ಲಕ್ಷವೃಕ್ಷೋತ್ಸವ ಕಾರ್ಯಕ್ರಮಕ್ಕೆ ಪೂಜ್ಯರಿಂದ ಚಾಲನೆ


ಕೊಪ್ಪಳ : ನಗರದ ಸಂಸ್ಥಾನ ಶ್ರೀ ಗವಿಮಠವು ಪರಿಸರ ಸಂರಕ್ಷಣೆಗಾಗಿ ನಾನಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಕಳೆದ ೨೦೨೦ನೇ ವರ್ಷದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ “ದೈವ ಸಾಕ್ಷಾತ್ಕಾರಕ್ಕಾಗಿ ಲಕ್ಷದೀಪೋತ್ಸವ ಪ್ರಕೃತಿ ಸಾಕ್ಷಾತ್ಕಾರಕ್ಕಾಗಿ ಲಕ್ಷವೃಕ್ಷೋತ್ಸವ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಇದರ ಮುಂದುರೆದ ಭಾಗವಾಗಿ ಇಂದು ದಿನಾಂಕ ೫-೦೮-೨೦೨೦ ರಂದು ಕೊಪ್ಪಳ ಹಾಗೂ ಸುತ್ತಮುತ್ತಲೂ ಲಕ್ಷ ಸಸಿಗಳನ್ನು ನೆಡುಂತಹ ಕಾರ್ಯಕ್ರಮವು ಜರುಗಿತು. ವಿಶೇಷವಾಗಿ ಸಸಿ ನೆಡುವ ಈ ಕಾರ್ಯಕ್ರಮವನ್ನು ಜನರು ವೀಕ್ಷಿಸಲು ವರ್ಚುವಲ್ ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡುವಂತಹ ವಿನೂತನ ಕಾರ್ಯಕ್ರಮವು ಶ್ರೀ ಗವಿಮಠದಿಂದ ನೆರವೇರಿತು.

ಶ್ರೀ ಗವಿಮಠದ ಆವರಣದ ಸಸ್ಯಧಾಮದಲ್ಲಿ (ನರ್ಸರಿ) ಬೆಳೆಸಿದ ಬೇವು, ಹೊಂಗೆ, ಬಂಬೂ,ಸಂಪಿಗೆ, ನೇರಳೆ, ಬುಗರಿ, ಹೊನ್ನೆ, ಕಡಿ ಬದಾಮಿ, ಹಿಪ್ಪಿ, ಸೀಪಾಫಲ, ಹೊಳೆಮತ್ತಿ, ಫೇಲ್ಟೋ ಫಾರಂ ,ಜಂಬೂ ನೇರಳೆ, ಅರಳಿಮರ, ಹತ್ತಿ, ಹುಣಸೆಮರ, ಚಳ್ಳೆ ಮೊದಲಾದ ಸಸಿಗಳನ್ನು ಇಂದು ಕೊಪ್ಪಳದ ವಿವಿಧ ಕಡೆಗಳಲ್ಲಿ ನೆಡಲಾಯಿತು.

ಆರಂಭದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮಾತನಾಡಿ ದೇವರು ನಮಗೆ ಸುಂದರವಾದ ನಿಸರ್ಗ ಮತ್ತು ಬದುಕನ್ನು ಕೊಟ್ಟಿದ್ದಾನೆ. ಮನುಷ್ಯ ದೇಹ ಬಿಟ್ಟು ಹೋಗುವಾಗ ದೇವರಿಗೆ ಏನಾದರು ಒಂದು ಕಾಣಿಕೆಗಳನ್ನು ನೀಡಬೇಕೆಂದಿದ್ದರೆ ನಾವೆಲ್ಲಾ ಗಿಡಮರಗಳನ್ನು ನೆಟ್ಟು ಬೆಳೆಸಬೇಕು. ವಿದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಗಿಡಮರಗಳನ್ನು ಬೆಳೆಸುವ ಸಂಖ್ಯೆ ಕಡಿಮೆ. ನಾವೆಲ್ಲಾ ಗಿಡ ಮರಗಳನ್ನು ಬೆಳೆಸುವದರಿಂದ ಪರಿಸರವನ್ನು ಸುಂದರಗೊಳಿಸಬಹುದು. ಇದು ಮನುಷ್ಯನ ಆರೋಗ್ಯಕ್ಕೆ ಪೂರಕವಾಗುತ್ತದೆ ಎಂದು ಮಾತನಾಡಿದರು. ಬಳಿಕ ಗವಿಮಠದ ಆವರಣದಲ್ಲಿ ಸಸಿಗಳನ್ನು ನೆಡುವದರ ಮೂಲಕ ವರ್ಚುವಲ್ ಆನ್‌ಲೈನ್ ಕಾರ್ಯಕ್ರಮಕ್ಕೆ ಮೂಲಕ ಚಾಲನೆ ನೀಡಿ ದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲರು ವರ್ಚುವಲ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಈಗಾಗಲೇ ಸಮಾಜಮುಖೀ ಕೆಲಸ ಕಾರ್ಯಗಳನ್ನು ಮಾಡುವದರ ಮೂಲಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೊಪ್ಪಳದ ಹಿರೇಹಳ್ಳ ಪುನಶ್ಚೇತನ ರೈತರ ಸಹಕಾರದಲ್ಲಿ ಮಾಡಿದ್ದು ಬಹುದೊಡ್ಡ ಕೆಲಸ. ಇದೀಗ ಲಕ್ಷ ಸಸಿಗಳನ್ನು ನೆಟ್ಟು ಈ ನಾಡಿನಲ್ಲಿ ಹಸಿರು ತುಂಬಿಸುವ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ. ಇವರ ದಿಟ್ಟ ಜನಪರ ಕಾರ್ಯಕ್ರಮ ಈ ನಾಡಿಗೆ ಮಾದರಿ ಎಂದರು.
ಮತ್ತೋರ್ವ ನೀರಾವರಿ ಮತ್ತು ಕಾನೂನು ಸಂಸದೀಯ ಸಚಿವರಾದ ಜೆ.ಸಿ ಮಾಧು ಸ್ವಾಮಿ ಮಾತನಾಡಿ ನೆಲ,ಜಲ ಮತ್ತು ಪರಿಸರ ಸಂರಕ್ಷಣೆಗಾಗಿ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅನೇಕ ಜನಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪೂಜ್ಯರ ಈ ಕೈಂಕರ್ಯಕ್ಕೆ ಮತ್ತು ಸತ್ಕಾರ್ಯಕ್ಕೆ ಸದಾ ಕೈಜೋಡಿಸುತ್ತೇನೆ. ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವಂತಹ ಸಮಾಜ ಮುಖೀ ಕಾರ್ಯ ನಿಜವಾಗಿಯೂ ಅರ್ಥಪೂರ್ಣವೆಂದರು. ವದಾಗಿ ಮಾತನಾಡಿದರು. ಇದೇ ರೀತಿ ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ, ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರ , ಕೃಷಿ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ಮೃತ್ಯುಂಜಯ ಸ್ವಾಮಿ ಮಾತನಾಡಿದರು.

