ವಕೀಲರ ಸಂಕಷ್ಟಗಳಿಗೆ ಸ್ಪಂದಿಸುವವರಿಲ್ಲವೇ ?

Hasan :  ಈ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ವಕೀಲರ ಪಾತ್ರ ತುಂಬಾ ಮಹತ್ವದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶವನ್ನು ಕಟ್ಟುವಲ್ಲಿ ಹಾಗೂ ದೇಶವನ್ನು ಮುನ್ನಡೆಸುವಲ್ಲಿ ವಕೀಲರ ಪಾತ್ರ ಸ್ಮರಣೀಯವಾದದು . ಈ ದೇಶದ ಸಂಸತ್ತಿನಲ್ಲಿ ವಿಧಾನಸಭೆಗಳಲ್ಲಿ ಹಾಗೂ ವಿಧಾನ ಪರಿಷತ್‌ ನಲ್ಲಿ . ಹಲವಾರು ವಕೀಲರು ಜನಪ್ರತಿನಿಧಿಗಳಾಗಿ ಅಯ್ಕೆಯಾಗಿ ಆಡಳಿತ ನಡೆಸುತ್ತಿದ್ದಾರೆ.

ಈ ದೇಶದ ನ್ಯಾಯಾಂಗಕ್ಕೆ ವಕೀಲರ ಕೊಡುಗೆ ತುಂಬಾ ಮಹತ್ವದ್ದು. ದಿನ ನಿತ್ಯ ನ್ಯಾಯಾಧಾನ ವ್ಯವಸ್ಥೆಯಲ್ಲಿ ವಕೀಲರು ತಮ್ಮದೇಯಾದ ಪಾತ್ರವಹಿಸುವ ಮೂಲಕ ಶ್ರಮಿಸುತ್ತಿದ್ದಾರೆ.

ಈ ಕರೂನಾ ಮಾಹಮಾರಿ ದಾಳಿಯಿಂದಾಗಿ ಮಾರ್ಚ್ ಎರಡನೇ ವಾರದಿಂದ ನ್ಯಾಯಾಲಯದ ಕಾರ್ಯಕಲಾಪಗಳು ಸ್ಥಗಿತಗೊಂಡಿವೆ.( ಕೇವಲ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸುವದನ್ನು ಹೊರತುಪಡುಸಿ)
ಈಗಾಗಲೇ ಸರಕಾರಗಳು ಮೂರು ಬಾರಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳ ಕಾಲ ಕಾಲಕ್ಕೆ ಆದೇಶ ಹೊರಡಿಸಿ ನ್ಯಾಯಾಲಯದ ಕಾರ್ಯಕಲಾಪಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.

ನ್ಯಾಯಾಲಯಗಳು ಬಂದ್ ಆಗಿದ್ದರಿಂದ ದಿನ ನಿತ್ಯ ಕೆಲಸ ನಿರ್ವಹಣೆ ಮಾಡಿ ದುಡಿಯುತ್ತಿದ್ದ ವಕೀಲರಿಗೆ ಆದಾಯ ನಿಂತು ಹೊಗಿದೆ. ‌ಅದರಲ್ಲೂ ಈ ಕರೊನಾ ದಾಳಿಯಿಂದಾಗಿ ಯುವ ವಕೀಲರಿಗೆ ತೀರ್ವವಾದ ತೊಂದರೆ ಹಾಗೂ ಸಂಕಷ್ಟ ಎದುರಿಸುತಿದ್ದಾರೆ . ಹಲವಾರು ಯುವ ವಕೀಲರು ಹಿರಿಯ ವಕೀಲರ ಬಳಿ ಜೂನಿಯರ್ ವಕೀಲರಾಗಿ ಕೇಲಸ ಮಾಡುತ್ತಾರೆ. ಕೆಲವು ಹಿರಿಯ ವಕೀಲರು ಯುವ ವಕೀಲರಿಗೆ ಸ್ವಲ್ಪಮಟ್ಟಿಗೆ ಹಣಕಾಸಿನ ಸಹಾಯ ಮಾಡುತ್ತಾರಾದರೂ ಸದರಿ ಹಣ ದಿನ ನಿತ್ಯದ ಬದುಕಿಗೆ ಸಾಲುತ್ತಿಲ್ಲ.

