಿಕೆ ಇಲ್ಲದೆ ಸಂಗ್ರಹಿಸಲು ಹಾಗೂ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು ಇಚ್ಛಾಶಕ್ತಿಯನ್ನು ತೋರಬೇಕಿದೆ.

೧೪. ಕೇಂದ್ರ ಸರ್ಕಾರವು ಪ್ರಕಟಿಸಿರುವ ನೂತನ ಶಿಕ್ಷಣ ನೀತಿ (ಓಇP) ೨೦೨೦ ಶಿಕ್ಷಣದ ಮೇಲಿನ ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸಲಿದೆ. ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ, ಕೋಮುವಾದಿಕರಣಕ್ಕೆ ಕೊಡುಗೆ ನೀಡಲಿದೆ. IಅಆS ಯೋಜನೆಗೆ ತೊಡರಾಗಲಿದೆ. ಮದ್ಯಾಹ್ನ ಬಿಸಿ ಊಟ ಯೋಜನೆಗೂ ಗಂಡಾಂತರವಾಗಲಿದೆ. ಪರಿಣಾಮವಾಗಿ ಲಕ್ಷಾಂತರ ಅಂಗನವಾಡಿ ಬಿಡಿಊಟ ನೌಕರರು ಕೆಲಸ ಕಳೆದುಕೊಳ್ಳುವ ಅಪಾಯವಿದೆ.

೧೫. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಹಲವು ತಿಂಗಳುಗಳ ವೇತನ ಬಿಡುಗಡೆ ಮಾಡದ ಕಾರಣ ಪಂಚಾಯಿತಿ ನೌಕರರು, ಮುನ್ಸಿಪಾಲ್ ಗುತ್ತಿಗೆ ನೌಕರರು, ಕಂಪ್ಯೂಟರ್ ಆಪರೇಟರ್‌ಗಳು ವೇತನವಿಲ್ಲದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜ್ಯ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಬಿಸಿ ಊಟ ನೌಕರರಿಗೆ ೪ ರಿಂದ ೬ ತಿಂಗಳ ವೇತನ ಬಾಕಿಯಿತ್ತು. ಹೋರಾಟ ಮಾಡಿದ ಕಾರಣ ಅವರ ಮೇಲೆ ಕೇಸ್ ದಾಖಲಿಸಿ ನಂತರ ವೇತನ ಬಿಡುಗಡೆ ಮಾಡಿರುವ ಬೆಳವಣಿಗೆ ನಡೆದಿದೆ.

೧೬. ನಗರ ಪ್ರದೇಶಗಳಲ್ಲಿ ಕಾರ್ಖಾನೆಗಳ ಮುಚ್ಚುವಿಕೆ, ಅಸಂಘಟಿತ ವಲಯ ವ್ಯಾಪಾರ ಕುಸಿತ ದೊಡ್ಡ ಪ್ರಮಾಣದ ನಿರುದ್ಯೋಗ ಸೃಷ್ಟಿಸಿದೆ. ನಗರ ಪ್ರದೇಶಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ಮರುವಲಸೆ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಡಿ ಕೆಲಸದ ದಿನಗಳನ್ನು ಹಾಲಿ ೧೦೦ ರಿಂದ ೨೦೦ ದಿನಗಳಿಗೆ ಹೆಚ್ಚಳ ಮಾಡಿ, ವೇತನವನ್ನು ೬೦೦ಕ್ಕೆ ಹೆಚ್ಚಿಸಬೇಕಿದೆ. ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ವಿಸ್ತರಿಸಿ ಜಾರಿಗೊಳಿಸಬೇಕಿದೆ. ಅಂತರ ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ಮತ್ತು ಸೇವಾಶರತ್ತುಗಳ) ಕಾಯ್ದೆ ೧೯೭೯ರಡಿ ಸೌಲಭ್ಯಗಳನ್ನು ವಲಸೆ ಕಾರ್ಮಿಕರಿಗೆ ಖಾತ್ರಿಪಡಿಸಬೇಕು.

