ರಾಷ್ಟ್ರಹಿತಕ್ಕಾಗಿ ಪ್ರಧಾನಿ ಮೋದಿ ಬೆಂಬಲಿಸಿ-ಸಂಗಣ್ಣ ಕರಡಿ

ವಕೀಲರ ಸಂಘದಲ್ಲಿ ಮತಯಾಚನೆ
ಕೊಪ್ಪಳ: ದೇಶದ ಉನ್ನತಿಗಾಗಿ ಪ್ರಧಾನಿ ಮೋದಿಯವರು ಅನೇಕ ಉಪಯುಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ರಾಷ್ಟ್ರೀಯತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ರಾಷ್ಟ್ರದ ರಕ್ಷಣೆ, ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮನವಿ ಮಾಡಿದರು.

ಲೋಕಸಭಾ ಚುನಾವಣೆ ನಿಮಿತ್ತ ಮಂಗಳವಾರ ನಗರದಲ್ಲಿನ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿದ ಅವರು ವಕೀಲರಿಂದ ಮತಯಾಚನೆ ಮಾಡಿ ಮಾತನಾಡಿದರು.
ದೇಶದ ರಕ್ಷಣೆ, ಕಾನೂನು, ಅಭಿವೃದ್ಧಿ ಬಗ್ಗೆ ಹಲವು ಚಿಂತನೆ, ಚರ್ಚೆ, ಬರವಣಿಗೆಯಲ್ಲಿ ಅನೇಕ ವಕೀಲರು ಇಂದು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದೇಶದ ಇಂದಿನ ದಿನಕ್ಕೆ ಬೇಕಾದ ಕಾನೂನುಗಳನ್ನು ಜಾರಿಗೆ ತರಲು ವಕೀಲರ ಮತ್ತು ಕಾನೂನು ಪಂಡಿತರ ಶ್ರಮ ಹೆಚ್ಚಾಗಿದೆ. ಬುದ್ಧಿವಂತ ವರ್ಗವಾದ ವಕೀಲರ ಸಮೂಹ ದೇಶದ ಬಗ್ಗೆ ಚಿಂತೆನೆ ನಡೆಸುತ್ತಿದೆ. ಹೀಗಾಗಿ ಜಗತ್ತೆ ನಮ್ಮತ್ತ ತಿರುಗಿ ನೋಡುವಂತೆ ಮೋಡಿ ಮಾಡಿ ಜಗತ್ತಿನ ಸೂಪರ್ ಪವರ್ ಕಂಟ್ರಿಯನ್ನಾಗಿ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ನರೇಂದ್ರ ಮೋದಿಯವರನ್ನು ಮತ್ತೊಂದು ಅವಧಿಗೆ ಪ್ರಧಾನ ಮಂತ್ರಿ ಮಾಡುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ತಾವುಗಳು ಯೋಚಿಸಿ ದೇಶ ಸುಭದ್ರಗೊಳಿಸುವ ವ್ಯಕ್ತಿಗೆ ಬೆಂಬಲಿಸಲು ಕೋರುತ್ತೇನೆ ಎಂದ ಅವರು, ಕಳೆದ ಕೆಲ ದಿನಗಳ ಹಿಂದೆ ನನ್ನ ಕ್ಷೇತ್ರ ವ್ಯಾಪ್ತಿಯ ಹಲವು ವಕೀಲರನ್ನು ಕೇಂದ್ರ ಸರ್ಕಾರದಿಂದ ನೇಮಕ ಮಾಡಲಾಗಿದೆ. ಅಭಿವೃದ್ಧಿ ಮಾಡುವಲ್ಲಿ ನಿರತವಾದ ಬಿಜೆಪಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ ಮೋದಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಚ್. ಮುರಡಿ, ಉಪಾಧ್ಯಕ್ಷರಾದ ಜಿ.ಸಿ. ಹಮ್ಮಗಿ, ಪ್ರಧಾನ ಕಾರ್ಯದರ್ಶಿಯಾದ ಬಿ.ವಿ. ಸಜ್ಜನ, ಜಂಟಿ ಕಾರ್ಯದರ್ಶಿಯಾದ ಎಸ್.ಬಿ. ಪಾಟೀಲ್ ಹಲಗೇರಿ, ಖಜಾಂಚಿಯಾದ ಸುಭಾಷ್ ಬಂಡಿ, ರಾಘವೇಂದ್ರ ಪಾನಗಂಟಿ, ಎ.ವಿ. ಭೂಸನೂರಮಠ, ರುದ್ರಯ್ಯ ವಕೀಲರು, ಸಂಧ್ಯಾ ಮಾದನೂರ ಸೇರಿದಂತೆ ವಕೀಲರ ಸಂಘದ ಸದಸ್ಯರು, ವಕೀಲರು ಪಾಲ್ಗೊಂಡಿದ್ದರು.
