ಲಾಕ್‌ಡೌನ್ ಮುಗಿದ ಬಳಿಕ ಎಸೆಸೆಲ್ಸಿ ಪರೀಕ್ಷೆ ದಿನ ನಿಗದಿ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಮಾ.27: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ವಿಧಿಸಿರುವ ಲಾಕ್‌ಡೌನ್ ಮುಗಿದ ಬಳಿಕ ಎಸೆಸೆಲ್ಸಿ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗುವುದು. ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಹತಾಶರಾಗದ ಪರೀಕ್ಷೆಗೆ ಸಿದ್ಧರಾಗುವಂತೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕರೆ ನೀಡಿದ್ದಾರೆ.

ಈ ಹಿಂದೆ ನಿಗದಿಯಾದ ವೇಳಾಪಟ್ಟಿಯನ್ವಯ ಇಂದು(ಮಾ.27) ಎಸೆಸೆಲ್ಸಿ ಪರೀಕ್ಷೆಗಳು ಆರಂಭಗೊಳ್ಳಬೇಕಿದ್ದ ಹಿನ್ನೆಲೆಯಲ್ಲಿ ಸಚಿವರು ಫೇಸ್‌ಬುಕ್‌ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಶ್ರಮಿಸಿದ್ದಾರೆ.

ರಾಜ್ಯದ ಎಸೆಸೆಲ್ಸಿ ಪರೀಕ್ಷೆಗಳು ಇಂದು ಆರಂಭವಾಗಬೇಕಿತ್ತು. ಇದಕ್ಕಾಗಿ ಸುಮಾರು ಎಂಟೂವರೆ ಲಕ್ಷ ವಿದ್ಯಾರ್ಥಿಗಳು ಸಿದ್ಧರಾಗಿದ್ದರು. ಆದರೆ ಕಾರಣಾಂತರಗಳಿಂದ ಪರೀಕ್ಷೆಗಳನ್ನೆಲ್ಲ ಮುಂದೂಡಲಾಗಿದೆ. ಅದೇರೀತಿ ಪಿಯುಸಿಯ ಕೊನೆಯ ಇಂಗ್ಲಿಷ್ ಪರೀಕ್ಷೆ ಮತ್ತು 7, 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಎಪ್ರಿಲ್ 14 ಅಂದರೆ ಕರ್ಫ್ಯೂ ಮುಗಿದ ಮೇಲೆ ಪರೀಕ್ಷೆ ದಿನಾಂಕವನ್ನು ನಿಗಧಿಪಡಿಸಲಾಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮುಂದಿನ ದಿನಾಂಕದಂದು ಪರೀಕ್ಷೆಯನ್ನು ಬರೆಯಲು ಸಿದ್ಧರಾಗಿ ಎಂದವರು ಹೇಳಿದ್ದಾರೆ.

ನಾನು ಎಲ್ಲರಿಗೂ ವಿಶ್ವಾಸ ತುಂಬುವ ಮಾತುಗಳನ್ನಾಡುತ್ತೇನೆ ಹತಾಶರಾಗಬೇಡಿ. ಇದೊಂದು ವಿಶ್ವವ್ಯಾಪಿ ಎದ್ದಿರುವ ಸವಾಲು. ವಿದ್ಯಾರ್ಥಿಗಳು ಕೂಡ ಈ ಸಮರದಲ್ಲಿ ಪಾಲ್ಗೊಂಡು ಮನೆಯಿಂದ ಎಲ್ಲೂ ಹೊರಹೋಗದಂತೆ ಅಂತರ ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಎಪ್ರಿಲ್ 14 ಅಂದರೆ ಕರ್ಫ್ಯೂ ಮುಗಿದ ಮೇಲೆ ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮುಂದಿನ ದಿನಾಂಕದಂದು ಪರೀಕ್ಷೆಯನ್ನು ಬರೆಯಲು ಸಿದ್ಧರಾಗಿ. ನಾನು ಎಲ್ಲರಿಗೂ ವಿಶ್ವಾಸ ತುಂಬುವ ಮಾತುಗಳನ್ನಾಡುತ್ತೇನೆ ಹತಾಶರಾಗಬೇಡಿ. ಇದೊಂದು ವಿಶ್ವವ್ಯಾಪಿ ಎದ್ದಿರುವ ಸವಾಲು. ವಿದ್ಯಾರ್ಥಿಗಳು ಕೂಡ ಈ ಸಮರದಲ್ಲಿ ಪಾಲ್ಗೊಂಡು ಮನೆಯಿಂದ ಎಲ್ಲೂ ಹೊರಹೋಗದಂತೆ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

 

Please follow and like us:
error