ಲಾಕ್‌ಡೌನ್‌ವೇಳೆ ದೇಶದ ಜನರು ಪ್ರದರ್ಶಿಸಿದ ಪ್ರಬುದ್ಧತೆ ಅಭೂತಪೂರ್ವ :ಮೋದಿ

ಹೊಸದಿಲ್ಲಿ, ಎ.6:ಲಾಕ್‌ಡೌನ್ ವೇಳೆ ದೇಶದ 130 ಕೋಟಿ ಜನರ ಒಗ್ಗಟ್ಟು ದೀರ್ಘಕಾಲದ ಹೋರಾಟಕ್ಕೆ ಸಿದ್ಧ ಎಂಬುದನ್ನು ತೋರಿಸಿದೆ.ಲಾಕ್‌ಡೌನ್ ವೇಳೆ ಜನರು ಪ್ರದರ್ಶಿಸಿದ ಪ್ರಬುದ್ಧತೆ ಅಭೂತಪೂರ್ವ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಬಿಜೆಪಿಯ ಸಂಸ್ಥಾಪನಾ ದಿನದಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೋನ ವಿರುದ್ಧ ಕೇಂದ್ರ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಕೊರೋನ ವಿರುದ್ಧ ಹೋರಾಟ ನಮ್ಮ ಹೋರಾಟವಲ್ಲ. ಜನರ ಹೋರಾಟ. ಜನರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದಲ್ಲದೆ,ದೇಶದ ರಕ್ಷಣೆ ಮಾಡುತ್ತಿದ್ದಾರೆ ಎಂದರು.

ಬಿಜೆಪಿಯ ಕಾರ್ಯಕರ್ತರಿಗೆ ಐದು ಸಂದೇಶಗಳನ್ನು ನೀಡಿದ ಮೋದಿ,ಬಡವರ ಕಲ್ಯಾಣಕ್ಕೆ ಅವಿರತವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ.ಇದನ್ನು ಒಂದು ಅಭಿಯಾನವಾಗಿ ಮಾಡಬೇಕು ಅಭಿರತ ಸೇವಾ ಅಭಿಯಾನದಲ್ಲಿ ಕಾರ್ಯಕರ್ತರು ಭಾಗಿಯಾಗಬೇಕು ಎಂದು ಕರೆ ನೀಡಿದರು.

ಎಲ್ಲ ಬಿಜೆಪಿ ಕಾರ್ಯಕರ್ತರು ಪಿಎಂ ಕೇರ್ ಫಂಡ್‌ಗೆ ನೆರವು ನೀಡಬೇಕು. ಇತರ 40 ಮಂದಿಗೆ ನೆರವು ನೀಡಲು ಪ್ರೇರಣೆಯಾಗಬೇಕು. ಮಾಸ್ಕ್ ಧರಿಸಿ ಮನೆಯಿಂದ ಹೊರಹೋಗಬೇಕು.ಮಾಸ್ಕ್‌ನ್ನು ಇತರರಿಗೆ ನೀಡಿ. ಮನೆಯಲ್ಲೇ ತಯಾರಿಸಿದ ಮಾಸ್ಕ್‌ನ್ನು ಧರಿಸಿ ಕೊರೋನ ವಿರುದ್ಧ ಹೋರಾಡಬೇಕು. ವೈದ್ಯಕೀಯ ಸಿಬ್ಬಂದಿ,ಪೌರ ಕಾರ್ಮಿಕರು, ಪೊಲೀಸರು, ಬ್ಯಾಂಕ್, ಅಂಚೆ, ಅಗತ್ಯ ಸೇವೆಗಳ ಸಿಬ್ಬಂದಿಗೆ ಧನ್ಯವಾದ ತಿಳಿಸಿ,ಧನ್ಯವಾದ ಪತ್ರ ಕೊಡಬೇಕೆಂದು ತಿಳಿಸಿದರು. ತಮ್ಮತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು

Please follow and like us:
error