ವಕೀಲರಿಂದ ಸನ್ಮಾನ..
ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಎಚ್. ಮುರುಡಿ, ಉಪಾಧ್ಯಕ್ಷ ಜಿ.ಸಿ. ಹಮ್ಮಿಗಿ, ಪ್ರಧಾನ ಕಾರ್ಯದರ್ಶಿ ಬಿ.ವಿ. ಸಜ್ಜನ್, ಜಂಟಿ ಕಾರ್ಯದರ್ಶಿ ಎಸ್.ಬಿ. ಪಾಟೀಲ್ ಹಲಗೇರಿ, ಖಜಾಂಚಿ ಸುಭಾಷ್ ಬಂಡಿ, ಮಾಜಿ ಅಧ್ಯಕ್ಷ ಎ.ವಿ. ಕಣವಿ,ಪ್ರಕಾಶ್ ಆನಂದಹಳ್ಳಿ, ಮಂಜುನಾಥ್ ಉಮಚಗಿ ಇನ್ನಿತರ ವಕೀಲರು ಕೊಪ್ಪಳದ ಕರಡಿ ಸಂಗಣ್ಣ ನಿವಾಸಕ್ಕೆ ತೆರಳಿ ಸಂಗಣ್ಣ ಅವರನ್ನು ಸನ್ಮಾನಿಸಿದರು.
ಕನಕಗಿರಿ ಕ್ಷೇತ್ರದಲ್ಲಿ ಪ್ರಚಾರ:
ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ತಾಲೂಕಿನ ಚಳ್ಳೂರು ಕ್ಯಾಂಪ್‌ನಲ್ಲಿ ಶ್ರೀಶೈಲ್ ಗೌಡ್ರ ಅವರ ಮನೆಯ ಆವರಣದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ತ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಮತಯಾಚಿಸಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು. ಈ ಬಾರಿ ಅಧಿಕಾರಕ್ಕೆ ಬಂದ ನಂತರ ದೇಶದ ಸಣ್ಣ ಹಿಡುವಳಿದಾರ ರೈತರಿಗೆ ಬಡ್ಡಿರಹಿತ ೧ ಲಕ್ಷದವರೆಗೆ ಸಾಲ ನೀಡುವುದು, ೬೦ ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ನೀಡುವುದು ಸೇರಿದಂತೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಇದೆಲ್ಲದೂ ಸಾಕಾರಗೊಳ್ಳಲು ಬಿಜೆಪಿಗೆ ಮತ ಹಾಕುವ ಮೂಲಕ ನನ್ನನ್ನು ಗೆಲ್ಲಿಸಿ ಪ್ರಧಾನಿ ಮೋದಿಯವರ ಕೈಬಲಪಡಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡು.
ಈ ಸಂದರ್ಭದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶಿವಶರಣೇಗೌಡ ಯರಡೊಣ, ಜಿಪಂ ಮಾಜಿ ಅಧ್ಯಕ್ಷ ಅಮರೇಶ್ ಕುಳಗಿ, ಮಾಜಿ ಉಪಾಧ್ಯಕ್ಷ ಬಸವರಾಜ್ ಸಿದ್ದಾಪುರ, ಮಾಜಿ ಸದಸ್ಯ ವೀರೇಶ ಸಾಲೋಣಿ, ಕಾರಟಗಿ ಪಪಂ ಸದಸ್ಯ ನಾಗರಾಜ್ ಅರಳಿ, ಮುಖಂಡ ನಾಗರಾಜ್ ಬಿಲ್ಗಾರ್, ಶ್ರೀಶೈಲ್‌ಗೌಡ್ರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error