ಮೋದಿ ಸ್ಪರ್ಧಿಸುತ್ತಾರೆಂದರೆ ನಮ್ಮ ಸೌಭಾಗ್ಯ- ಕರಡಿ ಸಂಗಣ್ಣ

ಬೆಂಗಳೂರು. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಪ್ರದಾನಿ ನರೇಂದ್ರ ಮೋದಿಯವರು ಸ್ಪರ್ಧಿಸುತ್ತಾರೆ ಎಂದರೆ ಇದಕ್ಕಿಂತ ಸೌಭಾಗ್ಯ ಬೇರೆ ಇದೆಯಾ ? ಎಂದು ಸಂಸದ ಕರಡಿ ಸಂಗಣ್ಣ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಬಿ.ಎಸ.ಯಡಿಯೂರಪ್ಪ ನವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೋದಿಯವರು ಸ್ಪರ್ಧಿಸಿದರೆ ನಾವೆಲ್ಲಾ ಒಟ್ಟಾಗಿ ಸ್ವಾಗತಿಸುತ್ತೇವೆ. ಟಿಕೇಟ್ ಸಿಗುವ ಬಗ್ಗೆ ಯಾವುದೇ ಟೆನ್ಷನ್ ಇಲ್ಲ. ಕೆಲವು ಕಾರಣಗಳಿಂದ ಟಿಕೇಟ್ ಅನೌನ್ಸ ಆಗಿಲ್ಲ. ಸ್ವಲ್ಪ ವಿಳಂಭವಾಗಿರಬಹುದು . ನಮ್ಮ ಕ್ಷೇತ್ರದ ಜನ ಪುಣ್ಯ ಮಾಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿ.ವಿ.ಚಂದ್ರಶೇಖರ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು ಉಪಸ್ಥಿತಿ ರಿದ್ದರು. ಇವತ್ತು ಸಂಜೆಯೊಳಗೆ ಉಳಿದ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಟಿಕೇಕ್ ಘೋಷಣೆಯಾಗುವ ಸಾಧ್ಯತೆ ಇದೆ.