ವಿದ್ಯಾರ್ಥಿಗಳಿಗೆ , ಸಂಶೋಧಕರಿಗೆ ಗ್ರಂಥಸಂಪಾದನೆ ಶಾಸ್ತ್ರವು ಬಹಳಷ್ಟು ಉಪಯುಕ್ತವಾದುದಾಗಿದೆ- ಡಾ.ಹುಲಿಗೆಮ್ಮ ಬಿ

ಗ್ರಂಥ ಸಂಪಾದನೆ ಒಂದು ಅವಲೋಕನ ಉಪನ್ಯಾಸ
ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಘಟಕ ಮತ್ತು ಕನ್ನಡ ವಿಭಾಗ ಇವರ ಸಹಯೋಗದಲ್ಲಿ ಇಂದು ದಿನಾಂಕ ೮ ರಂದು ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಗ್ರಂಥ ಸಂಪಾದನೆ ಒಂದು ಅವಲೋಕನ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ವಿಶೇಷ ಉಪನ್ಯಾಸಕರಾಗಿ ಕೊಪ್ಪಳ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಹುಲಿಗೆಮ್ಮ ಬಿ ಆಗಮಿಸಿ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗು ಸಂಶೋಧಕರಿಗೆ ಗ್ರಂಥಸಂಪಾದನೆ ಶಾಸ್ತ್ರವು ಬಹಳಷ್ಟು ಉಪಯುಕ್ತವಾದುದಾಗಿದೆ.
ಆಧುನಿಕ ಕಾಲದಲ್ಲಿ ಕತೆ, ಕಾವ್ಯ, ಲೇಖನಗಳನ್ನು ಬರೆದು ಇಲ್ಲವೇ ಸಂಗ್ರಹಿಸಿ ಒಂದು ಕೃತಿಯನ್ನು ಹೊರತರಬಹುದು ಇದು ಒಂದು ಗ್ರಂಥ ಸಂಪಾದನೆ ಹೌದು.
ಆದರೆ ಹಳಗನ್ನಡ ಸಾಹಿತ್ಯ, ವ್ಯಾಕರಣ, ವಚನ , ದಾಸ ಸಾಹಿತ್ಯ ಹಾಗು ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಸಂಶೋಧನೆ ನೆಡೆಸಿ ಪಾಠಾಂತgಗೊಳಿಸಿ ಮತ್ತು ಸತ್ಯಾ ಶುದ್ದತೆಯಿಂದ ಪರಿಷ್ಕರಿಸಿ ಮೌಲ್ಯಯುತವಾದ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವಲ್ಲಿ ಆ ಕಾಲ ಘಟ್ಟದಲ್ಲಿಯೂ ಮಾಡಿದ್ದ ಪ್ರಯತ್ನವು ಸಹ ಗ್ರಂಥ ಸಂಪಾದನೆ. ಇದರಿಂದ ಗತ ಕಾಲದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ ತಿಳಿದು ಬರುತ್ತದೆ.
ಈ ದಿಸೆಯಲ್ಲಿ ಕರ್ನಲ್ ಮೆಕೆಂಜಿ, ಕಿಟೆಲ್, ಇ.ಪಿ.ರೈಸ್, ಉತ್ತಂಗಿ ಚನ್ನಪ್ಪ, ಫ.ಗು ಹಳಕಟ್ಟಿ, ಡಿ.ಎಲ್ ನರಸಿಂಹಾಚಾರ್, ಸಿ ಸಿ ಬಸವನಾಳ, ಆರ ಸಿ ಹಿರೇಮಠ, ಎಂ ಎಂ ಕಲಬುರ್ಗಿ ಇವರ ಸೇವೆ ಅಮುಲ್ಯವಾಗಿದೆ. ಮೊದಲು ಇದರ ಬಗ್ಗೆ ಸಾಹಿತ್ಯದ ಓದುಗರಿಗೆ ಏನು ತಿಳಿದಿರಲಿಲ್ಲ. ಇದೀಗ ಒಂದು ಪಠ್ಯವಾಗಿದಾಗಿನಿಂದ ಕನ್ನಡ ಸಾಹಿತ್ಯವನ್ನು ಕಟ್ಟುವ ದಿಸೆಯಲ್ಲಿ ಗ್ರಂಥಸಂಪಾಧನೆಯ ಮಹತ್ವ ತಿಳಿದು ಬರುತ್ತಲಿದೆ ಎಂದರು.
ಅಧ್ಯಕ್ಷತೆ ಪ್ರಾಚಾರ್ಯ ಡಾ.ಸಿ ಬಿ ಚಿಲಕರಾಗಿ ವಹಿಸಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೌದ್ದಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು. ವೇದಿಕೆಯಲ್ಲಿ ಐ.ಕ್ಯೂ.ಎ.ಸಿ ಘಟಕದ ಸಂಚಾಲಕ ಡಾ ಪ್ರಭುರಾಜನಾಯಕ್ .ಕನ್ನಡ ವಿಭಾಗದ ಮುಖ್ಯಸ್ಥೆ ಗಾಯತ್ರಿ ಭಾವಿಕಟ್ಟಿ ,ಇತಿಹಾಸ ಪ್ರಾಧ್ಯಾಪಕಿ ಶುಭಾ ಇದ್ದರು. ಸ್ವಾಗತ ಕನ್ನಡ ಪ್ರಾಧ್ಯಾಪಕಿ ಡಾ ಭಾಗ್ಯಜ್ಯೋತಿ ಬಿ, ವಂದನಾರ್ಪಣೆ ಕನ್ನಡ ವಿಭಾಗದ ಮುಖ್ಯಸ್ಥೆ ಗಾಯತ್ರಿ ಭಾವಿಕಟ್ಟಿ, ನಿರೂಪಣೆ ಅತಿಥಿ ಉಪನ್ಯಾಸಕ ಡಾ ತುಕಾರಾಂ ನಾಯ್ಕ ನೆರವೇರಿಸಿದರು. ಕನ್ನಡ ಅತಿಥಿ ಉಪನ್ಯಾಸಕರಾದ ಡಾ.ಮಹೇಶ ಪಾಟೀಲ, ಹನುಮಂತಪ್ಪ ಶೆಲೂಡಿ, ಹನುಮಂತಮ್ಮ ಅಲ್ಲದೇ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Please follow and like us:
error