ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ತುಳಸಿ ದಾಮೋದರ ವಿವಾಹ ಪೂಜಾ ಮಹೋತ್ಸವ

ಕೊಪ್ಪಳ, 21- ನಗರದ ಪ್ರಸಿದ್ಧ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ತುಳಸಿ ದಾಮೋದರ ವಿವಾಹ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಮಂಗಳವಾರರಾತ್ರಿ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದ ಬಳಿ ಇರುವ ತುಳಸಿ ವೃಂದಾವನಕ್ಕೆ ವಿಶೇಷ ದೀಪಾಲಂಕಾರ ಹಾಗೂ ಹೂಮಾಲೆಗಳಿಂದ ಅಲಂಕಾರಗೊಳಿಸಲಾಗಿತ್ತು.
ಸೋಮವಾರ ಏಕಾದಶಿಯಂದು ದೇವಸ್ಥಾನದಲ್ಲಿ ಶ್ರೀ ವಿಠ್ಠಲ ಕೃಷ್ಣನಿಗೆ ವಿಶೇಷ ಪೂಜೆ ಹಾಗೂ ನೂರಾರು ಭಕ್ತರಿಂದ ವಿಷ್ಣು ಸಹಸ್ರನಾಮ ಪಠ್ಠಣ ಜರುಗಿತು.
ತುಳಸಿ ವಿವಾಹ ನಿಮಿತ್ಯ ವಧು ಪಕ್ಷವನ್ನು ಸತೀಶಕುಮಾರ ಗುಳೇದಗುಡ್ಡ ದಂಪತಿಗಳು ಹಾಗೂ ಕುಮಾರ ಗುಳೇದಗುಡ್ಡ ದಂಪತಿಗಳು ಹಾಗೂ ವರಪಕ್ಷದ ಪರವಾಗಿ ರಾಮಾರಾವ್ ಕುಲವರ ಪಕ್ಷದ ಪರವಾಗಿ ರಾಮರಾವ್ ಕುಲಕರ್ಣಿ ಹನಕುಂಡಿ ದಂಪತಿಗಳು ವಹಿಸಿಕೊಂಡಿದ್ದರು.
ವಧು ಮತ್ತು ವರ ಪಕ್ಷದವರನ್ನು ವೃಂದಾವನ ಸಮೇತ ಮೆರವಣಿಗೆಯಲ್ಲಿ ದೇವಸ್ಥಾನದ ಬಳಿ ಕರೆತಂದು ಎದುರುಗೊಳ್ಳುವ ಹಾಗೂ ಆರತಕ್ಷತೆ ಕಾರ್ಯಕ್ರಮ ಅತ್ಯಂತ ವೈಭವವಾಗಿ ಪಂ ಗಿರಿಶ್ ಆಚಾರ್ಯ ಹಾಗೂ ಪ್ರಾಣೇಶ ಆಚಾರ್ಯ ಮತ್ತು ಸುರೇಶ ಆಚಾರ್ಯ ನೇತೃತ್ವದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಶ್ರೀಮದ್ ಯೋಗೀಶ್ವರ ಯಾಜ್ಞವಲ್ನ್ಯ ಪ್ರತಿಷ್ಠಾನದ ಅಧ್ಯಕ್ಷ ರಾಘವೇಂದ್ರ ಪೊತೆದಾರ, ಪದಾಧಿಕಾರಿಗಳಾದ ಮಂಜುನಾಥ ಹಳ್ಳಿಕೇರಿ, ಸಂಜೀವಮೂರ್ತಿ ದೇಶಪಾಂಡೆ, ಚಿದಂಬರ ಪಟವಾರಿ, ಮಧು ಪುಂಡಲಿಕ ಸೇರಿದಂತೆ ಹಲವರು ನೇತೃತ್ವವಹಿಸಿದ್ದರು ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಭಾಗವಹಿಸಿದ್ದರು.

Please follow and like us:
error