ಹಲವು ವಕೀಲರು ತಮ್ಮ ಕುಟುಂಬದವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನ್ಯಾಯಾಲಯ ಬಂದ್ ಆಗಿರುವುದರಿಂದ ಯಾವುದೇ ರೀತಿಯ ಆದಾಯ ಇಲ್ಲದೇ ಕುಟುಂಬ ನಿರ್ವಹಣೆ ಮಾಡುವುದು ಬಹಳ ಕಷ್ಟಕರವಾಗಿ ಪರಿಣಮಿಸಿದೆ. ಅಲ್ಲದೇ ವೃತ್ತಿ ಬದುಕಿಗಾಗಿ ಹಲವು ವಕೀಲರು ವಕೀಲರ ಕಚೇರಿ ನಡೆಸಲು ಕಟ್ಟಡ ಹಾಗೂ ಮಳಿಗೆಗಳನ್ನು ಬಾಡಿಗೆ ಆದಾರದ ಮೇಲೆ ಪಡೆದು ಕೆಲಸ ಮಾಡುತ್ತಾ ಬಂದಿದ್ದಾರೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಟುಂಬದ ಖರ್ಚು ವೆಚ್ಚವನ್ನು ನೀಗಿಸುವದು ಹಾಗೂ ಮನೆ ಬಾಡಿಗೆ ಹಾಗೂ ಆಫೀಸ್ ಬಾಡಿಗೆ ಕಟ್ಟುವುದಕ್ಕೆ ತಿರ್ವವಾದ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ವಕೀಲರ ಸಂಕಷ್ಟಗಳಿಗೆ ಇದುವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ರೀತಿಯಿಂದ ಸ್ಪಂದಿಸುವ ಕಾರ್ಯ ಮಾಡಿಲ್ಲ ಹಾಗೂ ವಕೀಲರಿಗಾಗಿ ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ಗಳನ್ನು ಘೊಷಣೆ ಮಾಡದಿರುವದು ವಕೀಲರನ್ನು ಕಂಗೆಡಿಸಿದೆ. ಸರಕಾರಗಳು ವಕೀಲರ ಸಮುದಾಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿ ವಕೀಲರ ಹಿತ ಕಾಯುವಲ್ಲಿ ವಿಪಲವಾಗಿವೆ.

ಚುನಾವಣೆ ಬಂದಾಗ ಮತಯಾಚನೇಗಾಗಿ ವಕೀಲರ ಸಂಘಗಳಿಗೆ ಬೇಟಿ ನೀಡಿ ಭಾಷಣ ಮಾಡಿ ಹೋದ ರಾಜಕೀಯ ನಾಯಕರು ಹಾಗೂ ಸಂಸದರು ಶಾಸಕರು ಇದೂ ವರೆಗೂ ವಕೀಲರಿಗಾಗಿ ಯಾವದೇ ರೀತಿಯ ಸಹಾಯ ಮಾಡದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.

ಸಂಸದರು ಹಾಗೂ ಶಾಸಕರು ತಮ್ಮ ವೇತನ ಹಾಗೂ ಭತ್ಯೆ ಇತರ ಸೌಲಭ್ಯಗಳನ್ನು ಹೆಚ್ಚಿಸಲು ತರಾತುರಿಯಲ್ಲಿ ಕಾಯ್ದೆಗಳನ್ನು ಪಾಸು ಮಾಡುವಾಗ ವಕೀಲರ ಹಿತಾಸಕ್ತಿ ಕಾಪಾಡುವಲ್ಲಿ ಮಾತ್ರ ನಿರಂತರವಾಗಿ ನಿರ್ಲಕ್ಷ್ಯ ದೋರಣೆ ಅನುಸರಿಸುತ್ತಿದ್ದಾರೆ.