೧೭. ರಾಜ್ಯದ ಆರ್ಥಿಕ ಪುನಶ್ಚೇತನವನ್ನು ಶೀಘ್ರವಾಗಿ ಸಾಧಿಸಲು ಅದಾಯ ತೆರಿಗೆಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ೬ ತಿಂಗಳು ಮಾಸಿಕ ೭೫೦೦ ರೂಗಳ ನೇರ ನಗದು ವರ್ಗಾವಣೆ ಮಾಡಬೇಕು. ಉಚಿತವಾಗಿ ತಲಾ ೧೦ ಕೆ.ಜಿ ಆಹಾರಧಾನ್ಯ ವಿತರಿಸಬೇಕು. ರೂ.೨೧,೦೦೦ ಸಮಾನ ಕನಿಷ್ಟ ವೇತನ ನಿಗದಿಮಾಡಬೇಕು. ನಿರುದ್ಯೋಗ ನಿಯಂತ್ರಿಸಲು ಗುತ್ತಿಗೆ ಮುಂತಾದವರ ಖಾಯಂಗೆ, ಕಾರ್ಮಿಕ ಸಂಘ ಮಾನ್ಯತೆಗೆ ಶಾಸನ ಹಾಗೂ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿಗೆ ಶಾಸನ ರೂಪಿಸಿ ಜಾರಿಗೊಳಿಸಬೇಕು.

೧೮. ಈ ಎಲ್ಲಾ ಹಿನ್ನೆಲೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರ್ನಾಟಕ ರಾಜ್ಯ ಸಮಿತಿ ಅಡಿ ರಾಜ್ಯದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಹಾಗೂ ಸ್ಕೀಂ ನೌಕರರು ಏಪ್ರಿಲ್ ೨೧ರಿಂದ ಆರಂಭಿಸಿ ವಿವಿಧ ರೀತಿಯಲ್ಲಿ ವಿವಿಧ ಹಂತದ ಹೋರಾಟಗಳನ್ನು ಕೋವಿಡ್ ನಿಯಮಾವಳಿಗಳಡಿ ಅಗತ್ಯ ಎಚ್ಚರಿಕಾ ಕ್ರಮಗಳೊಂದಿಗೆ ಮಾಡುತ್ತಾ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ರಾಜ್ಯ ಸರ್ಕಾರವು ಮಾತ್ರ ರಾಜ್ಯದ ಕಾರ್ಮಿಕರ ಒತ್ತಾಸೆಗಳನ್ನು ಪರಿಗಣಿಸಲು ಮುಂದಾಗಿಲ್ಲ ಮಾತ್ರವಲ್ಲದೆ ಅವರ ಪ್ರತಿನಿಧಿಗಳೊಂದಿಗೆ ಕನಿಷ್ಟ ಚರ್ಚಿಸುವ ಪ್ರಜಾಸತ್ತಾತ್ಮಕ ಕ್ರಮಕ್ಕೂ ಮುಂದಾಗದಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯು ಸೆಪ್ಟೆಂಬರ್ ೨೪ ರಂದು ರಾಜ್ಯದ ವಿವಿಧ ತಾಲೂಕುಗಳಲ್ಲಿನ ಮಿನಿ ವಿಧಾನಸೌಧಗಳ ಮುಂದೆ ಪ್ರತಿಭಟನೆ ನಡೆಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ವಿಧಾನಸೌಧ ಚಲೋ ನಡೆಸಿ ಈ ಮನವಿ ಪತ್ರವನ್ನು ತಮಗೆ ಸಲ್ಲಿಸಿ ಈ ಕೆಳಗಿನ ಬೇಡಿಕೆಗಳಿಗಾಗಿ ಒತ್ತಾಯಿಸುತ್ತಿದ್ದೇವೆ.

ಈ ಕೆಳಗಿನ ಪರಿಹಾರ ಹಾಗೂ ಪರ್ಯಾಯಕ್ಕಾಗಿನ ಬೇಡಿಕೆಗಳನ್ನು ತಾವು ಪರಿಗಣಿಸಿ ಜಾರಿಗೊಳಿಸಲು ಅಗತ್ಯ ಕ್ರಮವಹಿಸಬೇಕೆಂದು ಕೋರುತ್ತಾ ಈ ಕುರಿತು ಚರ್ಚಿಸಲು ಕೂಡಲೇ ಸಿಐಟಿಯು ನಿಯೋಗದೊಂದಿಗೆ ಸಭೆ ನಿಗದಿಪಡಿಸಬೇಕೆಂದು ಕೋರುತ್ತೇವೆ.

ಸಿಐಟಿಯು ಹಕ್ಕೊತ್ತಾಯಗಳು

೧. ಕೆಲಸದ ಅವಧಿ ಹೆಚ್ಚಳ, ವಾರದ ಕೆಲಸದ ಮಿತಿಯ ಹೆಚ್ಚಳ, ಕಾರ್ಖಾನೆ ಕಾಯ್ದೆಯ ಪರಿಭಾಷೆಗೆ ತಿದ್ದುಪಡಿ, ಕೈಗಾರಿಕಾ ವಿವಾದಗಳ ಕಾಯ್ದೆ ಅಧ್ಯಾಯ ೫ ‘ಬಿ’ ಗೆ ತಿದ್ದುಪಡಿ ಹಾಗೂ ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಪರವಾನಗಿ ಮಿತಿ ೨೦ ರಿಂದ ೫೦ ಕ್ಕೆ ಹೆಚ್ಚಳ ತಿದ್ದುಪಡಿಗಳ ಸುಗ್ರೀವಾಜ್ಞೆ ಕೈಬಿಡಬೇಕು.

