ರಾಜಸ್ಥಾನ ರಾಜ್ಯಪಾಲ ಕಲ್ಯಾಣಸಿಂಗ್ ವಜಾ ಮಾಡಲು ಆಗ್ರಹ

ಕೊಪ್ಪಳ, ಮಾ. ೨೫: ಮಾಜಿ ಸಚಿವ, ಸಂಸದ, ರಾಜಸ್ಥಾನ ರಾಜ್ಯಪಾಲ ಕಲ್ಯಾಣ ಸಿಂಗ್‌ಗೆ ಸಾಮಾನ್ಯ ಜ್ಞಾನವೂ ಇಲ್ಲ, ಸಂವಿಧಾನದ ಮೇಲೆ ನಂಬಿಕೆಯೂ ಇಲ್ಲವಾದ್ದರಿಂದ ಅವರನ್ನು ವಜಾ ಮಾಡಬೇಕು ಎಂದು ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೋದಿ ಮತ್ತೊಮ್ಮೆ ಪ್ರದಾನಿ ಆಗಬೇಕು, ನಾವು ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೆ ನೀಡಿರುವದರಿಂದ ಅವರನ್ನು ಕೂಡಲೇ ರಾಷ್ಟ್ರಪತಿಗಳು ವಜಾ ಮಾಡಬೇಕು, ಇಲ್ಲವಾದಲ್ಲಿ ಸುಪ್ರಿಂ ಕೋರ್ಟ್ ಕೂಡಲೇ ಮಧ್ಯಪ್ರವೇಶಿಸಬೆಕು ಎಂದು ಗೊಂಡಬಾಳ ಆಗ್ರಸಿದ್ದಾರೆ. ಅಲ್ಲದೇ ಬಿಜೆಪಿ ಎಲ್ಲಾ ಸಂಸ್ಥೆಗಳನ್ನು ಪೂರ್ಣ ಪ್ರಮಾಣದಲ್ಲಿ ದುರಪಯೋಗ ಪಡಿಸಿಕೊಳ್ಳುತ್ತಿರುವದು, ಈ ದೇಶದ ಬಹುದೊಡ್ಡ ದುರಂತ, ಮೋದಿಯ ಹಿಟ್ಲರ್ ಸಂಸ್ಕೃತಿಯಿಂದ ದೇಶದ ಜನ ಮುಂದೊಂದು ದಿನ ದಂಗೆ ಏಳುತ್ತಾರೆ ಎನ್ನುವದರಲ್ಲಿ ಸಂಶಯವೇ ಇಲ್ಲ. ಯಾವಾಗ ಮತ್ತು ಯಾರ ವಿರುದ್ಧ ಎಂಬುದಕ್ಕೆ ಕಾಲ ಉತ್ತರಿಸುತ್ತದೆ. ಇವತ್ತು ಮೋದಿ ಬಿಜೆಪಿ ಎಂದು ಬಾಯಿಬಡಿದುಕೊಳ್ಳುತ್ತಿರುವವರೇ, ಮುಂದೆ ಅಯ್ಯಯ್ಯೋ ಎಪ್ಪಾ ಎಂದು ಬಾಯಿಬಡಿದುಕೊಳ್ಳುತ್ತಾರೆ. ಜನರು ಕೂಡಲೇ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಹುಲ್ ಆಶ್ವಾಸನೆಗೆ ಸ್ವಾಗತ : ರಾಹುಲ್ ಗಾಂಧಿ ಅವರು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಪ್ರತಿ ವರ್ಷ ಬಡವರ ಖಾತೆಗೆ ತಿಂಗಳು ೬ ಸಾವಿರ ರುಪಾಯಿಗಳಂತೆ ವರ್ಷಕ್ಕೆ ೭೨ ಸಾವಿರ ಗೌರವ ಧನ ಕೊಡುವ ಭರವಸೆಯನ್ನು ಸ್ವಾಗತಿಸಿರುವ ಗೊಂಡಬಾಳ, ಕಾಂಗ್ರೆಸ್ ಹೇಳಿದ್ದನ್ನೇ ಮಾಡುತ್ತದೆ ಎಂದು ಸಹ ತಿಳಿಸಿದ್ದು, ಕಾಂಗ್ರೆಸ್ ಬೆಂಬಲಿಸಿದಲ್ಲಿ ದೇಶ ಮತ್ತು ನಾಡು ಸುಭದ್ರವಾಗಿರುತ್ತದೆ ಎಂದು ತಿಳಿಸಿದ್ದಾರೆ.

Please follow and like us:
error