fbpx

ವಿಚಾರಣೆಯ ನೆಪದಲ್ಲಿ ವಿನಯ್ ಕುಲಕರ್ಣಿ ಬಂಧನ ಖಂಡನೀಯ : ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ವಿನಯ್ ಕುಲಕರ್ಣಿಯವರೊಂದಿಗೆ ಸಮಾಜ ಯಾವತ್ತೂ ಇರುತ್ತದೆ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪತ್ರಿಕೆ ಹೇಳಿಕೆ.

ಲಿಂಗಾಯತ ಸಮಾಜದ ಹಿರಿಯ ಮುಖಂಡ,ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಪೊಲೀಸರ ನಡೆ ಖಂಡಿಸಿ. ಲಿಂಗಾಯತ ಸಮಾಜದ ಮುಖಂಡ ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ಸ್ಥಳಿಯ ರಾಜಕೀಯ ದ್ವೇಷದ ಒತ್ತಡಕ್ಕೆ ಮಣಿದು ಸಿ ಬಿ ಐ ಅಧಿಕಾರಿಗಳು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಕ್ರಮವನ್ನು ಲಿಂಗಾಯತ ಸಮಾಜ ಹಾಗೂ ಶ್ರೀ ಪೀಠ ತೀವ್ರವಾಗಿ ಖಂಡಿಸುತ್ತದೆ.

ಕಳೆದ ಹಲವು ದಿನಗಳಿಂದ ಪ್ರಕಣವೊಂದರ ತನಿಖೆಯ ವಿಚಾರದ ನೆಪ ಮಾಡಿಕೊಂಡು ಅಧಿಕಾರಿಗಳು ಕುಲಕರ್ಣಿ ಯವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.ಈ ಪ್ರಕರಣದಲ್ಲಿ ಸಿಗಿಸುವ ಉದ್ದೇಶವನ್ನಿಟ್ಟುಕೊಂಡು ಉದ್ದೇಶಪೂರ್ವಕವಾಗಿಯೇ ಇಂದು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ.

ರಾಜ್ಯದ ಬಹು ಸಂಖ್ಯಾತ ಪಂಚಮಸಾಲಿ ಸಮಾಜವನ್ನು ಚುನಾವಣಾ ಸಮಯದಲ್ಲಿ ರಾಜಕೀಯವಾಗಿ ಬಳಸಿಕೊಂಡು ಅಧಿಕಾರಕ್ಕೆ ಏರಿದ ನಂತರ ರಾಜಕೀಯವಾಗಿ ಸಮರ್ಥ ಇರುವ ಸಮಾಜದ ಮುಖಂಡರನ್ನು ತುಳಿಯುವ ತಂತ್ರವನ್ನು ನಾವು ಯಾವ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ‌.ಪಂಚಮಸಾಲಿ ಸಮಾಜ ಬೆಂಬಲಿಸುವ ಪಕ್ಷ ರಾಜ್ಯದಲ್ಲಿ ಎಲ್ಲಾ ಸಮಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎನ್ನುವುದು ಇಂಥಹ ನಾಯಕರುಗಳು ಮರೆಯಬಾರದು.

ವಿನಯ ಕುಲಕರ್ಣಿ ಸಮಾಜದ ಒಬ್ಬ ನಾಯಕ.ಮುಂಬಯಿ ಕರ್ನಾಟಕದಲ್ಲಿ ಅವರದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆದವರು.ಸರ್ವ ಸಮಾಜದ ಒಳಿತಿಗಾಗಿ ಕೆಲಸ ಮಾಡಿ ಸರ್ವ ಜನಾಂಗದ ನಾಯಕರೆನಿಸಿಕೊಂಡವರು.ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಕೆಲವರು ಈ ಹಿಂದಿನಿಂದಲೂ ಧಾರವಾಡದಲ್ಲಿ ಮಾಡುತ್ತಾ ಬರುತ್ತಿದ್ದಾರೆ.ಅದು ನಮ್ಮ ಗಮನಕ್ಕೂ ಇದೆ.ಈ ಪ್ರಕರಣದ ಹಿಂದೆ ಯಾವ ಕಾಣದ ಕೈಗಳು ಕೆಲಸ ಮಾಡುತ್ತಲಿವೆ ಎನ್ನುವುದು ನಮಗೆ ಗೋತ್ತಿದೆ.ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಸರಿ ಇಲ್ಲವಾದರೆ ಮುಂಬರುವ ಜಿಲ್ಲಾ ಪಂಚಾಯತ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಸಮಾಜ ತಕ್ಕ ಪಾಠ ಕಲಿಸಲು ಸಿದ್ದವಾಗಿದೆ ಎನ್ನುವುದು ಈ ಪಕ್ಷಗಳ ನಾಯಕರು ಮರೆಯಬಾರದು.

ಈ ಕೂಡಲೇ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನರು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದರ ಮೂಲಕ ಸಮಾಜದ ನಾಯಕನಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸುತ್ತೇವೆ.ದ್ವೇಷದ ರಾಜಕಾರಣ ನಿಜಕ್ಕೂ ಶೋಭೆಯಲ್ಲ ಎಂದು

ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜ ಸ್ವಾಮೀಜಿ ಪೀಠಾಧ್ಯಕ್ಷರು, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ

ಕೂಡಲಸಂಗಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Please follow and like us:
error
error: Content is protected !!