ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿಪಡಿಸಿರುವುದು ಸಂತಸದ ಸಂಗತಿಯಾಗಿದೆ: ಬಿ.ಸಿ.ಪಾಟೀಲ್
ರೈತರು ತಾವು ಬೆಳೆದ ಬೆಳೆಗೆ ತಾವೇ ಮಾರುಕಟ್ಟೆ ನಿರ್ಮಿಸಿ ತಾವೇ ಬೆಲೆ ನಿಗದಿಪಡಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ಅವರು ಮಂಗಳವಾರದAದು ತೋಟಗಾರಿಕೆ ಇಲಾಖೆ ಆವರಣದಲ್ಲಿ ಕೊಪ್ಪಳ ರೈತ ಮಾರುಕಟ್ಟೆ, ರೈತ ಗ್ರಾಹಕರ ಮಧ್ಯೆ ನೇರ ಬಾಂಧವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಅವರು ಬೆಳೆದ ಬೆಳೆಗಳಿಗೆ ಅವರೇ ದರ ನಿಗದಿ ಮಾಡಿದಾಗ ಮಾತ್ರ ರೈತರ ಉದ್ಧಾರ ಸಾಧ್ಯ ಹಾಗೂ ಹಾಗೆ ಆದಾಗ ಮಾತ್ರ ರೈತನ ಆದಾಯ ಹೆಚ್ಚಾಗುತ್ತದೆ. ನಾವು ಕೂಡ ಇದನ್ನೇ ಬಯಸುತ್ತೇವೆ. ರೈತರಿಗಾಗಿ ಮೈಸೂರಿನ ಸಿ.ಎಫ್.ಟಿ.ಆರ್ (ಸೆಂಟ್ರಲ್ ಫುಡ್ ರಿಸರ್ಚ್) ಇಲ್ಲಿ ರಾಜ್ಯದ ರೈತರಿಗೆ ತರಬೇತಿ ನೀಡಲಾಗುತ್ತಿದ್ದು, ಪ್ರತಿ ವಾರ 50 ಜನರಿಗೆ ತರಬೇತಿ ನೀಡಲಾಗುತ್ತದೆ. ನಮ್ಮ ಜಿಲ್ಲೆಯಿಂದಲೂ ವಾರಕ್ಕೆ 10 ಜನ ರೈತರಿಗೆ ಕಳಿಸಿಕೊಡಬೇಕೆಂದು ಸಂಬAಧ ಪಟ್ಟ ಅಧಿಕಾರಿಗಳಿಗೆ ಹೇಳಿದರು.
ಈ ಹಿಂದೆ ಹಲವಾರು ಬಾರಿ ನಾವು ರೈತರಿಗೆ ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿಪಡಿಸಬೇಕೆಂದು ಹೇಳುತ್ತಿದ್ದೆವು. ಆದರೆ ಅದನ್ನು ಇಂದು ತಾವೇ ಮಾಡಿ ತೋರಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುವುದರ ಜೊತೆಗೆ ರೈತರು ನೇರವಾಗಿ ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿದೆ. ಈ ಮಾರುಕಟ್ಟೆಯನ್ನು ಇನ್ನೂ ದೊಡ್ಡ ಮಟ್ಟದಲ್ಲಿ ತಾವು ಬೆಳೆಸುವುದರ ಜೊತೆಗೆ ರಾಜ್ಯದ ಇತರ ರೈತರಿಗೆ ಮಾದರಿಯಾಗಬೇಕೆಂದು ರೈತರಿಗೆ ಕಿವಿಮಾತು ಹೇಳಿದ ಸಚಿವರು ಕೃಷಿಗೆ ಸಂಬAಧಿಸಿದ ಯಾವುದೇ ಸಹಕಾರ ನೀಡಲು ಸದಾ ತಮ್ಮೊಂದಿಗೆ ಇದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಸಂಸದರಾದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿಗಳಾದ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ರಘುನಂದನ್ ಮೂರ್ತಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ಕೊಪ್ಪಳ ರೈತ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಶಂಕರ ರೆಡ್ಡಿ ಕಾಟ್ರಳ್ಳಿ, ಉಪಾಧ್ಯಕ್ಷರಾದ ವಿಜಯ ರೆಡ್ಡಿ ಚೌಡಿ ಸೇರಿದಂತೆ ಜಿಲ್ಲೆಯ ರೈತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.
ರೈತ ಗ್ರಾಹಕರ ಮಧ್ಯೆ ನೇರ ಬಾಂಧವ್ಯ ಕಾರ್ಯಕ್ರಮವನ್ನು ಉದ್ಘಾಟನೆ
Please follow and like us: