ರಾಜಶೇಖರ ಹಿಟ್ನಾಳ್ ಗೆಲುವು ಖಚಿತ- ಶಿವರಾಜ್ ತಂಗಡಗಿ

ಗಂಗಾವತಿ, ಕಾರಟಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕಾರಟಗಿ :

ಕಾರಟಗಿ ಪಟ್ಟಣದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿಯವರ ನಿವಾಸದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕರ್ತರು,ಮುಖಂಡರುಗಳ ಸಭೆಯನ್ನುದ್ದೇಶಿಸಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳರವರು ಮತ್ತು ಮಾಜಿ ಸಚಿವರು ಶಿವರಾಜ ತಂಗಡಗಿ ಯವರು ಮಾತನಾಡಿ ಬಿಜೆಪಿ ಕೇಂದ್ರದಲ್ಲಿ 5 ವರ್ಷ ಶೂನ್ಯ ಅಭಿವೃದ್ಧಿ ಸಾಧಿಸಿದೆ. ಈ ಭಾರಿ ನರೇಂದ್ರ ಮೋದಿಅಲೆಯಿಲ್ಲ. ಹಿಂದಿನ ಚುನಾವಣೆಯಂತೆ ಈ ಭಾರಿಯ ಚುನಾವಣೆಯಲ್ಲಿ ಯುವಕರು ಸೇರಿದಂತೆ ಯಾರೂ ಬಲಿಯಾಗುವುದಿಲ್ಲ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯವರು ಪ್ರಣಾಳಿಕೆಯಲ್ಲಿನ ಯೋಜನೆ ಜಾರಿಗೊಳಿಸದೇ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ . ಶ್ರೀಮಂತರಿಗೆ ಸಹಕರಿಸಿ ಬಡಜನರಿಗೆ ಮೂರುನಾಮಹಾಕಿದ್ದಾರೆ ಎಂದು ಟೀಕಿಸಿದರು . ಈ ಸಲ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆಲುವು ಖಚಿತ ಎಂದರು.

ಈ ಸಂದರ್ಭದಲ್ಲಿ ಜಿ ಪಂ ಅಧ್ಯಕ್ಷರು ವಿಶ್ವನಾಥ ರೆಡ್ಡಿ, ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕರು ಅಂಬಣ್ಣ ನಾಯಕ್, ಜೆಡಿಎಸ್ ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ದೇವೆಗೌಡ ಪೋಲಿಸ್ ಪಾಟೀಲ್, ಯುವ ಕಾಂಗ್ರೆಸ್ ಕೊಪ್ಪಳ ಜಿಲ್ಲಾಧ್ಯಕ್ಷರು ಶರಣಬಸವರಾಜ ರೆಡ್ಡಿ, ಮುಖಂಡರು ಸಿದ್ದಪ್ಪ ನೀರಲೂಟಿ, ರಾಜಶೇಖರಪ್ಪ ಮುಷ್ಟೂರು, ಬಸವರಾಜ ಸ್ವಾಮಿ ಮಳೀಮಠ, ನಾಗರಾಜ ನಂದಾಪೂರ, ಯಮನೂರಪ್ಪ ಸಿಂಗನಾಳ, ಕೊಪ್ಪಳ ನಗರಸಭೆ ಹಿರಿಯ ಸದಸ್ಯರು ಅಮ್ಜದ್ ಪಟೇಲ್, ರುದ್ರೇಶ್ ಡಾಗಿ ಸೇರಿದಂತೆ ಅನೇಕ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಗಂಗಾವತಿ ನಗರದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ನಿವಾಸದಲ್ಲಿ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ, ಜಿಲ್ಲಾಧ್ಯಕ್ಷರು ಶಿವರಾಜ ತಂಗಡಗಿ, ಕೊಪ್ಪಳ ಶಾಸಕರು ಕೆ.ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಮಾಜಿ ಶಾಸಕರು ಹಸನಸಾಬ್ ದೋಟಿಹಾಳ, ಮಾಜಿ ಸಚಿವರು ಇಕ್ಬಾಲ್ ಅನ್ಸಾರಿಯವರು, ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳರವರು ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಜಿ ಪಂ ಅಧ್ಯಕ್ಷರು ವಿಶ್ವನಾಥ ರೆಡ್ಡಿ, ಜಿ ಪಂ ಸದಸ್ಯರು ಅಮರೇಶ ಗೋನಾಳ, ಜಿ ಪಂ ಸದಸ್ಯೆ ಅನಿತಾ ಜಿ.ಮಾರುತಿ, ಜಿ ಪಂ ಮಾಜಿ ಉಪಾಧ್ಯಕ್ಷರು ಲಕ್ಷ್ಮಮ್ಮ ಸಿದ್ಧಪ್ಪ ನೀರಲೂಟಿ, ತಾ ಪಂ ಮಾಜಿ ಅಧ್ಯಕ್ಷರು ವಿರುಪಾಕ್ಷಗೌಡ, ಹಾಲಿ ಅಧ್ಯಕ್ಷರು ಮಲ್ಲಿಕಾರ್ಜುನ ಗೌಡ, ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error