ವಿದ್ಯಾರ್ಥಿಗಳು ಪ್ರೋತ್ಸಾಹ ಧನ ಉಪಯೋಗಿಸಿಕೊಳ್ಳಬೇಕು

ತುಮಕೂರು:ಆಧುನಿಕ ಕಾಲದಲ್ಲಿ ಶಿಕ್ಷಣವೇ ಎಲ್ಲಾ ಆಗಿದೆ. ಶಿಕ್ಷಣ ಕಲಿತವರು ಮಾತ್ರ ಜೀವಿಸಲು ಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಆದ್ದರಿಂದ ಶಿಕ್ಷಣ ಅತೀ ಮುಖ್ಯ. ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಪ್ರೋತ್ಸಹಧನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಇಒ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಸಿ.ರಂಗಧಾಮಪ್ಪ ತಿಳಿಸಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಭವನದಲ್ಲಿ ಬುಧವಾರ ಬೆಳಗ್ಗೆ ಶ್ರೀರಾಮ್ ಟ್ರಾನ್ಸ್‌ಪೋಟ್ ಫೈನಾನ್ಸ್ ಕಂಪನಿ ಲಿಮಿಟೆಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನನ್ನ ಮಗ ಓದುತ್ತಾನೆ, ನನ್ನ ಮಗಳು ರ್‍ಯಾಂಕ್ ಬರುತ್ತಾಳೆ, ನನ್ನ ಮಗ ನನ್ನ ವಂಶದ ಮರ್ಯಾದೆ ಉಳಿಸುತ್ತಾನೆ ಎಂದು ತಂದೆ ತಾಯಿಗಳಿಗೆ ಧೈರ್ಯವಿರಬೇಕು, ಮಕ್ಕಳಿಗೆ ಓದುವ ಛಲವನ್ನು ಕೊಡಬೇಕು.ಡಾಕ್ಟರ್, ಇಂಜಿನಿಯರ್, ಟೀಚರ್, ಏನೇ ಆಗಿ ಆದರೆ ಮೊದಲು ಮನುಷ್ಯರಾಗಿ, ಸಂಬಂಧಗಳಿಗೆ ಬೆಲೆ ಕೊಡುವುದಾದರೆ ನೀನು ಮನುಷ್ಯರಾಗಿರುತ್ತೀರ ಎಂದರು. ಸಮಾಜದ ಋಣ ತೀರುಸುವ ಕೆಲಸ ಮಾಡಬೇಕೆಂದರು. ವಿದ್ಯಾರ್ಥಿ ದೆಸೆಯಲ್ಲಿ ಪ್ರೋತ್ಸಾಹ ಧನ ಮತ್ತು ಸ್ಕಾಲರ್ ಶಿಪ್‌ಗಳು ತುಂಬಾ ಪ್ರಮುಖವಾಗಿರುತ್ತವೆ. ಎಷ್ಟೋ ವಿದ್ಯಾರ್ಥಿಗಳಿಗೆ ಫೀಸ್ ಕಟ್ಟಲು ಸಾಧ್ಯವಾಗುವುದಿಲ್ಲ, ತಿನ್ನಲು ಒಂದು ಹೊತ್ತಿನ ಊಟಕ್ಕು ಇರುವುದಿಲ್ಲ ಅಂತಹ ಮಕ್ಕಳಿಗೆ ಪ್ರೋತ್ಸಾಹ ಧನವು ಬಹು ಉಪಯೋಗಕಾರಿಯಾಗಿವೆ. ಸರ್ಕಾರ ಶಿಕ್ಷಣ ನೀಡಿದರು ಅವರ ಶಿಕ್ಷಣದಲ್ಲಿ ಒಂದಿಷ್ಟು ಕರ್ಚು ವೆಚ್ಚಗಳು ಇದ್ದೇ ಇರುತ್ತವೆ, ಅಂತವರಿಗೆ ಇದು ಅತ್ಯುಪಯುಕ್ತವಾಗಲಿದೆ. ವಿದ್ಯಾರ್ಥಿಗಳು ಈಗಿನಿಂದಲೇ ಪ್ರತಿನಿತ್ಯ ಆತ್ಮವಿಶ್ವಾಸ ಕಠಿಣ ಪರಿಶ್ರಮದಿಂದ ವಿಧ್ಯಾಭ್ಯಾಸ ಮಾಡಿ ಉನ್ನತ ದರ್ಜೆಗೇರಬೇಕೆಂದು ಹೇಳಿದರು.ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಶ್ರೀಧರ್ ಮಠಮ್ ಪ್ರೆಸಿಡೆಂಟ್ ಶ್ರೀರಾಮ್ ಟ್ರಾನ್ಸ್ ಪೊರ್ಟ್ ಫೈನಾನ್ಸ್ ಕಂ.ಲಿ, ಶ್ರೀಮತಿ ಬಾ.ಹ ರಮಾಕುಮಾರಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಾಘವೇಂದ್ರ ಟಿ.ಆರ್ ರೀಜನರ್ ಬಿಜಿನೆಸ್ ಹೆಡ್, ಶ್ರೀರಾಮ್ ಟ್ರಾನ್ಸ್ ಪೊರ್ಟ್ ಫೈನಾನ್ಸ್ ಕಂ.ಲಿನ ಬಸವರಾಜ ಚಿಲ್ಕರಾಗಿ ಸೇರಿದಂತೆ ಬಹುತೇಕರು ಪಾಲ್ಗೊಂಡಿದ್ದರು.

Please follow and like us:
error