ಕೊಪ್ಪಳದ ವಿವಿದೆಡೆ ಜರುಗಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಂಸದರಾದ ಸಂಗಣ್ಣ ಕರಡಿಯವರು ತಮ್ಮ ನಿವಾಸದಲ್ಲಿ, ಜಿಲ್ಲಾಧಿಕಾರಿಗಳಾದ ಶ್ರೀ ವಿಕಾಸ್ ಕಿಶೋರ್ ಸುರಳ್ಕರ್ ಇವರು ಜಿಲ್ಲಾಡಳಿತ ಕಛೇರಿ ಆವರಣದಲ್ಲಿ, ಪೊಲೀಸ ವರಿಷ್ಠಾಧಿಕಾರಿಗಳಾದ ಶ್ರೀಮತಿ ಜಿ ಸಂಗೀತಾ ಇವರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ಸಸಿಗಳನ್ನು ನೆಟ್ಟರು.
ಇದೇ ರೀತಿ ಜಿಲ್ಲಾ ಪಂಚಾಯತ್ ಆವರಣ, ನಗರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ, ಹಿರೇಹಳ್ಳದ ಬಯಲು ಪ್ರದೇಶ, ಬಿ.ಇ.ಓ ಕಛೇರಿ, ಜಿಲ್ಲಾಸ್ಪತ್ರೆ ಆವರಣ, ನಗರಸಭೆಯಿಂದ ಕಾತರಕಿ ರಸ್ತೆ, ಭಾಗ್ಯನಗರ ಪಟ್ಟಣ ಪಂಚಾಯತಿ, ಜಿಲ್ಲಾ ನ್ಯಾಯಾಲಯ ಆವರಣ, ಕಿರ್ಲೋಸ್ಕರ್ ಆವರಣ ಈ ಮೊದಲಾದ ಸ್ಥಳಗಳಲ್ಲಿ ಸಹ ಸಸಿಗಳನ್ನು ನೆಡಲಾಯಿತು. ವಿಶೇ?ವಾಗಿ ಹಿರೇಹಳ್ಳದ ಎಡ -ಬಲಬದಿಗಳಲ್ಲಿ ತೆಂಗು, ಜಂಬೂ, ನೇರಳೆ ಮರಗಳನ್ನು ಹಚ್ಚಲು ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯ ಸಹಕಾರದಲ್ಲಿ ಈಗಾಗಲೇ ಕಾರ್ಯನಡೆಯುತ್ತಿದೆ

ಇದೇ ಸಮಯದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಏಕಕಾಲದಲ್ಲಿ ತಾವಿರುವ ಸ್ಥಳದಿಂದಲೇ ವರ್ಚುವಲ್ ಕಾರ್ಯಕ್ರಮದ ಮೂಲಕ ಲಕ್ಷವೃಕ್ಷೆತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಿಗಧಿತ ಸುಮಾರು ೨೦ಕ್ಕಿಂತ ಹೆಚ್ಚು ಸ್ಥಳದಲ್ಲಿ ಜರುಗಿದ ಸಸಿಗಳನ್ನು ನೆಡುವ ಕಾರ್ಯಕ್ರಮದ ಲೈವ್ ಕ್ರೂಢೀಕರಣ ಯುಟೂಬ್ ಮತ್ತು ಫೇಸ್‌ಬುಕ್‌ನಲ್ಲಿ ಲೈವ್ ಪ್ರಸಾರಗೊಂಡಿತು. ಇಂದು ಜರುಗಿದ ಈ ವರ್ಚುವಲ್ ಆನ್‌ಲೈನ್‌ನಲ್ಲಿ ನೇರ ಪ್ರಸಾರವನ್ನು <hಣಣಠಿs://ತಿತಿತಿ.ಥಿouಣube.ಛಿom/ಛಿ/gಚಿvimಚಿಣhಞoಠಿಠಿಚಿಟ> , <hಣಣಠಿs://ತಿತಿತಿ.ಜಿಚಿಛಿebooಞ.ಛಿom/gಚಿvimಚಿಣhಞoಠಿಠಿಚಿಟ> ಲಿಂಕ್ ಮೂಲಕ ವೀಕ್ಷಿಸಬಹುದು.
ನಗರದ ಶ್ರೀ ಗವಿಮಠದ ಹಿರೇಹಳ್ಳ ಅಭಿವೃಧ್ದಿ ಹಾಗೂ ಜಲ ಸಂರಕ್ಷಣಾ ಟ್ರಸ್ಟ ಕೊಪ್ಪಳ, ಸಣ್ಣ ನೀರಾವರಿ ಇಲಾಖೆ ಬೆಂಗಳೂರ, ಕೆರೆ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಪರಿಸರ ಪ್ರಿಯ ಸಂಘಟನೆಗಳ ಸಹಯೋಗದಲ್ಲಿ ಇಂದು ಸಸಿ ನೆಡುವ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡುವಂತಹ ವಿನೂತನ ಕಾರ್ಯಕ್ರಮ ಜರುಗಿತು.

Please follow and like us:
error