೨. ೨೦೨೦-೨೧ ರ ಸಾಲಿನ ವ್ಯತ್ಯಸ್ಥ ತುಟ್ಟಿಭತ್ಯೆ ಮುಂದೂಡಿಕೆ ಆದೇಶ ರದ್ದು ಮಾಡಿ, ಬಾಕಿ ಸಹಿತ ವಿಡಿಎ ಯನ್ನು ಕೂಡಲೇ ನೀಡಬೇಕು. ನಿಗದಿತ ಕಾಲಾವಧಿಯ ಕಾರ್ಮಿಕರ ನೇಮಕಕ್ಕೆ ಅನುಮತಿ ನೀಡುವ ಮಾದರಿ ಸ್ಥಾಯಿ ಆದೇಶಗಳಿಗೆ ತಂದಿರುವ ತಿದ್ದುಪಡಿ ಹಿಂಪಡೆಯಬೇಕು.

೩. ಲಾಕ್ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸಬೇಕು. ಕೋವಿಡ್ ಬಂದಾಗ, ಹೋಮ್ ಕ್ವಾರೆಂಟೈನ್ ಆದಾಗ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಮಾಡಬೇಕು. ಕಾರ್ಮಿಕ ಇಲಾಖೆಯಲ್ಲಿ ಇರುವ ಅರ್ಜಿಗಳನ್ನು ತ್ವರಿತವಾಗಿ ಸಂಧಾನ ಸಭೆ ನಡೆಸಿ ಇತ್ಯರ್ಥ ಮಾಡಿ ಕಾರ್ಮಿಕರಿಗೆ ಪರಿಹಾರ ದೊರಕಿಸಿಕೊಡಬೇಕು.

೪. ಕೋವಿಡ್ ಲಾಕ್ಡೌನ್ ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಒಪ್ಪಂದದಲ್ಲಿನ ವೇತನ ಹೆಚ್ಚಳ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಬೇಕು.

೫. ರಾಜ್ಯ ಸರ್ಕಾರ ಘೋಷಿಸಿರುವ ೨೨೦೨ ಕೋಟಿ ರೂಪಾಯಿಗಳ ಪರಿಹಾರ ಅಸಂಘಟಿತ ವಲಯದ ೫ ವಿಭಾಗಗಳಿಗೆ ಮಾತ್ರ ಸಂಬಂಧಪಟ್ಟಿದ್ದು, ಇನ್ನು ೧೨೫ ಕ್ಕೂ ಹೆಚ್ಚು ವಲಯಗಳ ಕೋಟ್ಯಾಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯ ಸಂಕಷ್ಟ ಪರಿಹಾರ ಪ್ಯಾಕೇಜನ್ನು ಘೋಷಿಸಬೇಕು. ಅಂತರರಾಜ್ಯ ವಲಸೆ ಕಾರ್ಮಿಕ (ಉದ್ಯೋಗ ಮತ್ತು ಸೇವಾ ಶರತ್ತುಗಳ) ಕಾಯ್ದೆ-೧೯೭೦ ಅನ್ನು ಜಾರಿಗೊಳಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸೆಸನ್ನು ಸೋರಿಕೆಯಿಲ್ಲದೆ ಪೂರ್ಣವಾಗಿ ಸಂಗ್ರಹಿಸಬೇಕು. ಕಲ್ಯಾಣ ಯೋಜನೆಗಳನ್ನು ಬಲಪಡಿಸಬೇಕು.

೬. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್‌ಟಿ ಪಾಲು ಮತ್ತು ಪರಿಹಾರವನ್ನು ಕೂಡಲೇ ರಾಜ್ಯಕ್ಕೆ ಪಡೆಯಲು ಕ್ರಮವಹಿಸಬೇಕು.

