- ಹೊಸದಿಲ್ಲಿ, ನ.9: ಐತಿಹಾಸಿಕ ಅಯೋಧ್ಯೆ-ಬಾಬರಿ ವಿವಾದದ ತೀರ್ಪು ಕೊನೆಗೂ ಹೊರಬಿದ್ದಿದ್ದು, ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿ ನಿರ್ಮಾಣಕ್ಕೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
- ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖಾಂಶಗಳು ಇಲ್ಲಿವೆ.
- ►ಖಾಲಿ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿರಲಿಲ್ಲ
- ►ವಿವಾದಿತ ಕಟ್ಟಡದ ಕೆಳಗೆ ನಿರ್ಮಾಣವೊಂದಿತ್ತು ಮತ್ತು ಅದು ಇಸ್ಲಾಮಿಕ್ ಕಟ್ಟಡ ರಚನೆಯಾಗಿರಲಲ್ಲ
- ►1949ರಲ್ಲಿ ಮಸೀದಿಯೊಳಗೆ ಮೂರ್ತಿಗಳನ್ನು ಇಡಲಾಯಿತು
- ►ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ಜಾಗವು ಸರಕಾರಿ ಜಾಗ
- ►ಪುರಾತತ್ವ ಇಲಾಖೆಯ ಸಾಕ್ಷ್ಯಗಳನ್ನು ನಿರಾಕರಿಸಲಾಗದು , ಬಾಬರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಿದ್ದಲ್ಲ: ಸುಪ್ರೀಂ ಕೋರ್ಟ್
- ►ಪುರಾತತ್ವ ಸಾಕ್ಷ್ಯಗಳ ಪ್ರಕಾರ ಅಲ್ಲೊಂದು ಹಿಂದೂ ಕಟ್ಟಡ ಇತ್ತು : ಸುಪ್ರೀಂ ಕೋರ್ಟ್
- ►ನಿರ್ಮೋಹಿ ಅಖಾರದ ಮನವಿ ತಿರಸ್ಕೃತ , ಅದಕ್ಕೆ ಮೂರ್ತಿ ನಿರ್ವಹಣೆ ಹಾಗು ಪೂಜಿಸುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್
- ►ಬಾಬರಿ ಮಸೀದಿಯನ್ನು ನಿರ್ಮಿಸಿದ್ದು ಮೀರ್ ಬಖಿ
- ಆದರೆ ಕಾನೂನು ಸಾಕ್ಷಿಗಳ ಮೂಲಕವಷ್ಟೇ ಭೂಮಿಯ ಮೇಲಿನ ಹಕ್ಕನ್ನು ನಿರ್ಧರಿಸಬಹುದು
- ►ನಂಬಿಕೆ ಹಾಗು ಶ್ರದ್ಧೆ ಸರಿಯೇ ಎಂಬುದು ಕಾನೂನು ಪ್ರಕ್ರಿಯೆಯ ಹೊರಗಿನ ವಿಷಯ : ಸುಪ್ರೀಂ ಕೋರ್ಟ್
- ►ಅಯೋಧ್ಯೆ ರಾಮನ ಜನ್ಮಸ್ಥಳ ಎಂಬ ನಂಬಿಕೆ ವಿವಾದಾತೀತ , ಹಾಗೆಯೇ ಮುಸ್ಲಿಮರು ಆ ಮಸೀದಿಯಲ್ಲಿ ಆರಾಧನೆ ಮಾಡುವ ನಂಬಿಕೆಯೂ ವಿವಾದತೀತ : ಸುಪ್ರೀಂ ಕೋರ್ಟ್
- ►ರಾಮನ ಜನ್ಮಸ್ಥಳ ಕುರಿತ ಹಿಂದೂಗಳ ನಂಬಿಕೆ ಬಗ್ಗೆ ಹಿಂದಿನ ಪ್ರವಾಸಿಗರು ಹಾಗು ಇತಿಹಾಸಕಾರರು ಹೇಳಿದ್ದಾರೆ. ಆದರೆ ಪ್ರವಾಸಿಗರ ಹೇಳಿಕೆಗಳನ್ನು ವಿಶ್ಲೇಷಕರಾಗಿ ನೋಡಬೇಕಾಗುತ್ತದೆ: ಸುಪ್ರೀಂ ಕೋರ್ಟ್
- ►ಅಲ್ಲೊಂದು ಹಿಂದೂ ದೇವಾಲಯ ಇತ್ತು ಎಂದು ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಬಂದರೂ ಮಸೀದಿ ಕೆಳಗೆ ಒಂದು ಕಟ್ಟಡ ಇತ್ತು ಎಂಬುದು ಇವತ್ತು ಜಾಗದ ಹಕ್ಕಿಗೆ ಕಾರಣವಾಗುವುದಿಲ್ಲ : ಸುಪ್ರೀಂ ಕೋರ್ಟ್
- ►ಮಸೀದಿಯ ಒಳಾಂಗಣದಲ್ಲಿ ಮುಸ್ಲಿಮರು ನಮಾಝ್ ಮಾಡುತ್ತಿದ್ದರೆಂಬುದು ಸ್ಪಷ್ಟ. ಹೊರಾಂಗಣದಲ್ಲಿ ಹಿಂದೂಗಳು ಪ್ರಾರ್ಥನೆ ನಡೆಸುತ್ತಿದ್ದರು.
