ರಾಜ್ಯಮಟ್ಟಕ್ಕೆ ಕೊಪ್ಪಳದ ಕಲಾಸಂಘದ ರಾವಿ ನದಿಯ ದಂಡೆಯಲ್ಲಿ

ಕೊಪ್ಪಳ, : ಕೊಪ್ಪಳ ಶಿಕ್ಷಕರ ಕಲಾಸಂಘ ಅಭಿನಯಿಸಿದ “ರಾವಿ ನದಿಯ ದಂಡೆಯಲ್ಲಿ” ನಾಟಕವು ಉಡುಪಿಯಲ್ಲಿ ನಡೆಯುತ್ತಿರುವ ೪೧ ನೇ ಕನ್ನಡ ನಾಟಕ ಸ್ಪರ್ಧೆಗೆ ಆಯ್ಕೆಯಾಗಿದೆ. ರಂಗಭೂಮಿ (ರಿ) ಉಡುಪಿ ಅವರು ನಡೆಸುತ್ತಿರುವ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಕೊಪ್ಪಳದ ಶಿಕ್ಷಕರ ಕಲಾಸಂಘದ ರಾವಿ ನದಿಯ ದಂಡೆಯಲ್ಲಿ ನಾಟಕವು ಗುರುವಾದ ಜನವರಿ ೧೪ ರಂದು ಉಡುಪಿಯ ಎಮ್.ಜಿ.ಎಮ್ ಕಾಲೇಜಿನ ಮುದ್ದಣ್ಣ ಬಯಲು ರಂಗಮಂದಿರದಲ್ಲಿ ಸಂಜೆ ೦೬:೩೦ ಕ್ಕೆ ಪ್ರದರ್ಶನಗೊಳ್ಳಲಿದೆ.

ನಾಟಕದ ರಚನೆ ಅಸಗರ್ ವಜಾಹತ್ ಕನ್ನಡಕ್ಕೆ ಡಾ. ತಿಪ್ಪೇಸ್ವಾಮಿ. ನಾಟಕದ ನಿರ್ದೇಶನ ಮತ್ತು ರಂಗವಿನ್ಯಾಸವನ್ನು ಲಕ್ಷ್ಮಣ ಪೀರಗಾರ ( ನೀನಾಸಂ).ನಾಟಕದ ಪಾತ್ರ ವಿವರ ಸಿಖಂದರ್ ಮಿರ್ಜಾ-ಯೋಗಾನರಸಿಂಹ, ಹಮೀದಾ ಬೇಗಂ-ಸುಜಾತ ಕಸ್ಟೋಡಿಯನ್ ಅಧೀಕ್ಷಕ-ರಾಮಣ್ಣ ಶ್ಯಾವಿ, ಪೈಲ್ವಾನ್-ನಾಗರಾಜನಾಯಕ ಡಿ.ಡೊಳ್ಳಿನ, ಮೌಲ್ವಿ- ಪ್ರಾಣೇಶ ಪೂಜಾರ, ಜಾವೇದ್-ರಮೇಶ ಪೂಜಾರ, ತನ್ನೊ-ಭೂಮಿಕಾ ಶ್ಯಾವಿ, ರತನ್ ತಾಯಿ- ಸುಮತಿ ಕವಿ ನಾಸಿರ್-ದಯಾನಂದ ಸಾಗರ, ಹಿದಾಯತ್ ಹುಸೇನ್-ಮಂಜುನಾಥ ಪೂಜಾರ, ಮಹ್ಮದ್ ಶಾಹ್& ಪೈಲ್ವಾನ್ ಚೇಲಾ ಅನುಯಾಯಿ- ಯೋಗಪ್ಪ. ಬೇಗಂ ಹಿದಾಯತ್- ಸಂಗಮ್ಮ ಮಟ್ಟಿ, ಅಲೀಂ ( ಚಹಾ ವಾಲ್ )-ಮುಕುಂದ ಅಮೀನಗಡ ರಜಾ/ ಅನ್ವರ್/ ಪೈಲ್ವಾನ್ ಅನುಯಾಯಿ ಮಹಾಂತೇಶ, ಕ್ಲರ್ಕ ೨ – ಯಮನೂರಪ್ಪ ಭಜಂತ್ರಿ, ಗಾಯಕರಾಗಿ : ಫಕೀರಪ್ಪ ಗುಳದಳ್ಳಿಕೊಪ್ಪಳದ ಶಿಕ್ಷಕರ ಕಲಾಸಂಘದ ಈ ನಾಟಕವು ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಮತ್ತು ಕರ್ನಾಟಕ ಸರ್ಕಾರಿ ನೌಕರರ ಸಂಘದದ ರಾಜ್ಯಮಟ್ಟದಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದೆ. ನಾಟಕ ಪ್ರದರ್ಶನ ಯಶಸ್ವಿಯಾಗಲೆಂದು ಕೊಪ್ಪಳದ ಸಾಹಿತಿಗಳು, ರಂಗಭೂಮಿ ಪ್ರಿಯರು ಹಾರೈಸಿದ್ದಾರೆ.

Please follow and like us:
error