೭. ಕೋವಿಡ್-೧೯ ಪಿಡುಗಿನ ವಿರುದ್ಧ ವೈದ್ಯರು, ಶುಶ್ರೂಷಕಿಯರು, ಪ್ಯಾರ-ಮೆಡಿಕಲ್ ಸಿಬ್ಬಂದಿ, ಗ್ರಾಮ ಪಂಚಾಯಿತಿ ನೌಕರರು, ಪೊಲೀಸ್ ಮತ್ತು ಸಾರಿಗೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಮುಂತಾದ ಅನೇಕ ಫ್ರಂಟ್-ಲೈನ್ ಕೆಲಸಗಾರರಿಗೆ ಸಮರ್ಪಕ ಪಿಪಿಇ ಕಿಟ್‌ಗಳು, ಆರೋಗ್ಯ ವಿಮೆ, ಪ್ರೋತ್ಸಾಹ ಧನ, ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ವಿಸ್ತರಿಸಬೇಕು. ಯೋಜನಾ ಕಾರ್ಮಿಕರಿಗೆ ಗೌರವ ಧನ ಪಾವತಿಸಬೇಕು.

೮. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ರಾಜ್ಯ ಸರ್ಕಾರವು ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ತಂದಿದೆ. ರೈತರನ್ನು, ಕೃಷಿ ಕೂಲಿಕಾರರನ್ನು, ಹಮಾಲಿಗಳನ್ನು, ಬಳಕೆದಾರರನ್ನು ಕಾರ್ಪೊರೇಟ್ ಹಿಡಿತಕ್ಕೆ ಒಪ್ಪಿಸುವ ಈ ಸುಗ್ರೀವಾಜ್ಞೆಗಳನ್ನು ಕೈಬಿಡಬೇಕು.

೯. ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಮುಂತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು.

೧೦. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ ೭,೫೦೦ ರೂಗಳ ನೆರವನ್ನು ಆರು ತಿಂಗಳ ಕಾಲ ನೀಡಬೇಕು. ಎಲ್ಲಾ ಕುಟುಂಬಗಳ ಪ್ರತಿ ಸದಸ್ಯರಿಗೆ ಮಾಸಿಕ ತಲಾ ೧೦ ಕೆ.ಜಿ. ಆಹಾರ ಪದಾರ್ಥಗಳನ್ನು ನೀಡಬೇಕು.

೧೧. ನಗರ ಹಾಗೂ ಗ್ರಾಮೀಣ ಪ್ರದೇಶದ ಉದ್ಯೋಗ ಕೇಳುವ ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ೨೦೦ ದಿನಗಳ ಉದ್ಯೋಗ ನೀಡಬೇಕು. ಕೂಲಿಯನ್ನು ಕನಿಷ್ಟ ೬೦೦ ರೂಗಳಿಗೆ ಹೆಚ್ಚಿಸಬೇಕು. ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ನಿರುದ್ಯೋಗ ಭತ್ಯೆ ಮಾಸಿಕ ೧೦,೦೦೦ ರೂಗಳನ್ನು ನೀಡಬೇಕು.

೧೨. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು. ಜಿಡಿಪಿ ಯ ೩ ಶೇಕಡ ಹಣವನ್ನು ಆರೋಗ್ಯಕ್ಕೆ ಒದಗಿಸಬೇಕು. ಕೋವಿಡ್ ನಿಯಂತ್ರಣಕ್ಕೆ ಸಮರ್ಥ ಸಮರ್ಪಕ ಕ್ರಮವಹಿಸಬೇಕು.

೧೩. ಆನ್‌ಲೈನ್ ಶಿಕ್ಷಣ ನೆಪದ ಲೂಟಿ ತಡೆಯಬೇಕು. ಎಲ್ಲಾ ಬೋಧಕ ಮತ್ತು ಬೋಧಕೇತ್ತರ ಸಿಬ್ಬಂದಿಯ ಉದ್ಯೋಗ ಮತ್ತು ವೇತನ ಸಂರಕ್ಷಿಸಬೇಕು.

೧೪. ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದೀಕರಣಕ್ಕೆ ಎಡೆ ಮಾಡುವ ನೂತನ ಶಿಕ್ಷಣ ನೀತಿ-೨೦೨೦ (ಓಇP) ರದ್ದುಪಡಿಸಬೇಕು. ಸಾರ್ವತ್ರಿಕ ಶಿಕ್ಷಣ ಬಲಪಡಿಸಬೇಕು. ಐಸಿಡಿಎಸ್ ಯೋಜನೆ ಬಲಪಡಿಸಬೇಕು.

೧೫. ರೂ.೨೧,೦೦೦/- ಸಮಾನ ಕನಿಷ್ಟ ವೇತನ ನಿಗದಿ ಮಾಡಬೇಕು, ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಯ ಶಾಸನ ರೂಪಿಸಬೇಕು, ಗುತ್ತಿಗೆ ಕಾರ್ಮಿಕರ ಖಾಯಂಗೆ ಅಸ್ಸಾಂ ಮತ್ತು ತಮಿಳುನಾಡು ಮಾದರಿಯಲ್ಲಿ ಶಾಸನ ರೂಪಿಸಬೇಕು ಹಾಗೂ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿಗೆ ಶಾಸನ ರೂಪಿ ಜಾರಿಮಾಡಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯಗಳನ್ನು ವಿಸ್ತರಿಸಿ ಜಾರಿಮಾಡಬೇಕು.

