ರಾಜಶೇಖರ ಹಿಟ್ನಾಳ ಗೆಲವು ಖಚಿತ- ಸಿದ್ದರಾಮಯ್ಯ

ಕೊಪ್ಪಳ : ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಯವ ಕೊನೆಯದಿನಕಾಂಗ್ರೆಸ್‍ ಶಕ್ತಿ ಪ್ರದರ್ಶನ ಮಾಡಿತು. ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಬೃಹತ್‍ ಮೆರವಣಿಗೆ ಹಾಗೂ ರೋಡ್‍ ಶೋ ಮೂಲಕ ನಾಮ ಪತ್ರ ಸಲ್ಲಿಸಿದರು. ಅಲ್ದೇ ನಗರದ ಸಾರ್ವಜನಿಕ ಮೈದಾನದಲ್ಲಿ ಕಾಂಗ್ರೆಸ್‍ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಕಾಂಗ್ರೆಸ್‍ ನ ಹಿರಿಯ ನಾಯಕರು ದಂಡು ಕೊಪ್ಪಳಕ್ಕೆ ಬಂದಿತ್ತು

ದಿನದಿಂದ ದಿನಕ್ಕೆ ಲೋಕಸಭೆ ಚುನಾವಣೆ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿರುವುದರಿಂದ ಇಂದು ಕಾಂಗ್ರೆಸ್‍ ತನ್ನ ಶಕ್ತಿ ಪ್ರದರ್ಶನ ಮಾಡಿತು. ನಗರದ ಸಿರಸಯ್ಯಪ್ಪನ ಮಠದಿಂದ ತೆರದಗಾಡಿಯಲ್ಲಿ ಬೃಹತ್‍ ರೋಡ್‍ ಶೋ ಮಾಡುವ ಮೂಲಕ ಸಾರ್ವಜನಿಕ ಮೈದಾನದಲ್ಲಿ ನಡೆದ ಸಮಾವೇಶದವರೆಗೆ ಸಾಗಿ ಬಂತು. ಮೆರವಣಿಗೆಯಲ್ಲಿ ಮಾಜಿ ಶಾಸಕ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಇ. ತುಕಾರಾಂ, ಮಾಜಿ ಸಂಸದ ಶಿವರಾಮೇಗೌಡ, ಜೆಡಿಎಸ್‍ ಮುಖಂಡ ಪ್ರದೀಪಗೌಡ ಮಾಲೀಪಾಟೀಲ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಭಾಗವಹಿಸಿದ್ದರು. ಸುಮಾರು 35 ಸಾವಿರ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಸೇರಿದ್ದರು. ನಂತರ ಜಿಲ್ಲಾಡಳಿತ ಕಚೇರಿಗೆ ತೆರಳಿದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಮೈತ್ರಿ ಸರಕಾರದ ಸಚಿವ ವೆಂಕಟರಾವ್‍ ನಾಡಗೌಡ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ನಂತರ ಸಮಾವೇಶದ ವೇದಿಕೆ ಕಾರ್ಯಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿ, ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ.ಮುಂದಿನ ಐದು ವರ್ಷಕ್ಕೆ

