ಲೋಕಸಭಾ ಚುನಾವಣೆ; ಕೊಪ್ಪಳ 8 ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳ ನೇಮಕ

ಕೊಪ್ಪಳ ಮಾ :

ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದೆ. ಕೊಪ್ಪಳ ಜಿಲ್ಲೆ ಬಳ್ಳಾರಿಯ ಸಿರುಗುಪ್ಪ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಸಿಂಧನೂರು ತಾಲ್ಲೂಕುಗಳನ್ನು ಒಳಗೊಂಡ ಕ್ಷೇತ್ರ ಇದಾಗಿದ್ದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಚುನಾವಣಾಧಿಕಾರಿಯಾಗಿರುವರು.
ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಾರ್ಚ್ 28 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಉಳಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಹಾಯಕ ಚುನಾವಣಾಧಿಕಾರಿನ್ನು ನೇಮಕ ಮಾಡಲಾಗಿದೆ.
ವಿಧಾನಸಭಾ ಕ್ಷೇತ್ರವಾರು ನೇಮಕವಾಗಿರುವ ಸಹಾಯಕ ಚುನಾವಣಾಧಿಕಾರಿಗಳ ವಿವರ;
58- ಸಿಂಧನೂರು; ಸಹಾಯಕ ಚುನಾವಣಾಧಿಕಾರಿ ರಾಯಚೂರು ರೇಷ್ಮೆ ಉಪ ನಿರ್ದೇಶಕ ಚಂದ್ರಮೂರ್ತಿ, ಕಛೇರಿ ವಿಳಾಸ- ತಹಶೀಲ್ದಾರ ಕಾರ್ಯಾಲಯ ಸಿಂಧನೂರು (ಮೊ.ಸಂ. 9449630398). 59- ಮಸ್ಕಿ; ಸಹಾಯಕ ಚುನಾವಣಾಧಿಕಾರಿ ರಾಯಚೂರು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಮ್ಮದ್ ಅಲಿ, ಕಛೇರಿ ವಿಳಾಸ- ತಹಶೀಲ್ದಾರ ಕಾರ್ಯಾಲಯ ಮಸ್ಕಿ (ಮೊ.ಸಂ. 9448999236). 60-ಕುಷ್ಟಗಿ; ಸಹಾಯಕ ಚುನಾವಣಾಧಿಕಾರಿ ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಈರಪ್ಪ ಆಶಾಪೂರ, ಕಛೇರಿ ವಿಳಾಸ- ತಹಶೀಲ್ದಾರ ಕಾರ್ಯಾಲಯ ಕುಷ್ಟಗಿ (ಮೊ.ಸಂ. 9731042063). 61-ಕನಕಗಿರಿ; ಸಹಾಯಕ ಚುನಾವಣಾಧಿಕಾರಿ ಕೊಪ್ಪಳ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳೊಳ್ಳಿ, ಕಛೇರಿ ವಿಳಾಸ- ತಾಲ್ಲೂಕು ಪಂಚಾಯತ್ ಕಾರ್ಯಾಲಯ ಗಂಗಾವತಿ (ಮೊ.ಸಂ. 9480871001). 62-ಗಂಗಾವತಿ; ಸಹಾಯಕ ಚುನಾವಣಾಧಿಕಾರಿ ಕೊಪ್ಪಳ ಉಪವಿಭಾಗಾಧಿಕಾರಿ ಸಿ.ಡಿ.ಗೀತಾ, ಕಛೇರಿ ವಿಳಾಸ- ತಹಶೀಲ್ದಾರ ಕಾರ್ಯಾಲಯ ಗಂಗಾವತಿ (ಮೊ.ಸಂ. 9886660847). 63-ಯಲಬುರ್ಗಾ; ಸಹಾಯಕ ಚುನಾವಣಾಧಿಕಾರಿ ಕೊಪ್ಪಳ ಜಂಟಿ ಕೃಷಿ ನಿರ್ದೇಶಕಿ ಶಬಾನಾ. ಎಂ. ಶೇಖ್, ಕಛೇರಿ ವಿಳಾಸ- ತಹಶೀಲ್ದಾರ ಕಾರ್ಯಾಲಯ ಯಲಬುರ್ಗಾ (ಮೊ.ಸಂ. 8277932100). 64-ಕೊಪ್ಪಳ; ಸಹಾಯಕ ಚುನಾವಣಾಧಿಕಾರಿ ಕೊಪ್ಪಳ ಸಹಕಾರ ಸಂಘಗಳ ಉಪನಿಭಂದಕ ಎಂ.ಪಿ.ಶೆಳ್ಳಿಕೇರಿ, ಕಛೇರಿ ವಿಳಾಸ- ತಹಶೀಲ್ದಾರ ಕಾರ್ಯಾಲಯ ಕೊಪ್ಪಳ (ಮೊ.ಸಂ. 9916084155). 92-ಸಿರುಗುಪ್ಪ; ಸಹಾಯಕ ಚುನಾವಣಾಧಿಕಾರಿ ಬಳ್ಳಾರಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ .ಎನ್. ಮುಳಗುಂದ, ಕಛೇರಿ ವಿಳಾಸ- ತಹಶೀಲ್ದಾರ ಕಾರ್ಯಾಲಯ ಸಿರುಗುಪ್ಪ (ಮೊ.ಸಂ. 9742917570).

========

Please follow and like us:
error