ಸ್ಥಳೀಯ ಬೇಡಿಕೆಗಳು
೧) ಬಿಸಿಯೂಟ ನೌಕರರಿಗೆ ಆಹಾರದ ಕಿಟ್ ವಿತರಣೆ ಮಾಡಬೇಕು.
೨) ಬಿಸಿಯೂಟ ನೌಕರರನ್ನು ಖಾಯಂ ಮಾಡಬೇಕು.
೩) ವಯಸ್ಸಾದ ಬಿಸಿಯೂಟ ನೌಕರರ ಬದಲು ಅವರ ಮನೆಯ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕು.
೪) ಆಟೋ ಚಾಲಕರಿಗೆ ಮನೆ-ನಿವೇಶನಗಳನ್ನು, ಮನೆಗಳು ನೀಡಬೇಕು.
೫) ಕೊಪ್ಪಳ ನಗರದಲ್ಲಿ ಆಟೋ ನಿಲ್ದಾಣಕ್ಕಾಗಿ ಸ್ಳವನ್ನು ಜಿಲ್ಲಾಡಳಿತ, ನಗರಸಭೆ ನಿಗದಿ ಮಾಡಿಕೊಡಬೇಕು.
೬) ಆಟೋ ಡ್ರೈವರ್‌ಗಳಿಗೆ ವಾಹನ ಚಾಲನಾ ಪತ್ರ (ಡ್ರೈವಿಂಗ್ ಲೈಸನ್ಸ್) ಸರಳವಾಗಿ ನಮ್ಮ ಸಂಘದ ವತಿಯಿಂದ ಬಂದರೆ ತ್ವರಿತಗತಿಯಲ್ಲಿ ನೀಡಬೇಕು.
೭) ಆಟೋ ಡ್ರೈವರ್ ಮಕ್ಕಳಿಗೆ ಕಾಲರಶೀಪ್ ನೀಡಬೇಕು.
೮) ಕೋವಿಡ್-೧೯ ಪರಿಹಾರ ೫೦೦೦ ನಿಧಿ ಚಾಲಕರಿಗೆ ಎಲ್ಲರಿಗೂ ಸಮರ್ಪಕವಾಗಿ ನೀಡಬೇಕು.
೯) ಎಲ್ಲಾ ಚಾಲಕರಿಗೆ ಉಚಿತವಾಗಿ ಡ್ರೈವಿಂಗ್ ಲೈಸನ್ಸ್ ನೀಡಬೇಕು.
೧೦) ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ರೇಣುಕಾ ಗಂಡ ನಾಗಪ್ಪ ಇವರು ಕೆಲಸದಿಂದ ಹೊರಗುಳಿದು ೨ ವರ್ಷಗಳು ಕಳೆದವು. ಪುನಃ ಇವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು.
೧೧) ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಸಹಾಯಕಿಯರ ಮುಂಬಡ್ತಿ ಸಲುವಾಗಿ ಅರ್ಜಿ ಸಲ್ಲಿಸಿ ೫ ತಿಂಗಳಾದರೂ ಮುಂಬಡ್ತಿ ಸಿಕ್ಕಿರುವುದಿಲ್ಲ.
೧೨) ಎನ್.ಪಿ.ಎಸ್. ಹೊಂದಿರುವವರು ನಿವೃತ್ತಿ ಹೊಂದಿ ೫ ವರ್ಷವಾದರೂ ನಿವೃತ್ತಿ ವೇತನ ಬಂದಿರುವುದಿಲ್ಲ. ವಿನಾ ಕಾಋಣ ಅರ್ಜಿಯನ್ನು ತಿರಸ್ಕಾರ ಮಾಡಿರುತ್ತಾರೆ.
೧೩) ಸಂಘಟನೆಯನ್ನು ಪ್ರತಿ ೩ ತಿಂಗಳಿಗೊಂಡು ಕುಂದು-ಕೊರತೆ ಆಲಿಸಲು ಸಭೆ ಕರೆಯಬೇಕು.
೧೪) ಅಂಗನವಾಡಿ ಕಾರ್ಯಕರ್ತರು ನಿಧನ ಹೊಂದಿದರೆ ಶವ-ಸಂಸ್ಕಾರದ ಹಣ ತಕ್ಷಣ ಬಿಡುಗಡೆ ಮಾಡಬೇಕು. ಕುಷ್ಟಗಿ ತಾಲೂಕಿನ ೨ ಸಹಾಯಕಿಯರ ಶವ-ಸಂಸ್ಕಾರದ ಹಣ ರೂ.೫೦೦೦/- ಬಂದಿರುವುದಿಲ್ಲ ತಕ್ಷಣ ಬಿಡುಗಡೆ ಮಾಡಬೇಕು.
೧೫) ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಬಾಡಿಗೆ ಹಣ, ಮೊಟ್ಟೆ ಬಿಲ್, ಸಿಲಿಂಡರ್ ಹಣ, ಗೌರವಧನ ಪ್ರತಿ ತಿಂಗಳ ೫ನೇ ತಾರೀಕಿನ ಒಳಗಾಗಿ ಬಿಡುಗಡೆ ಮಾಡಬೇಕು.
