ರೈಲ್ವೆ ಮೇಲ್ಸೇತುವೆ ಉದ್ಘಾಟನೆ : ಕಾರ್ಯಕ್ರಮ ಬಹಿಷ್ಕರಿಸಿದ ಶಾಸಕ, ಜಟಾಪಟಿ

ಕೊಪ್ಪಳ : ಬಹಳ ವರ್ಷಗಳಿಂದ ನಿರೀಕ್ಷಿಸಲಾಗಿದ್ದ ರೈಲ್ವೆ ಮೇಲ್ಸೇತುವೆಯ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕಾರ ಮತ್ತು ರಾಜಕೀಯ ಜಟಾಪಟಿಗೆ ಕಾರಣವಾಯ್ತು. ಕೊಪ್ಪಳದ ಭಾಗ್ಯನಗರದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮ ಇಂದು ನಡದಿತ್ತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಸಕ ರಾಘವೇಂದ್ರ ಹಿಟ್ನಾಳ ವೇದಿಕೆವರೆಗೂ ಬಂದು ಸಕಾರಿ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕ್ರಮ ಮಾಡಿದ್ದೀರಿ ಪಕ್ಷದ ಧ್ವಜಗಳನ್ನು ಬಳಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿ ವೇದಿಕೆಗೆ ಬಾರದೇ ವಾಪಸ್ ಹೋದರು.

ಇದೇ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ…ಮೋದಿ… ಘೋಷಣೆ ಕೂಗಿದರು.

ಇದು ಯಾವುದೇ ಪಕ್ಷವೊಂದರ ಕಾರ್ಯಕ್ರಮವಲ್ಲ, ಸರಕಾರದ ಕಾರ್ಯಕ್ರಮ ಎಂದ ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯ ಮೇಲಿದ್ದ ಸಂಸದ ಕರಡಿ ಸಂಗಣ್ಣ ಬಿಜೆಪಿ ರ್ಯಾಲಿ ಇದ್ದುದರಿಂದ ಬಿಜೆಪಿ ಬಾವುಟ ಹೊಂದಿರುವ ಬೈಕ್‌ಗಳಿವೆ. ರ್ಯಾಲಿಗೂ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ ಎಂದು ಸಂಸದರು ಸ್ಪಷ್ಟನೆ ನೀಡಿದರು. ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಬಹಿಷ್ಕರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡನೆಸಿದರು.ಕಾರ್ಯಕ್ರಮ ಬಿಜೆಪಿಮಯವಾಗಿದೆ ಎಂದು  ಜೆಡಿಎಸ್ ಪಕ್ಷ ಮುಖಂಡರೂ ಸಹ ಬಹಿಷ್ಕರಿಸಿ ಹೊರನಡೆದರು. ಜೆಡಿಎಸ್ ನ ಮುಖಂಡ ವಿರೇಶ ಮಹಾಂತಯ್ಯನಮಠ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಂಘಟಕ ರಾಘವೇಂದ್ರ ಪಾನಘಂಟಿ ಎಲ್ಲರನ್ನೂ ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಅದು ವ್ಯರ್ಥವಾಯಿತು.

Please follow and like us:
error