ವಕೀಲರ ಹಿತಾಸಕ್ತಿ ಕಾಪಾಡಲು ಇರುವ ಹಾಗೂ ವಕೀಲರ ಏಳ್ಗೆಗಾಗಿ ಶ್ರಮಿಸುವ ಭಾರತ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತುಗಳು ಕೂಡಾ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ಹಾಕಿ ಹಣಕಾಸಿನ ನೇರವು ಹಾಗೂ ಹೆಚ್ಚಿನ ಅನುದಾನ ಪಡೆಯುವಲ್ಲಿ ವಿಳಂಬ ದೋರಣೆ ಅನುಸರಿಸುತ್ತಿವೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಪಧಾದಿಕಾರಿಗಳು ಹಾಗೂ ರಾಜ್ಯದ ವಿವಿದ ವಕೀಲರ ಸಂಘಗಳು ಹಲವಾರು ಮನವಿ ಸಲ್ಲಿಸಿ ವಕೀಲರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಸಂಕಷ್ಟ ಸಂಧರ್ಭಗಳಲ್ಲಿ ಹಣಕಾಸಿನ ಸಹಾಯ ನೀಡಲು ಅನುಕೂಲವಾಗುವುದಕ್ಕೆ ಅಗತ್ಯವಾದ ಹಣಕಾಸಿನ ನೆರವು ಹಾಗೂ ಅನುದಾನ ನೀಡುವಂತೆ ಕೇಳಿದರೂ ಸರಕಾರಗಳು ಕಿವುಡುತನ ಪ್ರದರ್ಶನ ಮಾಡಿ ಯಾವುದೇ ರೀತಿಯ ಅನುದಾನ ನೀಡದೇ ವಕೀಲ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿವೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಕೀಲ ಕಾಯ್ದೆಯಡಿ
ವಕೀಲರ ಕಲ್ಯಾಣ ನಿಧಿಯನ್ನು ಸ್ಥಾಪಿಸಿದೆ. ವಕೀಲರ ಕಲ್ಯಾಣ ನಿಧಿಯ ಸದಸ್ಯರಾದ ವಕೀಲರು ಪ್ರತಿ ವರ್ಷ ವಂತಿಗೆ ಹಣ ಸಂದಾಯ ಮಾಡುತ್ತಾ ಬರಲಾಗುತ್ತಿದೆ. ವಕೀಲರ ಕಾಯ್ದೆ ಪ್ರಕಾರ ವಕೀಲರು ಮೃತರಾದಾಗ ಅವರ ಕುಟುಂಬ ಸದಸ್ಯರಿಗೆ ಹಣ ನೀಡುವ ವ್ಯವಸ್ಥೆ ಇದೆ ಅಲ್ಲದೇ ತೀರ್ವವಾದ ವೈದ್ಯಕೀಯ ಚಿಕಿತ್ಸೆಯ ಸಂಧರ್ಭದಲ್ಲಿ ಸ್ವಲ್ಪಮಟ್ಟಿಗೆ ಹಣ ನೀಡುವ ವ್ಯವಸ್ಥೆ ಇದೆ ಅದರಂತೆ 75 ವರ್ಷವಾದ ನಂತರ ವಕೀಲರು ಸನ್ನದು ಸರಂಡರ್ ಮಾಡಿದಾಗ ಮಾತ್ರ ಹಣ ನೀಡುವ ವ್ಯವಸ್ಥೆ ಇದೆ. ಇಂತಹ ಸಂದಿಗ್ಧತೆಯನ್ನು ನೋಡಿದರೆ ಈ ಲಾಕ್ ಡೌನ್ ಅವದಿಯ ಸಂಕಷ್ಟ ಎದುರಿಸುತ್ತಿರುವ ವಕೀಲರಿಗೆ ಯಾವುದೇ ರೀತಿಯಿಂದಲೂ ಸಹಕಾರಿಯಾಗಿಲ್ಲ. ವಕೀಲರ ಕಾಯ್ದೆಗೆ ತಿದ್ದುಪಡಿ ಮಾಡಿ ಸರಕಾರಗಳಿಂದ ಅಗತ್ಯವಾದ ಹಣಕಾಸು ನೆರವು ಹಾಗೂ ಅನೂದಾನ ಪಡೆದು ಸಂಕಷ್ಟದ ಸಮಯದಲ್ಲಿ ವಕೀಲರಿಗೆ ಹಣಕಾಸಿನ ಸಹಾಯ ಮಾಡಿ ಸ್ಪಂದಿಸುವ ಕಾರ್ಯ ನಡೆಯಬೇಕಿದೆ.