೧೬)
೧೭) ಕಟ್ಟಡ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ ಮಾಡಬೇಕು.
೧೮) ಕಟ್ಟಡ ಕಾರ್ಮಿಕರಿಗೆ ಮುಂದಿನ ೬ ತಿಂಗಳ ಕೋವಿಡ್ ಪರಿಹಾರ ಪ್ರತಿ ತಿಂಗಳಿ ೭೫೦೦/- ಪರಿಹಾರ ಕೊಡಬೇಕು.
೧೯) ಜಿಲ್ಲೆಯಲ್ಲಿ ಬಾಕಿ ಇರುವ ಕಟ್ಟಡ ಕಾರ್ಮಿಕರ ಎಲ್ಲಾ ಅರ್ಜಿಗಳನ್ನು ಕೂಡಲೆ ವಿಲೆವಾರಿ ಮಾಡಬೇಕು.
೨೦) ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ಪರಿಹಾರ ಹಣ ಎಷ್ಟು ಕಾರ್ಮಿಕರಿಗೆ ತಲುಪಿದರ ಬಗ್ಗೆ ಮಾಹಿತಿ ನೀಡಬೇಕು.
೨೧) ಮುಂಬಡ್ತಿಗಾಗಿ ಪ್ರಸ್ತಾವನೆ ಕಳಿಸಿದ ಮಿನಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಅನುಮೋದನೆ ಸಿಗಲು ಜಿಲ್ಲಾ ಕಚೇರಿಯಿಂದ ಬಹಳ ವಿಳಂಬವಾಗುತ್ತಿದ್ದು ಹಾಗೂ ಇಲ್ಲ ಸಲ್ಲದ ಆಕ್ಷೇಪಣೆ ಮಾಡಿ ಇವರ ಮುಂಬಡ್ತಿ ನೀಡಲು ವಿಳಂಬ ಮಾಡಿವುದನ್ನು ನಿಲ್ಲಿಸಬೇಕು.
೨೨) ಗಂಗಾವತಿ ತಾಲೂಕಿನಲ್ಲಿ ಆದೇಶದಲ್ಲಿ ೪ ಜನ ಹೆಚ್ಚುವರಿ ಅಂಗನವಾಡಿ ಕಾರ್ಯಕರ್ತೆಯರು ಇದ್ದು ಈಗ ಅವರು ಮಿನಿ ಕಾರ್ಯಕರ್ತೆಯರ ವೇತನ ಪಡೆಯುತ್ತಿದ್ದು ಈಗ ಮುಂಬಡ್ತಿ ಕೊಡುವಲ್ಲಿ ಅನ್ಯಾಯವಾಗುತ್ತಿದ್ದು ಇದನ್ನು ಜಿಲ್ಲಾ ಕಚೇರಿಯಲ್ಲಿ ಸರಿಪಡಿಸಬೇಕು.
೨೩) ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಬೆಲೆ ಏರಿಕೆಗೆ ಅನುಗುಣವಾಗಿ ಮೊಟ್ಟೆ ಹಣವನ್ನು ಖಾತೆಗೆ ಜಮಾ ಮಾಡಬೇಕು.
೨೪) ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ನಡೆಯುವ ದೌರ್ಜನ್ಯ ಮಾಡುವವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.
೨೫) ಪ್ರತಿ ತಿಂಗಳು ಕಾಂಟಿಜೆನ್ಸಿ ೫೦ ರಿಂದ ೮೪ ರೂ.ಗಳಿಗೆ ಏರಿಕೆಯಾಗಿದ್ದು ಒಂದು ವರ್ಷಕ್ಕೆ ೧೦೦೦ ಆದೇಶ ಆಗಿದ್ದು ಇಲ್ಲಿಯವರೆಗೂ ಬರೀ ೫೦ ರೂ.ಗಳನ್ನು ಮಾತ್ರ ಇಲಾಖೆಯವರು ಹಾಕಿರುತ್ತಾರೆ. ಹೆಚ್ಚಿಸಿರುವ ಬಾಕಿ ಕಾಂಟಿಜೆನ್ಸಿ ಹಣವನ್ನು ತಕ್ಷಣವೆ ಬಿಡುಗಡೆ ಮಾಡಬೇಕು.
೨೬) ಜಿಲ್ಲೆಯ ಹಲವಾರು ಎ.ಪಿ.ಎಂ.ಸಿ.ಗಳಲ್ಲಿ ಮತ್ತು ನಗರ ಗ್ರಾಮೀಣ ಪ್ರದೇಶದಲ್ಲಿ ನೆನೆಗುದಿಗೆ ಬಿದ್ದಿರುವ ವಸತಿ ಯೋಜನೆ ಜಾರಿಗೆ ಅಗತ್ಯ ಕ್ರಮವಹಿಸಬೇಕು. ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿ ಮಾಡಬೇಕು.
