ವಿಕೃ ಗೋಕಾಕ ಸಮ್ಮೇಳನ : ಕೊಪ್ಪಳದ ನಾಲ್ಕು ಹೋರಾಟಗಾರರ ಕುರಿತು ವಿಚಾರ ಗೋಷ್ಠಿ


ಕೊಪ್ಪಳ, ಫೆ. ೦೯: ಸುರ್ವೆ ಕಲ್ಚರಲ್ ಅಕಾಡೆಮಿ ರೂಪಿಸಿದ ಕಾರ್ಯಕ್ರಮ ಕೊಪ್ಪಳದ ಹೊರಾಟಗಾರರ ಮಾಲಿಕೆಯಲ್ಲಿ ಕೊಪ್ಪಳದ ನಾಲ್ಕು ಜನ ಹಿರಿಯ ಹೋರಾಟಗಾರರನ್ನು ಕುರಿತು ವಿಚಾರ ಗೋಷ್ಠಿಗಳನ್ನು ನಗರದ ಸಾಹಿತ್ಯ ಭವನದಲ್ಲಿ ಫೆ. ೧೪ ರಿಂದ ನಡೆಯುವ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಸಮ್ಮೇಳನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘಟಕರಾದ ರಮೇಶ ಸುರ್ವೆ ಮತ್ತು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಎಲ್ಲ ಯುಗಗಳಲಿ, ತನ್ನ ಇರುವನ್ನು ಜಗತ್ತಿಗೆ ತೋರಿಸಿದ ಮಹಾ ಕೋಪಣ ನಗರ, ಅಂದು ಜಿಲ್ಲೆಯಾಗಿ ಇಂದಿಗೂ ಜಿಲ್ಲೆಯಾಗಿ ಪ್ರಸಿದ್ದಿಯಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಇಂದಿನ ಸಾಮಾಜಿಕ ಹೋರಾಟಗಳವರೆಗೆ ಮಾದರಿಯಾದ ಜಿಲ್ಲೆ. ಜೈನರು, ಕದಬಂರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಚಾಲುಕ್ಯರು, ಟಿಪ್ಪುವರೆಗೆ ಅನೇಕ ರಾಜ ಮಹಾರಾಜರು ಕಿರೀಟದಾರಿಗಳಾಗಿ ಆಳಿದ ಮಹಾ ನಾಡು.
ಅಂದು ಕೀರಿಟ ಧರಿಸಿ ಆಳಿದವರ ಸಾಲಿನಲ್ಲಿ, ಇಂದು ಕೀರಿಟವಿಲ್ಲದ ಅನೇಕ ಹೋರಾಟಗಾರರು ಇಲ್ಲಿ ಆಳಿ ತಮ್ಮ ಅಸ್ತಿತ್ವ ಸಾರಿದ್ದಾರೆ. ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿದ್ದಾರೆ ಇತ್ತೀಚಿನ ಸಾಮಾಜಿಕ – ಸಾಹಿತ್ಯಿಕ – ಸಾಂಸ್ಕೃತಿಕ ಹಾಗೂ ಜನವರ ಹೋರಾಟಗಳಿಗೆ ದಾಖಲಾದವರು ಸಾವಿರಾರು ಜನ. ಇಂತಹವರಲ್ಲಿ ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟಿದೂರು, ಎಚ್. ಎಸ್. ಪಾಟೀಲ್ ಮತ್ತು ಡಾ. ಮಹಂತೇಶ ಮಲ್ಲನಗೌಡರು ಅವರನ್ನು ಗೌರವಿಸಿ ಅವರ ಬದುಕು – ಬರಹ – ಹೋರಾಟ ನೆನೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗೋಷ್ಠಿ ೧ ರಲ್ಲಿ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರನ್ನು ಕುರಿತು ಗೋಷ್ಠಿ ಫೆ. ೧೪ ರಂದು ನಡೆಯಲಿದೆ. ವಿ.ಬಿ. ರೆಡ್ಡರ್ ಅಧ್ಯಕ್ಷತೆವಹಿಸಲಿದ್ದಾರೆ. ಪತ್ರಕರ್ತ ನ್ಯೂಸ್ – ೧೮ ರಾಯಚೂರು ವರದಿಗಾರ, ಶರಣಪ್ಪ ಬಾಚಲಾಪುರ, ಕನ್ನಡ ಪ್ರಭ ಕೊಪ್ಪಳದ ಮುಖ್ಯ ವರದಿಗಾರ ಸೋಮರೆಡ್ಡಿ ಅಳವಂಡಿ ವಿಠ್ಠಪ್ಪರ ಬದುಕು ಬರಹ – ಹೋರಾಟ – ಪತ್ರಿಕೊಧ್ಯಮ ಸಾಹಿತ್ಯ ಕುರಿತು ಮಾತನಾಡಲಿದ್ದಾರೆ.
