ವಕ್ಫ್ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಯೂಸುಫ್ ನಿಧನಕ್ಕೆ ಸಂತಾಪ


ಕೊಪ್ಪಳ, : ಕರ್ನಾಟಕ ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಯೂಸುಫ್ ಅವರು ಆಗಸ್ಟ್.07 ರಂದು ನಿಧನ ಹೊಂದಿದ್ದು, ಇವರ ನಿಧನಕ್ಕೆ ಕೊಪ್ಪಳದ ವಕೀಲರು ಹಾಗೂ ರಾಜ್ಯ ವಕ್ಫ್ ಮಂಡಳಿ ಸದಸ್ಯ ಆಸೀಫ್ ಅಲಿ ಸಂತಾಪ ಸೂಚಿಸಿದ್ದಾರೆ.
ಡಾ. ಮುಹಮ್ಮದ್ ಯೂಸುಫ್‌ರವರು ವಕ್ಫ್ ಮಂಡಳಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಎಲ್ಲಾ ವಕ್ಫ್ ದಾಖಲೆಗಳನ್ನು ಗಣಕೀಕೃತ ಮಾಡಲು ಶ್ರಮಿಸಿದ್ದಾರೆ. ಎಲ್ಲಾ ವಕ್ಫ್ ಮಂಡಳಿಗಳು ಹಾಗೂ ಅದರ ಆಸ್ತಿಗಳ ಅಭಿವೃದ್ಧಿ ಹಾಗೂ ಮುಸ್ಲಿಂ ಸಮುದಾಯದ ಕಲ್ಯಾಣಕ್ಕೆ ಒತ್ತು ನೀಡುವ ಗುರಿ ಹೊಂದಿದ್ದರು ಎಂದು ವಕೀಲರು ಹಾಗೂ ರಾಜ್ಯ ವಕ್ಫ್ ಮಂಡಳಿ ಸದಸ್ಯ ಆಸೀಫ್ ಅಲಿರವರು ಸಂತಾಪ ಸೂಚಿಸಿದ್ದಾರೆ.

Please follow and like us:
error