ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡ : ಸೂ ಕಿಯಿಂದ ಪ್ರಶಸ್ತಿ ವಾಪಸ್ ಪಡೆದುಕೊಂಡ ಆಕ್ಸ್‌ಫರ್ಡ್ ನಗರ

ಲಂಡನ್, ಅ. 4: ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿಗೆ ಆಕ್ಸ್‌ಫರ್ಡ್ ನಗರ ನೀಡಿರುವ ‘ಫ್ರೀಡಂ ಆಫ್ ಆಕ್ಸ್‌ಫರ್ಡ್’ ಪ್ರಶಸ್ತಿಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ.

ತನ್ನ ದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ತೋರಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂಬುದಾಗಿ ಭಾವಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸೂ ಕಿಯ ‘ಪ್ರಜಾಪ್ರಭುತ್ವಕ್ಕಾಗಿನ ಸುದೀರ್ಘ ಹೋರಾಟ’ವನ್ನು ಪರಿಗಣಿಸಿ ಆಕ್ಸ್‌ಫರ್ಡ್ ಸಿಟಿ ಕೌನ್ಸಿಲ್ 1997ರಲ್ಲಿ ಈ ಪ್ರಶಸ್ತಿ ನೀಡಿತ್ತು.

ಈ ಸಂಬಂಧದ ನಿರ್ಣಯವೊಂದನ್ನು ನಗರ ಕೌನ್ಸಿಲ್ ಮಂಗಳವಾರ ಅವಿರೋಧವಾಗಿ ಅಂಗೀಕರಿಸಿತು. ಇನ್ನು ಮುಂದೆ ಈ ಗೌರವವನ್ನು ಸೂ ಕಿ ಹೊಂದುವುದು ಸರಿಯಾಗುವುದಿಲ್ಲ ಎಂದು ನಿರ್ಣಯ ಹೇಳಿದೆ.

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯೂ ಆಗಿರುವ ಸೂ ಕಿ ಆಕ್ಸ್‌ಫರ್ಡ್ ನಗರದೊಂದಿಗೆ ನಿಕಟ ನಂಟನ್ನು ಹೊಂದಿದ್ದಾರೆ. ಅವರು ಇಲ್ಲಿನ ಪಾರ್ಕ್ ಟೌನ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸಿದ್ದರು

Please follow and like us:
error