ರಾಜಕೀಯ ಪ್ರವೇಶ ಮತ್ತೆ ನಿರ್ಧಾರ ಮುಂದೂಡಿದ ರಜನಿ

 

ರಾಜಕೀಯ ಪ್ರವೇಶಿಸುವ ಕುರಿತು ನಿರ್ಧಾರ ಶೀಘ್ರ: ರಜನೀಕಾಂತ್

ಚೆನ್ನೈ: ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯೋಜನೆಯ ಕುರಿತು ನನ್ನ ನಿರ್ಧಾರವನ್ನು ಶೀಘ್ರವೇ ಪ್ರಕಟಿಸುತ್ತೇನೆ ಎಂದು ತನ್ನ ಬೆಂಬಲಿಗರನ್ನು ಭೇಟಿಯಾದ ಬಳಿಕ ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನೀಕಾಂತ್ ಸೋಮವಾರ ಹೇಳಿದ್ದಾರೆ. ರಜನೀಕಾಂತ್ ಅವರ ಮಾಲಕತ್ವದ ಚೆನ್ನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರಜನಿ ಮಕ್ಕಳ್ ಮಂದರಮ್‌ನ ಜಿಲ್ಲಾ ಕಾರ್ಯದರ್ಶಿಗಳ ಸಭೆ ನಡೆಸಲಾಗಿದೆ. “ರಾಜ್ಯ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಒಪ್ಪುವುದಾಗಿ ಅವರು ಹೇಳಿದ್ದಾರೆ. ಆದಷ್ಟು ಬೇಗನೆ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ” ಎಂದು 70ರ ಹರೆಯದ ರಜನೀಕಾಂತ್ ಹೇಳಿದ್ದಾರೆ. ತನ್ನ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಚುನಾವಣಾ ರಾಜಕೀಯ ಪ್ರವೇಶ ವಿಳಂಬವಾಗಲಿದೆ ಎಂದು ಕಳೆದ ತಿಂಗಳು ರಜನಿ ಸುಳಿವು ನೀಡಿದ್ದರು.

 

Please follow and like us:
error