ರಸಗೊಬ್ಬರಕ್ಕೆ ಕೇಂದ್ರದಿAದ ಐತಿಹಾಸಿಕ ತೀರ್ಮಾನ : ಸಚಿವ ಬಿ.ಸಿ.ಪಾಟೀಲ್

ಕೇಂದ್ರ ಸರ್ಕಾರ ಕೂಡ ಮಹತ್ವ ನಿರ್ಧಾರ ತೆಗೆದುಕೊಂಡಿದ್ದು, ರಸಗೊಬ್ಬರದ ಬೆಲೆಯನ್ನು ಮೊದಲಿನಂತೆ ನೀಡುತ್ತಿರುವುದು ಪ್ರಧಾನಿ ಮೋದಿಜಿ ಯವರು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ಕೃಷಿಕರಿಗೆ ಕೊರತೆ ಇದೆ ಎಂದು ಕೆಲವರು ಹೇಳುತ್ತದ್ದಾರೆ. ಆದರೆ ಸರ್ಕಾರ ಸಂಕಷ್ಟದ ಕಾಲದಲ್ಲಿ ಪ್ಯಾಕೇಜ್ ಘೋಷಿಸಿದೆ. ಕೃಷಿಕರಿಗೆ, ಹೂ ಬೆಳೆಗಾರರಿಗೆ ಪರಿಹಾರ ನೀಡಲಾಗಿದೆ.  ಸಂಕಷ್ಟದ ಕಾಲದ ಈ ಪ್ಯಾಕೇಜ್ ಅನ್ನು ಸ್ವಾಗತಿಸುವುದಾಗಿ ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇರುವ ಬಗ್ಗೆ ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿ, 300 ಬೆಡ್ ಹೆಚ್ಚಳ, ಆಕ್ಸಿಜನ್ ಹಾಗೂ ಕಂಟೈನರ್ ಗೆ ಕೇಳಿದ್ದೇವೆ.  ಕೊಪ್ಪಳ ಜಿಲ್ಲೆಯಲ್ಲಿ ಬುಧವಾರ 637 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ.  ಪರಿಸ್ಥಿತಿ ನೋಡಿಕೊಂಡು ಕರ್ಪ್ಯೂ ವಿಸ್ತರಣೆ ಮಾಡಲಾಗುವುದು ಎಂದರು.

Please follow and like us:
error