೨೭) ಪ್ರಧಾನಮಂತ್ರಿ ಜೀವನ ಭೀಮಾ ಮತು ಸುರಕ್ಷಾ ಭೀಮಾ ಯೋಜನೆಗಳಿಗೆ ಅಸಂಘಟಿಕ ಕಾರ್ಮಿಕರನ್ನು ನೋಂದಾಯಿಸುವ ಕಾರ್ಯ ಕೂಡಲೆ ಪ್ರಾರಂಭಿಸಬೇಕು. ನೋಂದಾಯಿತ ಕಾರ್ಮಿಕರಿಗೆ ಮರಣ ಪರಿಹಾರ ನೀಡಬೇಕು ಮತ್ತು ಯೋಜನಗೆ ಸೇರುವ ಕಾರ್ಮಿಕರ ವಯಸ್ಸಿನ ಮಿತಿ ೬೦ ವರ್ಷಕ್ಕೆ ಹೆಚ್ಚಿಸಬೇಕು.
೨೮) ಪಾರ್ವತಿ ತಂದೆ ಸಂಗಪ್ಪ ಮರ್ಲಾನಹಳ್ಳಿ ೨ನೇ ಕೇಂದ್ರ ನಿವೃತ್ತಿ ಹೊಂದಿದ ಪ್ರಯುಕ್ತ ಇವರ ಜಾಗದಲ್ಲಿ ಸುಂಕಮ್ಮ ಗಂಡ ವೆಂಕೋಬ, ಹೊಸ ಜೂರಟಗಿ ೩ನೇ ಅಂಗನವಾಡಿ ಮಿನಿ ಕೇಂದ್ರ (೧೦ ವರ್ಷ ಸೇವೆ) ಇವರನ್ನು ನೇಮಕ ಮಾಡಿಕೊಳ್ಳಬೇಕು.
೨೯) ಕನಕಗಿರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮೊಟ್ಟೆ ವಿತರಣೆ ಮಾಡುವ ಕೆಲಸವನ್ನು ಇಲಾಖೆಯವರು ವಹಿಸುತ್ತಾರೆ ಇದನ್ನು ತಪ್ಪಿಸಿ ಕಾರ್ಯಕರ್ತೆಯರು ಅದನ್ನು ಖರೀದಿಸಲು ಕ್ರಮ ವಹಿಸಬೇಕು.
೩೦) ಶ್ರೀಮತಿ ಯಂಕಮ್ಮ ಗಂಡ ಯಮನಪ್ಪ, ಮಾರುತಿ ಕ್ಯಾಂಪ್ ಅಂಗನವಾಡಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ೧೮-೧೦-೨೦೧೯ ರಂದು ಮರಣ ಹೊಂದಿದ್ದು ಅವರ ಜಾಗದಲ್ಲಿ ಇವರ ಸೊಸೆಯಾದ ಮಂಜುಳಾ ಗಂಡ ಯಮನೂರಪ್ಪ ಇವರನ್ನು ಆಯ್ಕೆ ಮಾಡಿಕೊಳ್ಳಬೇಕು.
೩೧) ಶ್ರೀಮತಿ ಗಿರಿಜಾ ಗಂಡ ಜಗದೇಶ, ಮಿನಿ ಅಂಗನವಾಡಿ ಕೇಂದ್ರ ಉಡಿತಿಮ್ಮಪ್ಪ ಕ್ಯಾಂಪ ಇವರು ೧೦ ವರ್ಷ ಸೇವೆ ಸಲ್ಲಿಸಿರುತ್ತಾರೆ. ಇವರನ್ನು ೩ನೇ ಅಂಗನವಾಡಿ ಕೇಂದ್ರ ಬೇವಿನಾಳ ಕ್ರಾಸ್ ಕೇಂದ್ರದಲ್ಲಿ ಖಾಲಿ ಇರುವ ಸ್ಥಾನಕ್ಕೆ ಇವರನ್ನು ನೇಮಕ ಮಾಡಿಕೊಳ್ಳಬೇಕು.
೩೨) ಶ್ರೀಮತಿ ಅಯ್ಯಮ್ಮ ಮಿನಿ ಅಂಗನವಾಡಿ ಕೇಂದ್ರ ಚಿಕ್ಕಡಂಕನಕಲ್ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದು ಜೀರಾಳ ಹಳೇಕಲ್ಗುಡಿ ಅಂಗನವಾಡಿ ಕೇಂದ್ರಕ್ಕೆ ನೇಮಕ ಮಾಡಿಕೊಳ್ಳಬೇಕು.
೩೩) ಕನಕಗಿರಿ ತಾಲೂಕಿನ ಆಚಾರ ನರಸಾಪೂರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯು ನಿರ್ವತ್ತಿಯಾಗಿದ್ದು ಅವರ ಜಾಗದಲ್ಲಿ ಶ್ರೀಮತಿ ಕರಿಯಮ್ಮ ಗಂಡ ತಿಮ್ಮಪ್ಪ ಅಂಗನವಾಡಿ ಸಹಾಯಕಿ ಇವರನ್ನು ಕಾರ್ಯಕರ್ತೆಯನ್ನಾಗಿ ನೇಮಕ ಮಾಡಿಕೊಳ್ಳಬೇಕು.