ಅಧಿಕಾರಿಯನ್ನು ಆಯ್ಕೆ ಮಾಡಬೇಕು. ಯುಪಿಎ ಸರ್ಕಾರ ಬರಬೇಕೆಂದು ಜನರ ಅಭಿಪ್ರಾಯವಿದೆ. ನರೇಂದ್ರ ಮೋದಿ ಭರವಸೆಗಳು ನೀಡಿದ್ರೋ ಅವೆಲ್ಲ ಠುಸ್ ಆಗಿವೆ ನಮ್ಮ‌ಆಡಳಿತದಲ್ಲಿ ೧೬೫ ಭರವಸೆಗಳನ್ನು‌ ನೀಡಿದ್ದೀವಿ. ಆ ಎಲ್ಲಾ ೧೬೫ ಭರವಸೆಗಳನ್ನು ಈಡೇರಿಸಿದ್ದೇವೆ. ಆದ್ರೆ ಮೋದಿ ನೀಡಿದ ಭರವಸೆಗಳಲ್ಲಿ. ಐದು ವರ್ಷದಲ್ಲಿ ಐದು ಪೈಸ್ ಅಕೌಂಟ್ ಗೆ ಬಂದಿಲ್ಲ. ರೈತರಿಗೆ ಸಾಲಮನ್ನಾ ಮಾಡಿ ಅಂದ್ರೆ ನಾನು ಮಾಡಲ್ಲ ಅಂದ್ರು. ನಾನು ಕೈ ಜೋಡಿಸಿ ನಮಸ್ಕಾರ ಮಾಡಿದೆ. ನಮ್ಮಲ್ಲಿ ಬರಗಾಲವಿದೆ ರೈತರು ಸಂಕಷ್ಟದಲ್ಲಿದ್ದಾರೆ.ರೈತರು ಆತ್ಮಹತ್ಯೆಗಳು ಮಾಡಿಕೊಳ್ಳುತ್ತಿದ್ದಾರೆ. ಸಾಲಮನ್ನಾ ದಯವಿಟ್ಟು ಮಾಡಿ ಅಂತ ಬೇಡಿದೆ.ಆ ಮನುಷ್ಯನಿಗೆ ಕರುಣೆ ಬರಲಿಲ್ಲ. ಅಂದು ರಾಜ್ಯದ ಬಿಜೆಪಿಯ ಎಲ್ಲಾ ನಾಯಕರು ಇದ್ರು.ಆದ್ರೆ ಒಬ್ಬ ಗಿರಾಕಿಯೂ ಮೋದಿ ಮುಂದೆ ತುಟಿ ಬಿಚ್ಚಲಿಲ್ಲ ಅಂತ ಬಿಜೆಪಿ ಹಾಗೂ ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೇರಿದ ಜನಸಾಗರೇ ಸಾಕ್ಷಿ ರಾಜಶೇಖರ ಹಿಟ್ನಾಳ ಗೆಲುವು ಖಚಿತ ಎಂದು ಹೇಳಿದರು.

ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗೂಂಡುರಾವ್‍ ಮಾತನಾಡಿ, ಕಾಂಗ್ರೆಸ್‍ ಅಭ್ಯರ್ಥಿ ಗೆಲವು ಖಚಿತ ಅಂತ ಒಂದು ಸಮಾವೇಶ ತೋರಿಸುತ್ತಿದೆ. ಮೋದಿ ಅವರ ಭಾಷಣ ಕೇಳಿ ಮರಳಾಗಿ, ದೇಶವನ್ನು ಅತಿ ಎತ್ತರಕ್ಕೆ ಹೋಯುತ್ತಾರೆ, ಅಭಿವೃದ್ದಿ ಮಾಡುತ್ತಾರೆ ಅಂತ ನಂಬಿದ್ರು. ಐದು ವರ್ಷ ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಅಂತ ಅವರು ಹೇಳಬೇಕು. ಈ ಹಿಂದೆ ಚಾಯ್ ವಾಲ್‍ ಎಂದು ಪ್ರಚಾರ ಮಾಡಿದ್ದರು. ಇಂದು ಚೌಕಿದಾರ್ ಅಂತ ಪ್ರಚಾರ ಮಾಡುತ್ತಿದ್ದಾರೆ. ಚೌಕಿದಾರ್‍ ಮಾಡುವ ಕೆಲಸಗಳ ಬಗ್ಗೆ ನಮ್ಮ ಸರಕಾರ ಬಂದ್ಮೇಲೆ ತಿನಿಖೆ ಮಾಡಿಸುತ್ತೇವೆ ಎಂದರು. ಇನ್ನು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮಾತನಾಡಿ, ನರೇಂದ್ರ ಮೋದಿ ಹಿಂದು ಮತ್ತು ಮುಸ್ಲಿಂರಲ್ಲಿ ದ್ವೇಶ ಬಿತ್ತುವ ಕೆಲಸ ಮಾಡುತ್ತಿದೆ. ಐದು ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ವರ್ಗದವರಿಗೆ ಅಭಿವೃದ್ದಿ ಕೆಲಸ ಮಾಡಿದರು. ಜನರಿಗೆ ಕೆಲಸ ಮಾಡುತ್ತಾರೆ ಅಂತ ಹೊಟ್ಟೆ ಕಿಚ್ಚಿನಿಂದ ಸೋಲಿಸಿದರು. ಯಾಕಂದ್ರೆ ಸಿದ್ದರಾಮ್ಯ ಅವರಿಗೆ ಪ್ರಧಾನಿ ಪಟ್ಟ ನಿಭಾಯಿಸುವ ಶಕ್ತಿ ಇದೆ. ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಎಲ್ಲರೂ ದುಡಿಯೋಣ, ಜಾತ್ಯತೀತ ವ್ಯಕ್ತಿ ಸಿದ್ದರಾಮಯ್ಯ ಅಂತ ಹೇಳಿದರು.

