ರೊಹಿಂಗ್ಯಾ ಮುಸ್ಲಿಮರ ಬಗ್ಗೆ ಅನಕಂಪ ತೋರಿಸಿ: ಕೇಂದ್ರವನ್ನು ಕೋರಿದ ಮಾಯಾವತಿ

: ಭಾರತದಲ್ಲಿ ಆಶ್ರಯ ಪಡೆದಿರುವ ಸಾವಿರಾರು ರೊಹಿಂಗ್ಯಾ ಕುಟುಂಬಗಳ ಬಗ್ಗೆ ಕೇಂದ್ರ ಸರಕಾರ ಮಾನವೀಯ ನೆಲೆಯ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಬಿಎಸ್‌ಪಿಯ ವರಿಷ್ಠೆ ಮಾಯಾವತಿ ಹೇಳಿದ್ದಾರೆ.

ರೊಹಿಂಗ್ಯಾ ಮುಸ್ಲಿಮರ ಸಮಸ್ಯೆ ಪರಿಹರಿಸಲು ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದೊಂದಿಗೆ ಸರಕಾರ ಮಾತುಕತೆ ನಡೆಸಬೇಕು ಎಂದು ಅವರು ಹೇಳಿದರು.

ಗಡಿ ರಾಷ್ಟ್ರವಾದ ಮ್ಯಾನ್ಮಾರ್‌ನಲ್ಲಿ ಇನ್ನೂ ಅಶಾಂತಿ ನಿಂತಿಲ್ಲ. ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶ ಹಾಗೂ ಭಾರತದ ಕೆಲವು ರಾಜ್ಯಗಳಲ್ಲಿ ಆಶ್ರಯ ಪಡೆದುಗೊಂಡಿದ್ದಾರೆ. ಇದು ಗೊಂದಲದ ವಾತಾವರಣ. ಮೋದಿ ಸರಕಾರ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸದೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಭಾರತ ಸರಕಾರ ಭಾರತ ಸಾಂಪ್ರದಾಯಿಕ ಮಾನವೀಯ ನಿಲುವನ್ನು ತೆಗದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.