fbpx

ರಂಗಭೂಮಿ ಕಲಾತಂಡಗಳಿಗೆ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಲು ಮನವಿ


ಕೊಪ್ಪಳ : ಅ. ೧೧, ಸಮಗದ ಆಶ್ರಮದಲ್ಲಿ ಸುಗಮ ಸಂಗೀತ, ವಾದ್ಯಗೋಷ್ಠಿ ಮತ್ತು ಜಾನಪದದ ಹಾಗೂ ರಂಗಭೂಮಿ ಕಲಾವಿದರು ೨೦ ಲಕ್ಷಕ್ಕು ಹೆಚ್ಚು ಜನರು ಈ ವೃತ್ತಿಯನ್ನು ಬಿಟ್ಟು ಬೇರೆ ಯಾವುದೇ ವೃತ್ತಿಯಲ್ಲಿಯೂ ತೊಡಗಿರುವುದಿಲ್ಲ.
ಈ ಎಲ್ಲಾ ಕಲಾವಿದರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಕೋವಿಡ್-೧೯ ಕೊರೋನಾದಿಂದ ಲಾಕಡೌನಹಾಗಿ ಕಳೆದ ೬ ತಿಂಗಳಿಂದ ನಮ್ಮಗಳ ಜೀವನ ನಡೆಸಲು ಕಷ್ಠವಾಗಿಗೆ ನಮ್ಮ ಕಲಾವಿದರಿಗೆ ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ಅನುದಾನ ಬಂದಿರುವುದಿಲ್ಲ. ಮತ್ತು ನಮ್ಮಗಳ ಕಷ್ಟ ಕೇಳುವವರು ಯಾರು ಇಲ್ಲ. ಮುಂಬರುವ ಗಣೇಶ ಚತುರ್ಥಿ, ದಸರಾ ಹಬ್ಬ, ಕನ್ನಡ ರಾಜೋತ್ಸವ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡದಿದ್ದರೆ ಕಲಾವಿದರ ಜೀವನ ನಡೆಸಲು ಕಷ್ಟವಾಗಿರುತ್ತದೆ. ಈಗಾಗಲೇ ೬ ತಿಂಗಳುಗಳಿಂದ ಕಲಾವಿದರ ಜೀವನ ತುಂಬ ಕಷ್ಟವಾಗಿರುತ್ತದೆ. ಸೌಂಡ ಮಾಲೀಕರು ಮತ್ತು ನೃತ್ಯ ಕಲಾವಿದೆಯರ ಜೀವನ ತುಂಬ ಕಷ್ಟವಾಗಿದೆ. ತುಂಬಾ ನೋವಿನಿಂದ ಕುಟುಂಬವನ್ನು ನಡೆಸುತ್ತಿದ್ದಾರೆ ದಯಮಾಡಿ ನಮ್ಮ ಕಲಾವಿದರ ಕಷ್ಠವನ್ನು ಮಾತೃ ಹೃದಯದಿಂದ ಹರಿತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಬಡ ಕಲಾವಿದರ ಜೀವನ ಉಳಿಸಕೊಡಬೇಕುಂದು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಾಷಾ ಹಿರೇಮನಿ, ಅಕ್ಬರ ಅಲಿ, ಮಾರುತಿ ಬಿನ್ನಾಳ, ಶಿವಪ್ರಸಾದ ಮಠಪತಿ, ರಾಮಚಂದ್ರಪ್ಪ ಉಪ್ಪಾರ, ರಮೇಶ ಭಾಗ್ಯನಗರ, ಸುಧಾ ಮುತ್ತಾಳ, ಪವಿತ್ರ ಹಿರೇಮಠ, ಸ್ನೇಹ ಕೊಪ್ಪಳ ಸೇರಿದಂತೆ ರಂಗಭೂಮಿ, ಜನಪದ, ಸುಗಮ ಸಂಗೀತ ಮತ್ತು ವಾಧ್ಯಗೋಷ್ಠಿ ಕಲಾವಿದರು ಪಾಲ್ಗೊಂಡಿದ್ದರು.

Please follow and like us:
error
error: Content is protected !!