ರಜನಿಕಾಂತ್‌ ಜೊತೆಗೆ, ತಮ್ಮ ಸಿದ್ದಾಂತಗಳು ಹೊಂದಾಣಿಕೆ ಆದರೆ ತಮಿಳುನಾಡಿನ ಒಳಿತಿಗಾಗಿ ಮೈತ್ರಿಗೆ ಸಿದ್ದ -ಕಮಲ್‌ ಹಾಸನ್

ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದು, ಈ ತಿಂಗಳ ಕೊನೆಗೆ ರಾಜಕೀಯ ಪಕ್ಷವನ್ನು ಘೋಷಿಸಲಿರುವ ನಟ ರಜನಿಕಾಂತ್‌ ಜೊತೆಗೆ, ತಮ್ಮ ಸಿದ್ದಾಂತಗಳು ಹೊಂದಾಣಿಕೆ ಆಗುವುದಾದರೆ ತಮಿಳುನಾಡಿನ ಒಳಿತಿಗಾಗಿ ಮೈತ್ರಿಗೆ ಸಿದ್ದ ಎಂದು ನಟ-ರಾಜಕಾರಣಿ ಕಮಲ್‌ ಹಾಸನ್ ಹೇಳಿದ್ದಾರೆ.

2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮ್ಮ ”ಮಕ್ಕಳ್‌ ನೀದಿ ಮಯ್ಯಂ” ಪರವಾಗಿ ಕಮಲ್‌ ಹಾಸನ್ ಪ್ರಚಾರವನ್ನು ಈಗಾಗಲೇ ಆರಂಭಿಸಿದ್ದಾರೆ. ರಜನಿಕಾಂತ್‌ ಈ ತಿಂಗಳ ಕೊನೆಯಲ್ಲಿ ಪಕ್ಷದ ಹೆಸರನ್ನು ಘೋಷಿಸುವುದಾಗಿ ಹೇಳಿದ್ದಾರೆ. ನಿನ್ನೆಯಷ್ಟೇ ಅವರ ಪಕ್ಷದ ಹೆಸರು “ಮಕ್ಕಳ್ ಸೇವೈ ಕಚ್ಚಿ” ಹಾಗೂ ಚಿಹ್ನೆ “ಆಟೋ ರಿಕ್ಷಾ” ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

1967 ರಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿರುವ ತಮಿಳುನಾಡಿನಲ್ಲಿ ಭಾರಿ ಬದಲಾವಣೆ ತರುವುದು ತಮ್ಮ ಉದ್ದೇಶ ಎಂದು ಇಬ್ಬರೂ ನಾಯಕರು ಹೇಳಿಕೊಂಡಿದ್ದಾರೆ. ಈ ಹಿಂದೆಯೆ ನಾಡಿನ ಒಳಿತಿಗಾಗಿ ರಜನಿಕಾಂತ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ದನಿದ್ದೇನೆ ಎಂದು ರಜನಿ ಹೇಳಿಕೊಂಡಿದ್ದರು.

Please follow and like us:
error