ಯೂರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೋನಾ ವ್ಯಾಕ್ಸಿನ್ ಸಂಶೋಧನಾ ತಂಡದಲ್ಲಿ ಕರ್ನಾಟಕದ ಕುವರ

-ಅರಕಲಗೂಡು ಜಯಕುಮಾರ್

ಕೊರೋನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಹೊತ್ತು ಇದು. ಕೊರೋನಾ ವೈರಸ್ ಸೋಂಕಿನಿಂದ ಏಷ್ಯಾ ಮತ್ತು ಯೂರೋಪ್ ಖಂಡದ ದೇಶಗಳಲ್ಲಿ ಉಂಟಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಪರಿಹಾರ ಕ್ರಮಗಳಿಗೆ ಮುಂದಾಗಿದೆ. ಯೂರೋಪ್ ರಾಷ್ಟ್ರಗಳು ಒಗ್ಗೂಡಿ 10 ತಂಡಗಳನ್ನು ವ್ಯಾಕ್ಸಿನ್ ಸಂಶೋಧಿಸಲು ರಚಿಸಿದೆ. ಹೀಗೆ ರಚಿಸಲ್ಪಟ್ಟ European Task Force for Corona Virus ಟೀಂ ನಲ್ಲಿ ಕನ್ನಡಿಗ ಯುವ ವಿಜ್ಞಾನಿ ಸ್ಥಾನ ಪಡೆದಿದ್ದಾರೆ.

ಹೀಗೆ ಜಾಗತಿಕ ಪ್ರಾಮುಖ್ಯತೆಯ ತಂಡದಲ್ಲಿ ಸ್ಥಾನ ಪಡೆದವರು,   ಅರಕಲಗೂಡಿನ ಹೆಮ್ಮೆಯ ಮಹದೇಶ ಪ್ರಸಾದ್ ಕನ್ನಡ ಮೀಡಿಯಂ ಹುಡುಗ!. ಅರಕಲಗೂಡು ಪಟ್ಟಣದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವಿಜ್ಞಾನ, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಎಸ್ಸಿ ಸ್ನಾತಕ ಪದವಿ , ನಂತರ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ರೀಸರ್ಚರ್ ಆಗಿದ್ದರು ಮಹದೇಶ ಪ್ರಸಾದ್. ನರೇಂದ್ರ ಮೋದಿಯವರು ಮೊದಲ ಭಾರಿಗೆ ಪ್ರಧಾನಿಯಾದ ವರ್ಷದಲ್ಲಿ, ವಿದೇಶಗಳಲ್ಲಿರುವ ವಿಜ್ಞಾನಿಗಳು ದೇಶಕ್ಕೆ ಹಿಂತಿರುಗಿ ಇಲ್ಲಿಯೇ ಸಂಶೋಧನಾ ಕಾರ್ಯ ಆರಂಭಿಸುವ ಮಹತ್ವದ ಯೋಜನೆಯಡಿ ಭಾರತಕ್ಕೆ ಹಿಂದಿರುಗಿದ್ದರು.