ಇತ್ತಿಚೆಗೆ ಕರ್ನಾಟಕ ರಾಜ್ಯ ವಕೀಲ ಪರಿಷತ್ತು ತೀರ್ವವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ 2010 ರ ನಂತರ ನೊಂದಣಿಯಾದ ವಕೀಲರಿಗೆ ಮಾತ್ರವೇ ಸ್ವಲ್ಪ ಹಣ ಸಹಾಯ ಮಾಡಲು ಅರ್ಜಿ ಆಹ್ವಾನಿಸಿತ್ತು ನಂತರ ಹಲವಾರು ಷರತ್ತುಗಳನ್ನು ಒಳಗೊಂಡ ಘೋಷಣಾ ಪತ್ರಗಳನ್ನು ಸಲ್ಲಿಸಲು ತಿಳಿಸಿತ್ತು. ಕೆಲವು ವಕೀಲರು ಅರ್ಜಿ ಸಲ್ಲಿಸಿ ಹಣಕಾಸಿನ ಸಹಾಯದ ನೀರಿಕ್ಷೆಯಲ್ಲಿದ್ದಾರೆ. ಇನ್ನೂ ಹಲವು ವಕೀಲರಿಗೆ ಅರ್ಜಿ ಸಲ್ಲಿಸಲು ಹಲವು ಅನಾನುಕೂಲ ಉಂಟಾಗಿ ಅರ್ಜಿಗಳನ್ನು ಸಲ್ಲಿಸಲು ಮತ್ತೋಮ್ಮೆ ಅವಕಾಶ ಕೇಳುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 1 ಲಕ್ಷ ವಕೀಲರು ವೃತ್ತಿ ಮಾಡುತ್ತಿದ್ದಾರೆ.
ಇದರಲ್ಲಿ 75%ರಷ್ಟು ಯುವ ವಕೀಲರೇ ಇದ್ದಾರೆ ಇವರ ಹಿತ ಕಾಪಾಡುವರು ಇಲ್ಲವೇ? ಎನ್ನುವಂತಾಗಿದೆ.

ಈ ಕರೂನಾ ‌ ಹಾವಳಿಯ ಲಾಕ್ ಡೌನ್ ಅವದಿಯಲ್ಲಿ ವಕೀಲರ ಸಂಕಷ್ಟ ಹಾಗೂ ಸಮಸ್ಯೆಗಳನ್ನು ಅರಿತ ತೆಲಂಗಾಣ ಹಾಗೂ ದೆಹಲಿ ಮತ್ತು ಇತರ ಕೇಲವು ರಾಜ್ಯ ಸರಕಾರಗಳು ವಕೀಲರಿಗೆ ಹಣಕಾಸು ನೇರವು ನೀಡಿ ವಕೀಲರ ಸಂಕಷ್ಟಗಳಿಗೆ‌ ಸ್ಪಂದಿಸುವ ಕಾರ್ಯ ಮಾಡಿರುವ ಮಾದರಿಯಲ್ಲಿ ಕರ್ನಾಟಕ ಸರಕಾರವು ಕೂಡಾ ವಕೀಲರಿಗಾಗಿ ವಿಶೇಷ ಪ್ಯಾಕೆಜ್ ಘೊಷಣೆ ಮಾಡಿ ವಕೀಲರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.

ಇತ್ತೀಚಿಗೆ ವಕೀಲರೊಬ್ಬರೂ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿ ವಕೀಲರಗೆ ಸಹಾಯ ಕೋರಿದ್ದರು ಮಾನ್ಯ ನ್ಯಾಯಾಲಯದವರೂ ವಿಚಾರಣೆ ನಡೆಸಿ ಹಣಕಾಸಿನ ಲಬ್ಯತೆ ಆದರಿಸಿ ಆರ್ಥಿಕ ಸಂಕಷ್ಟ ಎದುರಿಸುವ ಅಗತ್ಯ ವಕೀಲರಿಗೆ ಸಹಾಯ ನೀಡಲು ತಿಳಿಸಿದ ಮಾಹಿತಿ ಇದೆ. ಆದರೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಇದೂವರೆಗೂ ವಕೀಲರಿಗೆ ಯಾವುದೇ ರೀತಿಯ ಹಣಕಾಸಿನ ಸಹಾಯ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದೆ.

