ವರ್ಗಾವಣೆಯಲ್ಲಿನಅವೈಜ್ಞಾನಿಕ ನಿಯಮವನ್ನು ಕೈ ಬೀಡಬೇಕು:ಬೀರಪ್ಪಅಂಡಗಿ ಚಿಲವಾಡಗಿ


ಕೊಪ್ಪಳ:ಶಿಕ್ಷಕರ ವರ್ಗಾವಣೆಯ ಮಾರ್ಗಸೂಚಿಯಲ್ಲಿ ವಿಕಲಚೇತನ ಶಿಕ್ಷಕರಿಗೆ ಸಂಬಂಧಿಸಿದ ಅವೈಜ್ಞಾನಿಕ ನಿಯಮಗಳನ್ನು ಕೈ ಬೀಡಬೇಕುಎಂದು ವಿಕಲಚೇತನ ನೌಕರರ ಸಂಘದರಾಜ್ಯಾಧ್ಯಕ್ಷರಾದ ಬೀರಪ್ಪಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ವಿಕಲಚೇತನ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದಇಂದು ದಿನದಧರಣಿ ಸತ್ಯಾಗ್ರವನ್ನು ಉದ್ದೇಶಿಸಿ ಮಾತನಾಡಿ,ಪ್ರಸಕ್ತ ಸಾಲೀನ ಶಿಕ್ಷಕರ ವರ್ಗಾವಣೆಯ ಮಾರ್ಗಸೂಚಿಯಲ್ಲಿ ವಿಕಲಚೇತನ ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ವಿಕಲಚೇತನರ ಮೀಸಲಾತಿಯನ್ನು ಬಳಿಸಿಕೊಂಡು ವರ್ಗಾವಣೆಯಾಗಬೇಕು ಮತ್ತೊಂದು ಅವದಿಗೆ ವರ್ಗಾವಣೆಗೆಅರ್ಜಿ ಸಲ್ಲಿಸಿದ ಸಮಯದಲ್ಲಿ ವಿಕಲಚೇತನ ಮೀಸಲಾತಿಯುಅನ್ವಯವಾಗುವುದಿಲ್ಲ ಎಂಬ ಅವೈಜ್ಞಾನಿಕ ನಿಯಮವನ್ನು ಅಳವಡಿಸಲಾಗಿದೆ ಅಲ್ಲದೇ ವಿಕಲಚೇತನ ಶಿಕ್ಷಕರು ನೇಮಕಾತಿಯ ಪೂರ್ವದಲ್ಲಿಅಂಗವಿಕಲತೆಗೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣ ಪತ್ರವುಒಂದುಜಿಲ್ಲೆಯಿಂದ ಮತ್ತೊಂದುಜಿಲ್ಲೆಯಜಿಲ್ಲಾಆಸ್ಪತ್ರೆಯಲ್ಲಿ ನೈಜತೆಯಕುರಿತು ವರದಿ ಬಂದ ನಂತರವೇ ನೇಮಕಾತಿಆದೇಶವನ್ನು ನೀಡುತ್ತಾರೆ.ನೇಮಕಾತಿ ಹೊಂದಿದ ನಂತರ ವಿಕಲಚೇತನ ನೌಕರರಿಗೆಇರುವಎಲ್ಲಾ ಸೌಲಭ್ಯವನ್ನು ವೇತನದಲ್ಲಿ ನೀಡುವುದರಜೊತೆಗೆ ಸಾಮಾನ್ಯ ನಾಗರಿಕರಿಗೆಯಾವರೀತಿಯಲ್ಲಿಇಡೀದೇಶಕ್ಕೆಒಂದುರೀತಿಯಗುರುತಿನಕಾರ್ಡಇರಲಿ ಎಂಬ ಉದ್ದೇಶದಿಂದಆಧಾರಕಾರ್ಡಯೋಜನೆಯನ್ನುಜಾರಿಗೆತರಲಾಗಿದಿಯೋಅದೇರೀತಿಯಲ್ಲಿದೇಶದಎಲ್ಲಾ ವಿಕಲಚೇತನರಿಗೆಒಂದೇರೀತಿಯಗುರುತಿನಕಾರ್ಡ ಸಲುವಾಗಿ ವಿಕಲಚೇತನರ ವಿಶಿಷ್ಟ ಗುರುತಿನ (ಯು.ಡಿ.ಐ.ಡಿ)ಕಾರ್ಡಜಾರಿಗೆತಂದಿದೆ.ಯು.ಡಿ.