ವಿಧಾನಪರಿಷತ್ ರದ್ದುಗೊಳಿಸಿ.-ರವಿ ಕೃಷ್ಣಾರೆಡ್ಡಿ

 

ಬೆಂಗಳೂರು :  ಇಂದು ವಿಧಾನಪರಿಷತ್ ನಲ್ಲಿ ನಡೆದಿರುವ ಕೋಲಾಹಲದ ಹಿನ್ನೆಲೆಯಲ್ಲಿ ವಿಧಾನಪರಿಷತ್ ರದ್ದುಗೊಳಿಸಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ  ರವಿಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೊಶ ವ್ಯಕ್ತಪಡಿಸಿರು ಅವರು ಇಷ್ಟೂ ದಿನಗಳ ಕಾಲ ಅಯೋಗ್ಯರು, ಅಧಮರು, ಗೂಂಡಾಗಳನ್ನು ವಿಧಾನಸಭೆಯಲ್ಲಿ ಮಾತ್ರ ನೋಡುತ್ತಿದ್ದೆವು. ಇಂದು ವಿಧಾನಪರಿಷತ್’ನಲ್ಲಿಯೂ ಅವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದು ಈಗ ಹಿರಿಯರ ಸಭೆಯೂ ಅಲ್ಲ, ಚಿಂತಕರ ಚಾವಡಿಯೂ ಅಲ್ಲ. ಅದೊಂದು ಪುಂಡರ ಪರಿಷತ್; ಅಲ್ಲಿ ನಡೆಯುವುದು ಪುಂಡರ ಗೋಷ್ಠಿ.

ಇವತ್ತು ಅಲ್ಲಿ ನಡೆದ ಮತ್ತು ನಡೆಯುತ್ತಿರುವ ಕಾರ್ಯಕಲಾಪ ರಾಜ್ಯಕ್ಕೆ ಒಂದು ಕಳಂಕ. ಸರ್ಕಾರವೂ ಸೇರಿದಂತೆ ಇದಕ್ಕೆ ಕಾರಣರಾಗಿರುವ ಎಲ್ಲರೂ ನಾಚಿಕೆ, ಮಾನ, ಸಂಯಮ ಇಲ್ಲದ ಪುಂಡರು, ಜಗಮೊಂಡರು. ತನ್ನ ಮೂಲೋದ್ದೇಶಗಳನ್ನು ಮರೆತಿರುವ ಮತ್ತು ವಿಕೃತಗೊಂಡಿರುವ ಘನತೆಹೀನ ವಿಧಾನಪರಿಷತ್ ಅನ್ನು ಸರ್ಕಾರ ಈ ಕೂಡಲೇ ರದ್ದು ಮಾಡಲಿ ಎಂದು ರವಿ ಕೃಷ್ಣಾರೆಡ್ಡಿ  ಆಕ್ರೊಶ ವ್ಯಕ್ತಪಡಿಸಿದ್ದಾರೆ.

Please follow and like us:
error