ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪರೀಕ್ಷಾ ರದ್ದು ಗೊಳಿಸಲು SFI ಒತ್ತಾಯ

Koppal  ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಇತ್ತೀಚೆಗೆ L.L.B ಯ ಎರಡನೇ ಮತ್ತು ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುಲ್ಕ ಕಟ್ಟಲು ಆದೇಶ ಮಾಡಿದೆ,ಕರೋನ್ ಇರುವುದರಿಂದ ಈ ಸೆಮಿಸ್ಟರ್ ನಲ್ಲಿ ಮಾರ್ಚ್ ತಿಂಗಳಿನಿಂದ ಇಲ್ಲಿವರೆಗೂ ಕೂಡ ರಾಜ್ಯದಲ್ಲಿರುವ ಕಾನೂನು ಕಾಲೇಜುಗಳಲ್ಲಿ ತರಗತಿಗಳು ನಡೆದಿರುವುದಿಲ್ಲ ಪಾಠಗಳನ್ನು ಮುಗಿಸಲಾರದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೇಗೆ ಸಾಧ್ಯ?  ಪ್ರಾರಂಭದಿಂದಲೂ KSUL V.V ಒಂದಲ್ಲ ಒಂದು ವಿಷಯದಲ್ಲಿ ವಿದ್ಯಾರ್ಥಿ ವಿರೋಧಿ ನೀತಿಯನ್ನು  ಅನುಸರಿಸುತ್ತಾ ಬರುತ್ತಿದೆ, ಈ ಮೇಲಿನ ವಿಚಾರದಲ್ಲೂ ಈ ನೀತಿಯನ್ನು ಜಾರಿ ಮಾಡಲು ವಿಶ್ವವಿದ್ಯಾಲಯ ಮುಂದಾಗಿರುವುದು ಖಂಡನೀಯ, ಕೊರೋನಾದಂತಹ ಸಂಕಷ್ಟದ ಸಮಯದಲ್ಲೂ ತನ್ನ ಧಮನಕಾರಿ ನೀತಿಯನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ ಕೂಡಲೇ ಅದನ್ನು ಕೈ ಬಿಟ್ಟು ವಿದ್ಯಾರ್ಥಿಗಳ ಹಿತ ಕಾಪಾಡಲು ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಸಂಘಟನೇ ಒತ್ತಾಯಿಸಿದೆ. ಈ ಕುರಿತು ಮನವಿ ಪತ್ರವನ್ನು ಉಪ ಕುಲಪತಿಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ ಹುಬ್ಬಳ್ಳಿ ಇವರಿಗೆ ಪ್ರಾಂಶುಪಾಲರು ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರ ಮೂಲಕ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ Sfi ರಾಜ್ಯ ಅಧ್ಯಕ್ಷ ಅಮರೇಶ ಕಡಗದ , ಕಾನೂನು ಕಾಲೇಜು ವಿದ್ಯಾರ್ಥಿ ಮುಖಂಡರು ಕೊಪ್ಪಳ ಅನಿಲ್ , ಮಂಜುನಾಥ, ಬಾಲಜಿ,ರಮೇಶ ಗಂಗಾವತಿ L.L.B ವಿದ್ಯಾರ್ಥಿ ಮತ್ತು Sfi ಮುಖಂಡರು ರವಿಚಂದ್ರನ, ಬಸವರಾಜ  ಸೇರಿದಂತೆ ಇತರರು ಉಪಸ್ಥಿತರಿದ್ದರು

ಪ್ರಮುಖ ಬೇಡಿಕೆಗಳು :

1) LLB ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿ ಮುಂದಿನ ತರಗತಿಗೆ ಪ್ರಮೊಟ್ ಮಾಡಿ.

ಕೊವಿಡ್ -19 ರಭಸದಿಂದ ಹರಡುತ್ತಿರುವ ಕಾಲದಲ್ಲೇ ಕೆಎಸ್ಎಲ್ ಯು  UGC ನಿರ್ದೇಶನಗಳನ್ನು ಧಿಕ್ಕರಿಸಿ ಕಾನೂನು ಪ್ರಥಮ, ದ್ವಿತೀಯ ವರ್ಷದ LLB ವಿದ್ಯಾರ್ಥಿಗಳ ಪರಿಕ್ಷೆಗಳನ್ನು ನಡೆಸಲು ಮುಂದಾಗಿರುವ ನಿರ್ಣಯವನ್ನು ಎಸ್ಎಫ್ಐ ಕೊಪ್ಪಳ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ

2) ಪರೀಕ್ಷಾ ಶುಲ್ಕ ಕಟ್ಟಿಸಿ ಕೊಳ್ಳಲು ಹೊರಡಿಸಿರಿವು ಆದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕು ಮತ್ತು ಕಟ್ಟಿರುವ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್ ನೀಡಬೇಕು.

ಕೊವಿಡ್ -19ನ ಕಾರಣ ಮಾಡಲಾದ ಲಾಕ್ ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ವಿದ್ಯಾರ್ಥಿ, ಪೋಷಕರನ್ನು ಬಲವಂತವಾಗಿ ದುಬಾರಿ ಪರೀಕ್ಷಾ ಶುಲ್ಕ ಪಾವತಿಸಲು ಅವಧಿ ನಿಗದಿ ಮಾಡಿ ಇಕ್ಕಟ್ಟಿಗೆ ಸಿಲುಕಿಸಿರುವ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು.

3) LLB ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರಥಮ ಮೌಲ್ಯ ಮಾಪನದಲ್ಲೇ ಉತ್ತಮ   ಫಲಿತಾಂಶಗಳನ್ನು ನೀಡದೆ ಕಡಿಮೆ ಅಂಕಗಳ ಅಂತರದಲ್ಲಿ ವಿಷಯಗಳನ್ನು ಅನುತ್ತೀರ್ಣಗೊಳಿಸಿ ನಂತರ ಮರುಮೌಲ್ಯಮಾಪನ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಮೇಲೆ ದುಬಾರಿ ಶುಲ್ಕಗಳ ಹೊರೆ ವಿಧಿಸಿ ಕೋಟ್ಯಾಂತರ ರೂಪಾಯಿ ಹಣ ದರೋಡೆ ಮಾಡುತ್ತಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿಯನ್ನು ನಿಲ್ಲಿಸಬೇಕು.

4)ಮರು ಮೌಲ್ಯ ಮಾಪನದಲ್ಲಿ ಪಾಸ್ಸಾದ ವಿದ್ಯಾರ್ಥಿಗಳಿಗೆ ಕಟ್ಟಿದ ಪೂರ್ಣ ಶುಲ್ಕವನ್ನು ಮರು ಪಾವತಿ ಮಾಡಬೇಕು,

5) ಬಾಕಿ ಇರುವ ವಿದ್ಯಾರ್ಥಿ ವೇತನ ನೀಡಲು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು.

Please follow and like us:
error