ಕಳೆದ ವರ್ಷ Post Doctoral Research Scientist ಆಗಿ Belgium ಗೆ ತೆರಳಿ Linkoping University ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಧ್ಯ ಬೆಲ್ಜಿಯಂ Leuven ನಗರದಲ್ಲಿ ನೆಲೆಸಿದ್ದಾರೆ. ಕೊರೋನಾ ವೈರಸ್ ಸೋಂಕು ಹಬ್ಬುತ್ತಿದ್ದಂತೆ ಜಾಗೃತವಾದ ಯೂರೋಪ್ ರಾಷ್ಟ್ರಗಳು 10 ಸಂಶೋಧನಾ ತಂಡ ರಚಿಸಿದಾಗ, ಲಿಂಕೋಪಿಂಗ್ ಯುನಿವರ್ಸಿಟಿಯ ಕುಲಪತಿಗಳು ಶಿಫಾರಸ್ಸು ಮಾಡಿದ್ದು ತಮ್ಮ ವಿಶ್ವ ವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಯುವ ವಿಜ್ಞಾನಿ, ಕನ್ನಡಿಗ, ಅರಕಲಗೂಡಿನ ಹೆಮ್ಮೆ ಮಹದೇಶ್ ಪ್ರಸಾದ್ ಅವರನ್ನು. ಮಹದೇಶ್ ಪ್ರಸಾದ್ ಒಂದೂವರೆ ತಿಂಗಳಿನಿಂದ ಆ ತಂಡದ ಪ್ರಮುಖರಲ್ಲೊಬ್ಬರಾಗಿ ಸಂಶೋಧನಾ ನಿರತರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ , ಸಂವಹನ ಮಾಧ್ಯಮಗಳಲ್ಲಿ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲಾಗಿದೆ. ಭಾರತದಲ್ಲಿರುವ ಆಯುರ್ವೇದಿಕ್ ಪದ್ದತಿ ಕೊರೋನಾ ನಿವಾರಿಸುತ್ತದೆ. ದನದ ಗಂಜಲ ಕುಡಿದು, ಸೆಗಣಿ ಹಚ್ಚಿಕೊಂಡರೆ ಕೊರೋನಾ ಬಾರದು. ಬೆಳ್ಳುಳ್ಳಿ ಬೇಯಿಸಿ ರಸ ಕುಡಿದರೆ ಕೊರೋನಾ ವೈರಸ್ ದೂರ. ಇತ್ಯಾದಿ ಅಂತೆ ಕಂತೆಗಳಿಗೆ ಉತ್ತರಿಸಿದ ಅವರು ಭಾರತ ಅತೀ ಹೆಚ್ಚು ಜನ ಸಾಂದ್ರತೆ ಇರುವ ದೇಶ. ಕೊರೋನಾ ಅಥವ ಅದೇ ಮಾದರಿಯ ಯಾವುದೇ ಸಾಂಕ್ರಾಮಿಕ ಸೋಂಕು ಅಲ್ಲಿಗೆ ಬರಬಾರದು, ಸ್ವಚ್ಚತೆ ಕಾಯ್ದುಕೊಳ್ಳುವುದು ಮತ್ತು ಮುನ್ನೆಚ್ಚರಿಕೆ ಕ್ರಮ ವಹಿಸ ಬೇಕು. ವಯೋ ವೃದ್ದರನ್ನು ಕೊರೋನಾ ದಂತಹ ಸಾಂಕ್ರಾಮಿಕ ಸೋಂಕು ಬೇಗ ಆಪೋಶನ ತೆಗೆದುಕೊಳ್ಳುತ್ತದೆ. ಜಾಗತಿಕ ವರದಿ ಇದನ್ನೇ ಹೇಳಿದೆ ಎಂದರು.

ಸಧ್ಯ ನಮ್ಮ ಸಂಶೋಧನೆ ನಿರ್ಣಾಯಕ ಘಟ್ಟ ತಲುಪಿದೆ. ಮೊದಲ ಹಂತದ ಯಶಸ್ಸು ಗಳಿಸಿದ್ದೇವೆ. ನಿಖರವಾದ ಪಲಿತಾಂಶಕ್ಕೆ 6 ತಿಂಗಳು ಬೇಕಾಗ ಬಹುದು. ಒಂದೂವರೆ ಎರಡು ವರ್ಷಗಳ ನಂತರ ಹಲವು ಪರೀಕ್ಷೆಗಳಿಗೆ ಒಳಪಟ್ಟು ಅದು ಜಾಗತಿಕ ಮಾನ್ಯತೆ ಪಡೆಯಲಿದೆ. ಅಲ್ಲಿಯವರೆಗೂ ಹುಸಿ ಮಾಹಿತಿಗಳನ್ನು ನಂಬಬೇಡಿ ಎಂದು ಸಲಹೆ ನೀಡಿದರು.

ಮಹದೇಶ್ ಪ್ರಸಾದ್ ಅವರ ತಂಡದ ಸಂಶೋಧನೆ ಯಶಸ್ಸು ಕಾಣಲಿ, ಭಾರತಕ್ಕೆ, ಕನ್ನಡಿಗರ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಲಿ. ನಮ್ಮ  ಹೆಮ್ಮೆಯ ಮಹದೇಶ್ ಪ್ರಸಾದ್ ಗೆ ಶುಭಕೋರೋಣ

Please follow and like us:
error