ರಾಜ್ಯದಲ್ಲಿ ಇಂದು 388 ಮಂದಿಗೆ ಕೊರೋನ ಪಾಸಿಟಿವ್  

ಉಡುಪಿಯಲ್ಲಿ 150, ಕಲಬುರಗಿ ಜಿಲ್ಲೆಯಲ್ಲಿ 100 ಮಂದಿಯಲ್ಲಿ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕಳೆದ  24 ಗಂಟೆಯ ಅವಧಿಯಲ್ಲಿ 388 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 1403 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 2339 ಮಂದಿಯನ್ನು ಆಯಾ ಜಿಲ್ಲಾ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ ಕೋವಿಡ್-19 ಸೋಂಕಿನಿಂದ 52 ಮಂದಿ ಮೃತಪಟ್ಟಿದ್ದಾರೆ .

ಇಂದು ಉಡುಪಿ 150, ಕಲಬುರಗಿ 100, ಬೆಳಗಾವಿ 51, ಬೆಂಗಳೂರು ನಗರ 12,  ರಾಯಚೂರು 16, ಬೀದರ್ 10, ಮಂಡ್ಯ 4, ವಿಜಯಪುರ 4,  ಹಾಸನ 9, ಬಾಗಲಕೋಟೆ 9, ಯಾದಗಿರಿ 5, ದಾವಣಗೆರೆಯಲ್ಲಿ 7 ಮಂದಿ ಸೇರಿದಂತೆ ಒಟ್ಟು 388 ಮಂದಿಯಲ್ಲಿ ಸೋಂಕು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.

 

 

Please follow and like us:
error