ಐ.ಡಿ.ಕಾರ್ಡಎಲ್ಲಾ ಸೌಲಭ್ಯಗಳಿಗೆ ಅನ್ವಯವಾಗುತ್ತದೆ ಎಂಬ ನಿಯಮವಿದ್ದರುಕೂಡಾ ಶಿಕ್ಷಣ ಇಲಾಖೆಯು ಶಿಕ್ಷಕರ ವರ್ಗಾವಣೆಯಲ್ಲಿ ೧ ನೇ ಆಗಸ್ಟ್ ೨೦೨೦ರ ನಂತರ ಪಡೆದತ್ರಿಸದಸ್ಯರಅಂಗವೈಕಲ್ಯತೆಯ ಪ್ರಮಾಣ ಪತ್ರವನ್ನುತರಬೇಕುಎಂಬುದನ್ನುಅವೈಜ್ಞಾನಿಕ ನಿಯಮವನ್ನು ಸರಕಾರವು ಕೈ ಬೀಡಬೇಕು.ಒಂದು ವೇಳೆ ನಿಯಮವನ್ನು ಸರಳಿಕರಣ ಮಾಡದಿದ್ದ ಪಕ್ಷದಲ್ಲಿ ನಮಗೆ ಆಗೀರುವಅನ್ಯಾಯದ ವಿರುದ್ದಕೋರ್ಟನಲ್ಲಿತಡೆಯಾಜ್ಞೆತರಲಾಗುತ್ತದೆಎಂದು ಹೇಳಿದರು.
ಸರಕಾರಿ ನೌಕರರ ಸಂಘದಜಿಲ್ಲಾಧ್ಯಕ್ಷರಾದ ನಾಗರಾಜಜುಮ್ಮಣ್ಣನ್ನವರ ಮಾತನಾಡಿ,ವಿಕಲಚೇತನ ಶಿಕ್ಷಕರ ಬೇಡಿಕೆಗಳು ನ್ಯಾಯುತವಾಗಿದ್ದು,ಅವುಗಳ ಬಗ್ಗೆ ಈಗಾಗಲೇ ಸರಕಾರಿ ನೌಕರರ ಸಂಘದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಪದೇ ಪದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಕೇಳುವುದು ಸರಿಯಾದಕ್ರಮವಲ್ಲ.ಸರಕಾರವುಇದ್ದರ ಹೆಚ್ಚು ಗಮನವನ್ನು ಹರಿಸಿ ಅವರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕಿದೆಎಂದು ಹೇಳಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದರಾಜ್ಯಖಜಾಂಚಿ ಮಂಜುನಾಥ.ಎಚ್,ಜಿಲ್ಲಾಗೌರವಾಧ್ಯಕ್ಷರಾದಚನ್ನಬಸಪ್ಪ ಬೆಲ್ಲದ,ಜಿಲ್ಲಾಖಜಾಂಚಿ ಕಾಶಿನಾಥ ಸಿರಿಗೇರಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ಶಂಕ್ರಮ್ಮ ಬಂಗಾರಶೆಟ್ಟರ್,ತಾಲೂಕಅಧ್ಯಕ್ಷರಾದಅಂದಪ್ಪ ಇದ್ಲಿ,ಕಾರ್ಯದರ್ಶಿ ಗಂಗಪ್ಪಅಂಬಿಗೇರ,ನಿರ್ದೇಶಕರಾದ ಮಾಲತಿ,ಲಕ್ಷ್ಮಣ್ಣ,ನಿಂಗಪ್ಪ ವಜ್ರಬಂಡಿ,ಗ್ಯಾನಪ್ಪ ಹಿಟ್ನಾಳ,ಅಕ್ಕಮಹಾದೇವಿ,ಹನುಮಂತಪ್ಪ ತಳವಾರ,ಗಣೇಶ,ವಿರೇಶ ಹುಲ್ಲೂರು,ಈಶಪ್ಪ ಮತ್ತೂರು,ಶಿವಯೋಗಪ್ಪ ಜಡಿ,ಹುಲುಗಪ್ಪದೊಡ್ಡಮನಿ,ಪ್ರಶಾಂತ ಮುಂತಾದವರು ಹಾಜರಿದ್ದರು.

Please follow and like us:
error