ವಸತಿ ನಿಲಯಕ್ಕೆ ಅರ್ಜಿಹಾಕಿದ ಎಲ್ಲಾ SC/ST ವಿದ್ಯಾರ್ಥಿಗಳ ಆಯ್ಕೆ ಮಾಡಿ- ಎಸ್‌ಎಫ್‌ಎ ಮನವಿ


ವಸತಿ ನಿಲಯಕ್ಕೆ ಅರ್ಜಿಹಾಕಿದ ಎಲ್ಲಾ SC/ST ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಎಸ್‌ಎಫ್‌ಎ ಸಂಘಟನೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಮಾಡಿದೆ.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಯು ಮನವಿ ಪತ್ರ ಸಲ್ಲಿಸಿ ಜಿಲ್ಲೆಯು ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತಿದ್ದು ಬಹುತೇಕ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣಕ್ಕಾಗಿ ಹಾಸ್ಟೆಲ್ ಗಳ ಮೇಲೆ ಅವಲಂಬನೆ ಆಗಿದ್ದು ಜಿಲ್ಲಾ ಕೇಂದ್ರ ಸೇರಿದಂತೆ ಕುಷ್ಟಗಿ, ಕೊಪ್ಪಳ, ಯಲಬುರ್ಗಾದಲ್ಲಿ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಅರ್ಜಿ ಹಾಕಿದರು ಸಹ, ಹಾಸ್ಟೆಲ್ ಸೌಲಭ್ಯ ಸಿಗಲಾರದ ಕಾರಣ ವಸತಿ ನಿಲಯದಿಂದ ವಂಚಿತರಾಗಿದ್ದಾರೆ, ಅಲ್ಲದೆ ದಿನನಿತ್ಯ ಸುಮಾರು 80 ಕಿಲೋಮೀಟರ್ ದೂರದ ಗಾಮಗಳಿಂದ ಬಸ್ಸಲ್ಲಿ ಪ್ರಯಾಣ ಮಾಡಬೇಕಾಗಿದ್ದು ಸಮಯಕ್ಕೆ ಸರಿಯಾಗಿ ಬಸ್ಸ್ ಸೌಲಭ್ಯ ಇರಲಾರದ ಕಾರಣ ವಿದ್ಯಾರ್ಥಿಗಳು ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲಾಗುತ್ತಿಲ್ಲ, ಇದ್ದರಿಂದಾಗಿ ಅನೇಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮೇಲೆ ಅಡ್ಡ ಪರಿಣಾಮ ಬೀರುತ್ತಿದ್ದು, ವಿದ್ಯಾರ್ಥಿಗಳಿಗೆ ಪಾಠಗಳು ಸಮರ್ಪಕವಾಗಿ ಸರಿಯಾಗಿ, ಅರ್ಥವಾಗುತ್ತಿಲ್ಲ ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಹಾಸ್ಟೆಲ್ ಬೇಕು ಎಂದು ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆ ಒತ್ತಾಯಿಸಿದೆ.

ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯಗಳಿಗೆ ಅರ್ಜಿ ಹಾಕಿದ ಬಹುತೇಕ ವಿದ್ಯಾರ್ಥಿಗಳು ದಿನ ನಿತ್ಯ ಹಾಸ್ಟೆಲ್ ಮತ್ತು ನಿಮ್ಮ ಇಲಾಖೆಯ ಕಛೇರಿಗಳಿಗೆ ಅಲೆದಾಡುತ್ತಿದ್ದು ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್ ಗಳಿಗಾಗಿ ನಿಮ್ಮ ತಾಲೂಕಿನ ಎಲ್ಲಾ ಕಛೇರಿ ಮುಂದೆ ಹಾಸ್ಟೆಲ್ಗಳಿಗೆ ಆಯ್ಕೆಮಾಡಿ ಕಳಿಸುತ್ತಾರೆ ಎಂಬ ಆಸೆಯೊಂದಿಗೆ ಕಾಯುತ್ತ ಕುಳಿತಿರುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ, ಆದ್ದರಿಂದ ದಯವಿಟ್ಟು ತಾವುಗಳು ಇದನ್ನು ಮನಗಂಡು ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಎಸ್‌ಎಫ್‌ಐ ಜಿಲ್ಲಾ ಸಮಿತಿಯು ವಿನಂತಿ ಮಾಡಿಕೊಂಡಿದೆ.


Sfi ರಾಜ್ಯ ಅಧ್ಯಕ್ಷ ಅಮರೇಶ ಕಡಗದ

Sfi ಜಿಲ್ಲಾ ಅಧ್ಯಕ್ಷರು ಸುಬಾನ್ ಸೈಯಾದ

ಜಿಲ್ಲಾ ಮುಖಂಡ ಶಿವಕುಮಾರ ಈಚನಾಳ

ಶಿವಕುಮಾರ ಚೌಡಪುರ ಮನವಿ ಸಲ್ಲಿಸಿದ್ದಾರೆ

Please follow and like us:
error