ವಿಧಾನ ಪರಿಷತ್ ಚುನಾವಣೆ -ಕೊಪ್ಪಳ ಜಿಲ್ಲೆಯಲ್ಲಿ 2539 ಮತದಾರರು-ಮತಪತ್ರದಲ್ಲ್ಲಿ ನೋಟಾ ಆಯ್ಕೆ ಇಲ್ಲ

ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-2020
ಮತದಾರರ ಚೀಟಿ ಇಲ್ಲದಿದ್ದರೆ ಇತರೆ 9 ದಾಖಲೆಗಳನ್ನು ತೋರಿಸಿ ಮತದಾನ ಮಾಡಲು ಅವಕಾಶ
ಕೊಪ್ಪಳ,  : ಭಾರತ ಚುನಾವಣಾ ಆಯೋಗದ ಆದೇಶದಂತೆ ಕನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶೀಕ್ಷಕರ ಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-2020ರ ಚುನಾವಣೆಯ ಮತದಾನದ ವೇಳೆಯಲ್ಲಿ ಮತದಾರರು ಚುನಾವಣಾ ಗುರುತಿನ ಚೀಟಿ ತೋರಿಸದ ಪಕ್ಷದಲ್ಲಿ ಇತರೆ(9) ದಾಖಲೆಗಳನ್ನು(ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಭಾರತೀಯ ಪಾಸ್‌ಪೋರ್ಟ್, ಇಲಾಖೆ ಗುರುತಿನ ಚೀಟಿ, ಸಂಸದರು, ಶಾಸಕರು ವಿತರಿಸಿದ ಅಧಿಕೃತ ಗುರುತಿನ ಚೀಟಿ, ಮತಕ್ಷೇತ್ರದ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿAದ ನೀಡಿದ ಗುರುತಿನ ಚೀಟಿ, ವಿಶ್ವವಿದ್ಯಾಲಯ/ ಪದವಿ ಕಾಲೇಜುಗಳಲ್ಲಿ ನೀಡಿದ ಪದವಿ ಪ್ರಮಾಣಪತ್ರ ಮತ್ತು ಅಧಿಕೃತ ಪ್ರಾಧಿಕಾರದಿಂದ ವಿತರಿಸಿದ ವಿಕಲಚೇತನರ ಗುರುತಿನ ಚೀಟಿ) ತೋರಿಸಿ ಮತ ಚಲಾವಣೆ ಮಾಡಬಹುದಾಗಿರುತ್ತದೆ ಎಂದು ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ. ಪ್ರಸಾದ್  ತಿಳಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯ ಮತಪತ್ರದಲ್ಲ್ಲಿ ನೋಟಾ ಆಯ್ಕೆ ಇಲ್ಲ
ಭಾರತ ಚುನಾವಣಾ ಆಯೋಗದ ಆದೇಶದಂತೆ ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ ಚುನಾವಣೆಗಳ ಮತಪತ್ರದಲ್ಲಿ ನೋಟಾ (NOTA)    ಆಯ್ಕೆಗೆ ಇದ್ದ ಅವಕಾಶವನ್ನು ಹಿಂಪಡೆದಿದ್ದು, ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-2020 ರ ಮತಪತ್ರಗಳಲ್ಲಿ ನೋಟಾ ಆಯ್ಕೆ ಇರುವುದಿಲ್ಲ

ಅಕ್ಟೋಬರ್. 28 ರಂದು ಜರುಗಲಿರುವ ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗಾಗಿ 2020 ಜನವರಿ. 16 ರಂದು ಪ್ರಚೂರ ಪಡಿಸಿದ ಅಂತಿಮ ಮತದಾರರ ಪಟ್ಟಿಯ ವಿವರದನ್ವಯ ಪುರುಷ ಮತದಾರರು 1,693, ಮಹಿಳಾ ಮತದಾರರು 637 ಸೇರಿದಂತೆ ಒಟ್ಟು 2,330 ಮತದಾರರು ಹಾಗೂ ಅಕ್ಟೋಬರ್ 08, 2020 ರಂತೆ ಇರುವ ಮತದಾರರ ಪಟ್ಟಿಯನ್ವಯ ಪುರುಷ ಮತದಾರರು 1,840, ಮಹಿಳಾ ಮತದಾರರು 699 ಸೇರಿದಂತೆ ಒಟ್ಟು 2,539 ಮತದಾರರಿದ್ದಾರೆ ಎಂದು ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.

Please follow and like us:
error