ಇನ್ನು ಸಮಾವೇಶದಲ್ಲಿ ಸೆಂಟರ್ ಆಫ್‍ ಆಟ್ರ್ಯಾಕ್ಷನ್‍ ಕಾಂಗ್ರೆಸ್‍ ಮುಖಂಡ ಸಿಎಂ ಇಬ್ರಾಹಿಂ ಆಗಿದ್ದರು. ಎಂದಿನಂತೆ ತಮ್ಮ ಹಾಸ್ಯಬರಿತ ಭಾಷಣದ ಮೂಲಕ ಮೋದಿ ಸರಕಾರವನ್ನು ಟೀಕಿಸುತ್ತಾ ಜನರನ್ನು ನಗೆಲೋಕಕ್ಕೆ ಕರೆದುಕೊಂಡು ಹೋಗಿದ್ದರು. ಮೋದಿ ನೀ ಹೋದಿ. 56 ನಿನ್ನ ಇಂಚು ನಿನ್ನ ಎದೆಯೊಳಗಡೆ ಇರುವ ಹೃದಯ ಸಿದ್ದರಾಮಯ್ಯನಂತೆ ಇದೇನಾ? ಅಂತ ಟೀಕಿಸಿದರು. ಇನ್ನು ಈಶ್ವರಪ್ಪರನ್ನು ಇಬ್ರಾಹಿಂ, ಮೆದುಳು ನಾಲಿಗೆ ಒಂದೇ ಏನಾ ಮಾತನಾಡುತ್ತಾನೋ ಗೊತ್ತಿಲ್ಲ ಅಂತ ವ್ಯಂಗ್ಯವಾಡಿದರು. ಇನ್ನು ಲೋಕಸಭೆ ಅಭ್ಯರ್ಥಿ ರಾಜಶೇಖರ್‍ ಹಿಟ್ನಾಳ ಮಾತನಾಡಿ, ಇಲ್ಲಿ ಸೇರಿರುವ ನೀವು ತೋರಿಸುವ ಅಭಿಮಾನ ಪ್ರೀತಿ ನೋಡಿದರೆ ನನ್ನ ಗೆಲವು ಖಚಿತ ಅಂತ ಹೇಳಿದ್ರು. ಅಲ್ದೇ ಮೋದಿ ಸರಕಾರ ಈ ದೇಶದಲ್ಲಿ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ ಅಂತ ಟೀಕಿಸಿದರು.ಒಟ್ಟಾರೆ ಕೊಪ್ಪಳದ ಲೋಕಸಭೆ ಚುನಾವಣೆ ಬಿಸಿಲಿನಲ್ಲಿಯೂ ರಂಗೇರುತ್ತಿದೆ. ಸಮಾವೇಶದಲ್ಲಿ ಸೇರಿದ ಜನರು ಅಷ್ಟೊಂದು ಬಿಸಿಲು ಇದ್ದರೂ ಸಮಾವೇಶ ಮುಗಿಯುವವರೆಗೂ ಇದ್ದರು. ಸಮಾವೇಶದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಹೆಚ್‍ ಕೆ ಪಾಟೀಲ್‍, ಮಾಜಿ ಶಾಸಕ ಹಂಪನಗೌಡ ಪಾಟೀಲ್‍, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪೂರ, ಮಾಜಿ ಶಾಸಕ ಶಿವರಾಜ ತಂಗಡಗಿ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿದಂತೆ ಇನ್ನಿತರರ ಕಾಂಗ್ರೆಸ್ ದಂಡು ವೇದಿಕೆ ಮೇಲೆ ಇತ್ತು.

Please follow and like us:
error