ಗೋಷ್ಠಿ ೨ ರಲ್ಲಿ ಹಿರಿಯ ಡಾ. ಮಹಾಂತೇಶ ಮಲ್ಲನಗೌಡರ ಕುರಿತು ಗೋಷ್ಠಿ ಫೆ. ೧೫ ರಂದು ನಡೆಯಲಿದೆ. ಶಿವಮೂಗ್ಗದ ಹಿರಿಯ ಸಾಹಿತಿ ಜಯದೇವಪ್ಪ ಜೈನಕೇರಿ ಅಧ್ಯಕ್ಷತೆವಹಿಸಲಿದ್ದು, ಕಾರ್ಯಕ್ರಮವನ್ನು ಡಾ. ವಸುಂಧರಾ ಭೂಪತಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರು ಉದ್ಘಾಟಸಲಿದ್ದಾರೆ. ಕವಿ ಸುರೇಶ ಕಂಬಳಿ, ಶಿಕ್ಷಕಿ ವಿಜಯಲಕ್ಷ್ಮಿ ಕೊಟಗಿಯವರು ಅವರ ಬರಹ – ಬದುಕು- ಹಾಗೂ ಕಾವ್ಯ ಮತ್ತು ಸಾಂಸ್ಕೃತಿಕ ಕೊಡುಗೆ ಕುರಿತು ಮಾತನಾಡಲಿದ್ದಾರೆ.
ಗೋಷ್ಠಿ ೩ ರಲ್ಲಿ ಕುದುರಿಮೋತಿ ಹೋರಾಟದಿಂದ ದಾಖಲಾದ ಅಲ್ಲಮಪ್ರಭು ಬೆಟ್ಟದೂರರ ಕುರಿತು ಫೆ. ೧೬ ರಂದು ನಡೆಯಲಿದೆ. ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ವೇದವ್ಯಾಸ ಎಚ್. ಕೌಲಗಿ ಅಧ್ಯಕ್ಷತೆವಹಿಸುವರು. ಕಾರ್ಯಕ್ರಮವನ್ನು ಕೊಪ್ಪಳದ ಸಂಸದ ಸಂಗಣ್ಣ ಕರಡಿಯವರು ಉದ್ಘಾಟಿಸಲಿದ್ದಾರೆ. ಪ್ರಿನ್ಸಿಪಾಲರು ಸಾಹಿತಿಗಳಾದ ಡಾ. ಸಿ.ಬಿ. ಚಿಲಕರಾಗಿ, ಸಾಹಿತಿ – ರಂಗಸಾಧಕ ಈಶ್ವರ ಹತ್ತಿಯವರು ಅಲ್ಲಮ ಪ್ರಭು ಬೆಟ್ಟದೂರರ ಜೀವನ, ಸಾದನೆ, ಸಾಹಿತ್ಯ, ಹೋರಾಟಗಳು ವಿವಿಧ ಮಜಲುಗಳನ್ನು ದಾಖಲಿಸಲಿದ್ದಾರೆ.
ಗೋಷ್ಠಿ ೪ ಹಿರಿಯರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್. ಪಾಟೀರ ಗೋಷ್ಠಿಯಲ್ಲಿ ಡಾ. ಕೆ.ಬಿ. ಬ್ಯಾಳಿ ಅಧ್ಯಕ್ಷತೆವಹಿಸಲಿದ್ದಾರೆ. ಡಾ ಫಕೀರಪ್ಪ ವಜ್ರಬಂಡಿ, ಮುಮ್ತಾಜ ಬೇಗಂ ಉಪನ್ಯಾಸಕರು ಎಚ್.ಎಸ್. ಪಾಟೀಲರ ಬದುಕು ಬರಹ ಮತ್ತು ಸಾಹಿತ್ಯ ಹಾಗೂ ಹೋರಾಟಗಳ ಕುರಿತು ದಾಖಲಿಸಲಿದ್ದಾರೆ. ನಾಲ್ಕು ಜನರು ಕೊಪ್ಪಳ ಜಿಲ್ಲೆ ಹಾಗೂ ನಗರದ ಎಲ್ಲ ಹೋರಾಟಗಳಲ್ಲಿ ಮತ್ತು ಒಂದಿಲ್ಲೊಂದು ಚಟುವಟಿಕೆಯಲ್ಲಿ ದಾಖಲಾದವರು.

Please follow and like us:
error