ನೇತೃತ್ವ ವಹಿಸಿದವರು: ಖಾಸೀಂಸಾಬ ಸರ್ದಾರ ಪ್ರಧಾನ ಕಾರ್ಯದರ್ಶಿ ಮಾತನಾಡಿದರು, ನಿರುಪಾದಿ ಬೆಣಕಲ್ ಅಧ್ಯಕ್ಷರು, ಜಿ.ನಾಗರಾಜ, ಲಕ್ಷ್ಮೀದೇವಿ ಸೋನಾರ, ಸಾವೀತ್ರಿ, ಮಂಜುನಾಥ ಡಗ್ಗಿ, ಹನುಮೇಶ ಕಲ್ಮಂಗಿ, ಶೆಖಪ್ಪ ಚೌಡ್ಕಿ, ಬಸವರಾಜ ಕಂಠಿ, ವಲೀಂಮೊದಿನ್, ದುರ್ಗಮ್ಮ, ಗಿರಿಜಮ್ಮ, ಅನ್ನಪೂರ್ಣ ಬೃಹನಮಠ, ಶಿವನಗೌಡ ಪಾಲಿಪಾಟೀಲ, ಶೈಲಪ್ಪ, ಅನ್ನಪೂರ್ಣ ಕುಷ್ಟಗಿ, ಅಲೀಮಾ ಹನುಮಸಾಗರ, ಅಮರಮ್ಮ, ಕಲಾವತಿ, ರಮೇಶ ಗೋರಪಡೆ, ಇಸ್ಮಾಹಿಲ್, ವೆಂಕಟೇಶ ಅಗಳಕೇರಾ, ಉಮೇಶ ವಾಯ್.ವಿ, ಷಣ್ಮುಖಪ್ಪ ಹಿರೇಬೀಡನಾಳ, ವಿರೇಶ ಬೆದವಟ್ಟಿ, ಕಲ್ಲೇಶ, ರಂಗಪ್ಪ ದೊರೆಗಳು, ಮೈಲಾರಪ್ಪ,ಅಬ್ದುಲ್‌ರಜಾಕ, ದೇವಪ್ಪ ಹೊಸಳ್ಳಿ, ಶಿವಲೀಲಾ ಅಗಳಕೇರಾ, ಸೈಯ್ಯಾದ ಗುಲಾಮ ಹುಸೇನಿ, ಸಂಜೀಯದಾಸ, ರಾಮಣ್ಣ ದೊಡ್ಡಮನಿ, ಹುಲಗಪ್ಪ ಗೋಕಾವಿ, ಸುಂಕಪ್ಪ ಗದಗ, ಲಕ್ಷೀ ಸಜ್ಜನ, ಪದ್ಮವತಿ ಯಲಬುರ್ಗಾ, ಅಪ್ಪಾಸಾಬ, ಅಲಿಲತಾ ಅರಳಿ ಯಲಬುರ್ಗಾ,

Please follow and like us:
error