ರಾಜ್ಯಾದ್ಯಂತ ಮೇ 10ರಿಂದ 24ರ ತನಕ ಸಂಪೂರ್ಣ ಲಾಕ್‌ಡೌನ್: ಸಿಎಂ

ಬೆಂಗಳೂರು:  ಅಂತರ್ ಜಿಲ್ಲಾ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೋಟೆಲ್, ಪಬ್, ಬಾರ್ ಬಂದ್ ಆಗಲಿದೆ. ಹಾಲಿನ ಬೂತ್ ಸಂಜೆವರೆಗೂ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ, ಸೋಮವಾರದಿಂದ ಕರ್ನಾಟಕದಾದ್ಯಂತ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಹೇಳಿದ್ದಾರೆ.

ಮೇ 10ರಿಂದ 24ರ ತನಕ ಲಾಕ್ ಡೌನ್ ಇರಲಿದೆ. ಬೆಳಗ್ಗೆ 6ರಿಂದ 10 ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಸರಕಾರಿ ಕಚೇರಿ ಭಾಗಶಃ ಕಾರ್ಯನಿರ್ವಹಿಸಲಿವೆ.

ಟ್ಯಾಕ್ಸಿ, ಅಟೋ ರಿಕ್ಷಾಗಳಿಗೆ ಅನುಮತಿಯೊಂದಿಗೆ ತುರ್ತು ಅಗತ್ಯಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ. ವಿಮಾನ, ರೈಲು ಸಂಚಾರಕ್ಕೆ ಅವಕಾಶವಿದೆ. ಹೋಟೆಲ್ & ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ ಇದೆ. ಆದರೆ ವಾಹನಗಳಲ್ಲಿ ಸಂಚರಿಸದೆ, ನಡೆದುಕೊಂಡೇ ಹೋಗಿ ಪಾರ್ಸೆಲ್ ತರಬಹುದು.  ನಿಗದಿಯಾದ ಮದುವೆಗೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ 50 ಮಂದಿಗೆ ಭಾಗವಹಿಸಲು ಅವಕಾಶವಿದೆ ಬ್ಯಾಂಕ್, ಇನ್ಸೂರೆನ್ಸ್ ಕಚೇರಿ, ಎಟಿಎಂ ತೆರೆದಿರಲಿದೆ. ಇ-ಕಾಮರ್ಸ್ ಗೆ ಅವಕಾಶವಿದೆ.  ಎಂದು ಯಡಿಯೂರಪ್ಪ ಹೇಳಿದರು.

 

 

Please follow and like us:
error