ವಕೀಲ ವೃತ್ತಿಯನ್ನೇ ನಂಬಿಕೊಂಡು ಬದುಕು ನಡೆಸುತ್ತಿರುವ ವಕೀಲರ ಪರಿಸ್ಥಿತಿ ಬಹಳ ಆತಂಕಕಾರಿಯಾಗಿದೆ ಈ ಕರೂನಾ ಹಾವಳಿ ಇಲ್ಲಿಗೆ ನಿಲ್ಲುವ ಯಾವ ಲಕ್ಷಣಗಳು ಇಲ್ಲ. ಕರೊನಾ ಮಾಹಾ ಮಾರಿಗೆ ವ್ಯಾಕ್ಷಿನ್ ಅಥವಾ ರೋಗ ಗುಣಪಡಿಸಬಹುದಾದ ಔಷಧಿ ಲಬ್ಯವಾಗುವವರೆಗೂ ಪರಿಸ್ಥಿತಿ ತೀರಾ ಚಿಂತಾಜನಕವಾಗಲಿದೆ. ಇದುವರೆಗೂ ನ್ಯಾಯಾಲಯಗಳು ಆರಂಬವಾಗಿಲ್ಲ.
ಇನ್ನು ಮುಂದೆ ನ್ಯಾಯಾಲಯಗಳು ಆರಂಬವಾದರೂ ಹಲವಾರು ನಿರ್ದಿಷ್ಟ ಷರತ್ತು ಹಾಗೂ ನಿಯಮಗಳನ್ನು ವಿಧಿಸುವ ಲಕ್ಷಣಗಳಿರುವಾಗ ವಕೀಲರಿಗೆ ಯಾವದೇ ಆದಾಯ ಬರುವದು ಬಹಳ ಕಷ್ಟ. ಅಲ್ಲದೇ ಈ ಲಾಕ್ ಡೌನ್ ಹಾಗೂ ಕರೋನಾ ಪರಿಣಾಮವಾಗಿ ದೇಶದ ಎಲ್ಲಾ ವಲಯಗಳು ಆರ್ಥಿಕವಾಗಿ ತಿರ್ವವಾದ ಹಿನ್ನೆಡ ಅನುಭವಿಸುವಾಗ ವಕೀಲರಿಗೆ ಆದಾಯ ಬರುವದು ಬಹಳ ಕಷ್ಟಕರವಾಗಿದೆ.

ಈ ಹಿನ್ನಲೆಯಲ್ಲಿ ಸರಕಾರಗಳು ವಕೀಲರಿಗಾಗಿ ಹಣಕಾಸು ಸಹಾಯದ ವಿಶೇಷ ಪ್ಯಾಕೇಜ್ ಘೊಷಣೆ ಮಾಡಬೇಕು ಮತ್ತು ವಕೀಲರ ಹಿತ ಕಾಯಲು ಭಾರತ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಅಗತ್ಯವಾದ ಹಣಕಾಸಿನ ಸಹಾಯ ಮತ್ತು ಅನುದಾನ ಒದಗಿಸಿ ವಕೀಲರ‌ ಹಿತ ಕಾಯಬೇಕು ಮತ್ತು ಭಾರತ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸರಕಾರಗಳ ಮೇಲೆ ಒತ್ತಡ ಹಾಕಿ ಹಣಕಾಸಿನ ಸಹಾಯ ಪಡೆದು ವಕೀಲರ ಹಿತ ಕಾಪಾಡಲು  ಅನ್‌ಷಾದ್ ಪಾಳ್ಯ, ವಕೀಲರು.ಹಾಸನ. ರಾಜ್ಯ ಸಮಿತಿಯ ಸದಸ್ಯರು ಅಖಿಲ ಭಾರತ ವಕೀಲರ ಒಕ್ಕೂಟ ಕರ್ನಾಟಕ ಆಗ್ರಹಿಸಿದ್ದಾರೆ

Please follow and like us:
error