ಲೋಕಸಭಾ ಚುನಾವಣೆ : ಕೊಪ್ಪಳ ಕ್ಷೇತ್ರದಿಂದ ಕುರುಬ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಆಗ್ರಹ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆ

2019 ನೇ ಸಾಲಿನ ಲೋಕಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಕುರುಬ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಕುರಿತು .

ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಯುವ ಘರ್ಜನ ( 8 ) ಸಂಘಟನೆಯ ಹೈದ್ರಬಾದ ಕರ್ನಾಟಕ ವಿಭಾಗಿಯ ಅಧ್ಯಕ್ಷರರಾದ ಗದ್ದೆನಗೌಡ ಪಾಟೀಲ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ, ಪ್ರಸ್ತುತ 2019 ನೇ ಸಾಲಿನ ಲೋಕಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ನಮ್ಮ ಕುರುಬ ಸಮಾಜದ ಟಿಕೇಟ್ ಆಕಾಂಕ್ಷಿಗಳಾದ ಕೆ . ವೀರುಪಾಕ್ಷಪ್ಪ ಮಾಜಿ ಸಂಸದರು , ಬಸವರಾಜ ಹಿಟ್ನಾಳ , ಹಾಗೂ ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ ,ಕೆ . ಕರಿಯಪ್ಪ ಕೆ . ಪಿ . ಸಿ . ಸಿ ಕಾರ್ಯದರ್ಶಿಗಳು , ರಾಜಶೇಖರ ಹಿಟ್ನಾಳ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ಹಾಲಿ ಜಿಲ್ಲಾ ಪಂಚಾಯತ ಸದ್ಯಸರು ಈ ಐದು ಜನ ಕೂಪಳ ಕೇತದ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳಾಗಿದ್ದು , ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುರುಬ ಸಮಾಜದ ಆರು ಲಕ್ಷಕ್ಕಿಂತ ಹೆಚ್ಚಿನ ಮತದಾರರನ್ನು ಹೊಂದಿದ್ದು ಕುರುಬ ಸಮಾಜದ ಮತದಾರರೆ ನಿರ್ಣಯಕರಾಗಿದ್ದು ಈ ಐದು ಜನ ನಾಯಕರಿಗೆ ಎಲ್ಲಾ ವರ್ಗದ ಹಾಗೂ ಎಲ್ಲಾ ಸಂಘಟನೆಗಳ ಬೆಂಬಲ ಇದು . ಸತತ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದಾರೆ . ಈ ಐದು ಜನರಲ್ಲಿ ಒಬ್ಬ ಸದಸ್ಯರನ್ನು ಪರಿಗಣಿಸಿ ಟಿಕೆಟ್ ನೀಡಬೇಕೆಂದು ಆಗ್ರಹಿಸುತ್ತವೆ , ಹೈದ್ರಬಾದ ಕರ್ನಾಟಕ ವ್ಯಾಪ್ತಿಯಲ್ಲಿ ಮೂರು ಮೀಸಲು ಕ್ಷೇತ್ರಗಳಿದ್ದು ಎರಡು ಸಾಮಾನ್ಯ ಕ್ಷೇತ್ರವಿದ್ದು ಭೀದರ ಕ್ಷೇತ್ರದಿಂದ ನಮ್ಮ ಸಮಾಜದವರು ಯಾರು ಟಿಕೆಟ ಕೇಳಿಲ್ಲ. ಆದ ಕಾರಣ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಈ ಮೇಲ್ಕಾಣಿಸಿದ ಐದು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು . ಮತ್ತು ಕರ್ನಾಟಕ ರಾಜ್ಯದಲ್ಲಿ ಬಾಗಲಕೋಟೆ ಬೆಳಗಾವಿ ಕಾವೇರಿ ಡಾವಣಗೇರಿ ಮೈಸೂರು ಸಬೆಂಗಳೂರು ಉತ್ತರ ಈ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳ ಕುರುಬ ಸಮಾಜ ವ್ಯಕ್ತಿಗಳಿಗೇ ಟಿಕೆಟ್ ನೀಡಬೇಕು . ಆದ ಕಾರಣ ಕಾಂಗ್ರೆಸ್ ಪಕ್ಷ ನಮಗೆ ಟೀಕೆಟ್ ನೀಡದ ನಿಷ್ಕಾಳಜಿ ತೋರಿಸಿದರೆ ಪಕ್ಷಕ್ಕೆ ಹಾನಿ ತಪ್ಪಿದ್ದಲ್ಲ .

ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ನವರಿಗೆ ಹಾಗೂ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷರಾದ ದಿನೇಶ ಗುಂಡರಾವ್ ಇವರಿಗೆ ಪತ್ರಿಕೆ ಮೂಲಕ ಆಗ್ರಹಿಸುತ್ತೇವೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯ ವಿಭಾಗೀಯ ಅದ್ಯಕ್ಷ ಗದ್ದನಗೌಡ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ..