ಮೌಲಾನಾ ಆಜಾದ್ ಭವನ ಮತ್ತು ಸದ್ಭವನಾ ಮಂಟಪ ಉದ್ಘಾಟನೆ

ಮಕ್ಕಳಿಗೆ 16 ವರ್ಷದವರೆಗೂ ಕಡ್ಡಾಯ ಶಿಕ್ಷಣ ಕೊಡಿಸಿ : ಬಿ.ಸಿ ಪಾಟೀಲ್
ಕೊಪ್ಪಳ,  :  ಯಾವುದೇ ಶಾಲೆ, ಕಾಲೇಜುಗಳಲ್ಲಿ ಗಮನಿಸಿದರೆ ಅಲ್ಪಸಂಖ್ಯಾತರ ಸಮುದಾಯದ ಗಂಡು ಮಕ್ಕಳ ಸಂಖ್ಯೆ ಕಡಿಮೆಯಿದ್ದು, ಈ ನಿಟ್ಟಿನಲ್ಲಿ ಸಮುದಾಯದ ಜನರು ಮಕ್ಕಳಿಗೆ 16 ವರ್ಷದವರೆಗೂ ಕಡ್ಡಾಯ ಶಿಕ್ಷಣ ಕೊಡಿಸಿ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಕರೆ ನೀಡಿದರು. ನಗರದ ಆರ್.ಟಿ.ಓ ಕಚೇರಿಯ ಬಳಿ ಸೋಮವಾರದಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ನಡೆದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಭವನ ಮತ್ತು ಸದ್ಭವನಾ ಮಂಟಪ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಸಿಗಳನ್ನು ಚೂಟದೇ ಬೆಳೆಸಿದಾಗ ಮುಂದೆ ಹೇಗೆ ಫಲಕೊಡುತ್ತದೆಯೋ. ಇದೇ ರೀತಿ ಮಕ್ಕಳಿಗೂ ಶಿಕ್ಷಣ ಕೊಡಿಸಿದಾಗ ನಂತರ ಅವರು ಉದ್ಯೋಗ ಪಡೆಯುತ್ತಾರೆ. ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು ವಿನಃ ಅವರಿಗೆ ಮಕ್ಕಳಿಗೆ ಆಸ್ತಿ ಮಾಡಬೇಡಿ. ಅವರಿಗೆ ಆಸ್ತಿ ಮಾಡಿದರೆ ಸೋ

ಮಾರಿಗಳಾಗುತ್ತಾರೆ ಎಂದು ಪಾಲಕರಿಗೆ ಕಿವಿಮಾತು ಹೇಳಿ, ಯುವಕರು ಕೌಶಾಲಾಭಿವೃದ್ಧಿಗಳಂತ

 

ಕೇಂದ್ರದಲ್ಲಿ ತರಬೇತಿ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು. ಸದ್ಭವನಾ ಮಂಟಪವೆAದರೆ ಒಳ್ಳೆಯ ಭಾವನೆಗಳನ್ನು ಹಂಚಿಕೊಳ್ಳುವ ಮಂಟಪ ಅದನ್ನು ಸದುದ್ದೇಶಕ್ಕೆ ಬಳಸಿಕೊಳ್ಳಿ ಎಂದರು.
ಇವನಾರವ ಇವನಾರವ ಎನ್ನದೇ ಇವ ನಮ್ಮವ ಎಂದು ಹೇಳುತ್ತಾ ಎಲ್ಲರ ಐಕ್ಯತೆ ಕಾಪಾಡಬೇಕು. ನಾವು ಭಾರತೀಯರು, ನಾವೆಲ್ಲಾ ಒಂದೆ ಆಗಿರಬೇಕು. ಪಕ್ಷ ಬದಲಾಗಬಹುದು ಆದರೆ, ವ್ಯಕ್ತಿತ್ವ ಬದಲಾಗುವುದಿಲ್ಲ. ಸರ್ವರಿಗೂ ಕಾಳಜಿಯಿಂದ ಕೆಲಸವನ್ನು ಮಾಡಿಕೊಡುವ ಅಭಿಲಾಷೆಯನ್ನು ಹೊಂದಿದ್ದೇನೆ ಎಂದು ಹೇಳಿದರು.
ಇಲ್ಲಿಯ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಇವತ್ತು ಏರ್ಪಡಿಸಿದ್ದ ಮಾರಾಟ ಮಾಡುವ ಪ್ರದರ್ಶನ ಕಾರ್ಯಕ್ರಮದಲ್ಲಿ ನೋಡಿದಾಗ ಇಲ್ಲಿಯ ರೈತರು ಅಭಿವೃದ್ಧಿಶೀಲರಾಗುತ್ತಿದ್ದಾರೆ ಎಂದು ತಿಳಿಯುತ್ತದೆ. ಮತ್ತು ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ಕೊಪ್ಪ

ಳದ ರೈತರು ಮುಂದುವರೆಯುತ್ತಿದ್ದಾರೆ ಎಂದು ತಿಳಿಯುತ್ತಿದೆ

ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಗಣರಾಜ್ಯೋತ್ಸವ ದಿನದಂದು ಮೌಲಾನಾ ಆಜಾದ್ ಭವನ ಮತ್ತು ಸದ್ಭವನಾ ಮಂಟಪ ಉದ್ಘಾಟನೆಯಾಗುತ್ತಿರುವುದು ಸಂತಸ. ಸ್ವಾತಂತ್ರö್ಯದ ಸಂದರ್ಭದಲ್ಲಿ ಹೋರಾಟ ಮಾಡಿದ ಮೌಲಾನಾ ಆಜಾದ್ ಅವರ ಹೆಸರಲ್ಲಿ ಭವನ ನಿರ್ಮಿಸಿರುವುದು ಅವರಿಗೆ ಸಂದ ಗೌರವ. ಇವರನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕು. ಈ ನಿಟಿನಲ್ಲಿ ಯುವಜನರು ಅಂತವರ ಚರಿತ್ರೆಯನ್ನು ತಿಳಿದಾಗ ಒಳ್ಳೆ ಮಾರ್ಗದಲ್ಲಿ ಬದುಕಬಹ್ಮದು. ಕೌಶಲ್ಯ ಇಲ್ಲವೆಂದರೆ ಬದುಕಲು ಸಾಧ್ಯವಿಲ್ಲ. ಕೌಶಲ್ಯಗಳನ್ನು ತರಬೇತಿ ಪಡೆಯದಿದ್ದರೇ ಯಾವುದೇ ಕೆಲಸಗಳು ಸಿಗುವುದಿಲ್ಲ. ಹಾಗಾಗಿ ಕೌಶಲ್ಯ ತರಬೇತಿ ನೀಡಲು ಈ ಭವನಗಳು ಅನುಕೂಲವಾಗಲಿವೆ. ಇದರಿಂದ ಜೀವನವನ್ನು ಕಟ್ಟಿಕೊಳ್ಳ

ಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಕೆಲವು ವರ್ಷಗಳಿಂದ ನೆರವೇರಬೇಕಿದ್ದ ಈ ಉದ್ಘಾಟನಾ ಕಾರ್ಯಕ್ರಮ ಇವತ್ತು ಕೃಷಿ ಸಚಿವರು ಉದ್ಘಾಟಿಸಿ ನಿಮ್ಮ ಕೈಗೆ ನೀಡಿದ್ದಾರೆ. ಅದನ್ನು ನಿಮ್ಮ ಅಭಿವೃದ್ಧಿಗೆ ಬಳಸಿಕೊಳ್ಳಿ. ಒಂದೇ ಸೂರಿನಡಿ ಮೂರು ಕಚೇರಿಗಳು ವರ್ಗಾವಣೆಗೊಂಡಿವೆ. ಇದರಿಂದ ಸಮಾಜದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ವಸತಿ ಶಾಲೆ, ಗಂಗಾಕಲ್ಯಾಣ, ಭೂ ಒಡೆತನ, ವೈಯಕ್ತಿಕ ಸಾಲ ಸೇರಿದಂತೆ ಇತರೆ ಯೋಜನೆಗಳನ್ನು ನೀಡುತ್ತಿದ್ದು, ಸಾಮಾಜಿಕ, ಆರ್ಥಿಕವಾಗಿ ಉಪಯುಕ್ತವಾಗಿವೆ. ಕೊಪ್ಪಳ ಜಿಲ್ಲೆಯು ಹಿಂದುಳಿದ ಭಾಗವಾಗಿರುವುದರಿಂದ ಶೈಕ್ಷಣಿಕವಾಗಿ ಅನೇಕ ಯೋಜನೆಗಳನ್ನು ಜಾರಿಮಾಡಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುದಾನ ಕಲ್ಪಿಸಬೇಕು. ಅಲ್ಲದೇ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹೆಚ್ಚಿನ ಅನುದಾನ ಕೊಡಿಸುವ ಕಾರ್ಯವಾಗಲಿ. ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಮರ್ಪಕವಾದ ವ್ಯವಸ್ಥೆಯನ್ನು ಹೆಚ್ಚಿನದಾಗಿ ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ರಾಜಶೇಖರ್ ಹಿಟ್ನಾಳ್ ಮಾತನಾಡಿ, ಅಲ್ಪಸಖ್ಯಾತರ ಸಮುದಾಯದಲ್ಲಿ ಬಹಳಷ್ಟು ಶ್ರಮಜೀವಿಗಳು ಇದ್ದೀರಿ. ಆದರೆ, ಶಿಕ್ಷಣದ ಕೊರತೆ ಇದೆ. ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಗಳಲ್ಲಿ ಹಲವು ಶೀಟುಗಳು ಖಾಲಿ ಉಳಿಯುತ್ತಿವೆ ಎನ್ನುವ ಮಾಹಿತಿಗಳು ಈ ಹಿಂದೆ ನನಗೆ ಬಂದಿದ್ದವು. ಒಂದು ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾಜ ಸರ್ವತೋಮುಕ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಬಿ.ಎಚ್.ಎಮ್., ಜಿ.ಪಂ ಉಪಾಧ್ಯಕ್ಷೆ ಬೀನಾ ಗೌಸ್, ಸದಸ್ಯ ಗವಿಸಿದ್ದಪ್ಪ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೀದ್ ಕೆ.ಕರಂಗಿ, ಜಿಲ್ಲಾ ವಕ್ಫ್ ಅಧಿಕಾರಿ ಮಕ್‌ಬುಲ್ ಪಾಷ ಸೇರಿದಂತೆ ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಕಾಟನ್ ಪಾಷಾ, ಮಾನ್ವಿ ಪಾಷಾ, ರಶೀದಸಾಬ ಕುಕನೂರ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರು, ಗುರುರಾಜ ಹಲಗೇರಿ,ಮುತ್ತುರಾಜ್ ಕುಷ್ಟಗಿ ಇದ್ದರು. ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಪ್ರಾಸ್ತಾವಿಕ ಮಾತನಾಡಿದರು. ಸಿ.ವಿ ಜಡಿಯವರ ನಿರೂಪಿಸಿದರು. ಮಹಾಂತೇಶ ಕೋವಿ ವಂದಿಸಿದರು.

 

Please follow and like us:
error