- ►ಅಡಚಣೆಗಳಿದ್ದರೂ ಮುಸ್ಲಿಮರು ನಮಾಝ್ ನಿರ್ವಹಿಸುವುದನ್ನು ಮುಂದುವರಿಸಿದ್ದರು. ಹಾಗಾಗಿ ಮುಸ್ಲಿಮರು ಮಸೀದಿಯನ್ನು ಪಾಳು ಬಿಟ್ಟಿರಲಿಲ್ಲ
- ►1857ರಿಂದ ದಾಖಲೆಗಳು ಹೇಳುವಂತೆ ಒಳಾಂಗಣದಲ್ಲಿ ಪ್ರಾರ್ಥನೆ ನಡೆಸದಂತೆ ಮುಸ್ಲಿಮರಿಗೆ ನಿರ್ಬಂಧ ಹೇರಿರಲಿಲ್ಲ. 1857ರಲ್ಲಿ ಒಳಾಂಗಣ ಮತ್ತು ಹೊರಾಂಗಣವೆಂಬ ವಿಭಜನೆ ನಡೆಸಲಾಯಿತು.
- ►ಆದರೆ ರಾಮನ ಜನ್ಮಸ್ಥಳ ಮಸೀದಿಯ ಒಳಾಂಗಣದಲ್ಲಿ ಎಂದು ಹಿಂದೂಗಳು ನಂಬಿದ್ದಾರೆ
- ►ನಿರ್ಮಾಣದಿಂದ ಹಿಡಿದು 1857ರವರೆಗೆ 325 ವರ್ಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ ಕುರಿತಂತೆ ಮುಸ್ಲಿಮರು ಯಾವ ಪುರಾವೆಯನ್ನೂ ನೀಡಿಲ್ಲ
- ►ಆದರೆ ಮಸೀದಿಯ ಒಳಗಿನ ಸ್ಥಳದಲ್ಲೇ ರಾಮನ ಜನ್ಮಸ್ಥಳವಿದೆ ಎಂದು ಹಿಂದೂಗಳು ಹಿಂದಿನಿಂದಲೂ ನಂಬಿದ್ದಾರೆ : ಸುಪ್ರೀಂ ಕೋರ್ಟ್
- ►1992ರ ಮಸೀದಿ ದ್ವಂಸ ಪ್ರಕರಣವು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ
- ►1949ರಲ್ಲಿ ಮಸೀದಿಯಲ್ಲಿ ಮೂರ್ತಿ ಇಟ್ಟಿದ್ದು ಹಾಗು ಮಸೀದಿಯನ್ನು ಧ್ವಂಸ ಮಾಡಿದ್ದು ಕಾನೂನು ಬಾಹಿರ: ಸುಪ್ರೀಂ ಕೋರ್ಟ್
- ►ವಿವಾದಿತ ಜಮೀನನ್ನು ಮೂರು ಭಾಗಗಳಾಗಿ ಮಾಡಿದ ಅಲಹಾಬಾದ್ ಹೈಕೋರ್ಟ್ ತೀರ್ಪು ತಪ್ಪು
- ►ಆರಾಧನಾ ಸ್ಥಳಗಳ ಕುರಿತ ಕಾಯ್ದೆಯಲ್ಲಿ ದೇಶದ ಎಲ್ಲ ಧಾರ್ಮಿಕ ಸಮುದಾಯಗಳ ಹಿತಾಸಕ್ತಿ ಕಾಪಾಡುವ ಭಾರತದ ನಿಷ್ಠೆ ಸ್ಪಷ್ಟವಾಗಿದೆ
- ►ಮಸೀದಿಯೊಂದರ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪ್ರತ್ಯೇಕ ಜಮೀನು ನೀಡಲು ಸುಪ್ರಿಂ ಆದೇಶ
- ►ವಿವಾದಿತ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಕೇಂದ್ರ ಸರಕಾರವು 3 ತಿಂಗಳಲ್ಲಿ ಯೋಜನೆಯೊಂದನ್ನು ರಚಿಸಲಿದೆ
Please follow and like us: