ಕೊಪ್ಪಳ : ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕೊಡಲಾಗುವ ಸಿಜಿಕೆ ರಂಗ ಪುರಸ್ಕಾರಕ್ಕೆ ನಟ,ರಂಗಕರ್ಮಿ, ಸಂಘಟಕ ಗಂಗಾವತಿಯ ಕಾಸಿಂಅಲಿ ಮುದ್ದಾಬಳ್ಳಿ ಆಯ್ಕೆಯಾಗಿದ್ದಾರೆ. ರಂಗಕರ್ಮಿ ದಿ.ಸಿಜಿಕೆಯವರ ಜನ್ಮದಿನದಂದು ( ಜೂನ್ ೨೭) ಪ್ರತಿವರ್ಷ ನೀಡಲಾಗುತ್ತಿದೆ.
ಕನ್ನಡನೆಟ್.ಕಾಂ, ಕವಿಸಮೂಹ, ಬಹುತ್ವ ಭಾರತ ಬಳಗ ಕೊಪ್ಪಳ ಕರ್ನಾಟಕ ಬೀದಿನಾಟಕ ಅಕಾಡೆಮಿ ಬೆಂಗಳೂರು ಆರ್ಟ ಫೌಂಡೇಶನ್ ಸಹಯೋಗದಲ್ಲಿ ಪ್ರತಿವರ್ಷ ಸಿಜಿಕೆ ಬೀದಿ ರಂಗ ದಿನಾಚರಣೆ ಆಚರಿಸಲಾಗುತ್ತಿದ್ದು. ಸಿಜಿಕೆ ಬೀದಿ ರಂಗದಿನಾಚರಣೆ ನಿಮಿತ್ಯ ನೀಡಲಾಗುವ ಸಿಜಿಕೆ ರಂಗಪುರಸ್ಕಾರಕ್ಕೆ ಗಂಗಾವತಿಯ ಪ್ರತಿಭಾವಂತ ರಂಗಕರ್ಮಿ, ನಟ, ಸಂಘಟಕ ಕಾಸಿಂಅಲಿ ಮುದ್ದಾಬಳ್ಳಿ ಆಯ್ಕೆಯಾಗಿದ್ದಾರೆ.
ನಟನಾಗಿ, ರಂಗಕರ್ಮಿಯಾಗಿ, ಸಂಘಟನಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಕಾಸಿಂಅಲಿ ಮುದ್ದಾಬಳ್ಳಿಯವರ ಸೇವೆಯನ್ನು ಪರಿಗಣಿಸಿ ಪ್ರತಿವರ್ಷ ನೀಡಲಾಗುವ ಸಿಜಿಕೆ ರಂಗಪುರಸ್ಕಾರ ಜಿಲ್ಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಜೂನ್ ೨೭ರಂದು ಕೊಪ್ಪಳ ನಗರದ ಬಿ.ಟಿಪಾಲ್ ನಗರದ ಬಹುತ್ವ ಭಾರತ ಬಳಗದ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದು ಕನ್ನಡನೆಟ್.ಕಾಂ, ಕವಿಸಮೂಹ, ಬಹುತ್ವ ಭಾರತ ಬಳಗದ ಸಿರಾಜ್ ಬಿಸರಳ್ಳಿ ಹಾಗೂ ರಾಜಾಬಕ್ಷಿ ಎಚ್.ವಿ. ತಿಳಿಸಿದ್ದಾರೆ
ರಂಗಕರ್ಮಿ,ಸಂಘಟಕ ಕಾಸಿಂಅಲಿ ಮುದ್ದಾಬಳ್ಳಿಯವರಿಗೆ ೨೦೨೦ನೇ ಸಾಲಿನ ಸಿಜಿಕೆ ರಂಗ ಪುರಸ್ಕಾರ
Please follow and like us: